2024ರ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ, ರಾಜ್ಯದ 8 ಮಂದಿಗೆ ಪದ್ಮಶ್ರೀ, ಒಬ್ಬರಿಗೆ ಪದ್ಮಭೂಷಣ ಗೌರವ!
ಕೇಂದ್ರ ಸರ್ಕಾರ 75ನೇ ಗಣರಾಜ್ಯೋತ್ಸವ ನಿಮಿತ್ತ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ರಾಜ್ಯದ ಸೋಮಣ್ಣ ಹಾಗೂ ಪ್ರೇಮ ಧನರಾಜ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿದೆ.
ನವದೆಹಲಿ (ಜ.25): ಕೇಂದ್ರ ಸರ್ಕಾರವು 2024 ರ ಪದ್ಮ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯದ ಎಂಟು ಮಂದಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಮೈಸೂರು ಮೂಲದ ಆದಿವಾಸಿ ಕಲ್ಯಾಣ ಕಾರ್ಯಕರ್ತ ಸೋಮಣ್ಣ ಹಾಗೂ ಪ್ಲಾಸ್ಟಿಕ್ ಸರ್ಜನ್ ಮತ್ತು ಸಮಾಜ ಸೇವಕಿಯಾಗಿರುವ ಪ್ರೇಮಾ ಧನರಾಜ್ ಅವರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಅದರೊಂದಿಗೆ ದೇಶದ ಮೊಟ್ಟ ಮೊದಲ ಮಹಿಳಾ ಮಾವುತರಾಗಿರುವ ಪ್ರಬತಿ ಬರುವಾ ಅವರಿಗೂ ಈ ಗೌರವ ಸಂದಿದೆ. ರಾಜ್ಯದ ಟೆನಿಸ್ ತಾರೆ ರೋಹನ್ ಬೋಪಣ್ಣ ಕೂಡ ಕ್ರೀಡಾ ವಿಭಾಗದಲ್ಲಿ ಪದ್ಮಶ್ರೀ ಗೌರವ ಪಡೆದಿದ್ದಾರೆ. ರಾಜ್ಯದ ಉದ್ಯಮಿ ಸೀತಾರಾಮ್ ಜಿಂದಾಲ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮುಂದಿನ ಮಾರ್ಚ್/ಏಪ್ರಿಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 132 ಮಂದಿಗೆ ಈ ಬಾರಿ ಪದ್ಮ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ 2 ಕೇಸ್‌ಗಳಲ್ಲಿ ಇಬ್ಬರಿಗೆ ಗೌರವ ನೀಡಲಾಗಿದೆ. 5 ಮಂದಿಗೆ ಪದ್ಮ ವಿಭೂಷಣ, 12 ಪದ್ಮಭೂಷಣ ಹಾಗೂ 110 ಮಂದಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ 30 ಮಂದಿ ಮಹಿಳೆಯರಾಗಿದ್ದರೆ. 8 ಮಂದಿ ವಿದೇಶಿಯರಾಗಿದ್ದಾರೆ. 9 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.
ಈ ವರ್ಷದ ಪದ್ಮ ಪ್ರಶಸ್ತಿ 2024 ವಿಜೇತರ ಸಂಪೂರ್ಣ ಪಟ್ಟಿ
ಪದ್ಮಶ್ರೀ ವಿಜೇತರು (ಬೋಲ್ಡ್ ಅಲ್ಲಿ ಇರುವುದು ಕರ್ನಾಟಕದವರು)
ರೋಹನ್ ಬೋಪಣ್ಣ-ಕ್ರೀಡೆ
ಅನುಪಮಾ ಹೊಸಕೆರೆ-ಕಲೆ
ಶ್ರೀಧರ್ ಮಾಕಂ ಕೃಷ್ಣಮೂರ್ತಿ-ಸಾಹಿತ್ಯ & ಶಿಕ್ಷಣ
ಕೆಎಸ್ ರಾಜಣ್ಣ-ಸೋಶಿಯಲ್ ವರ್ಕ್
ಚಂದ್ರಶೇಖರ್ ಚನ್ನಪಟ್ಟಣ ರಾಜಣ್ಣಾಚಾರ್-ಮೆಡಿಸಿನ್
ಶಶಿ ಸೋನಿ-ಟ್ರೇಡ್ & ಇಂಡಸ್ಟ್ರಿ
ಸೋಮಣ್ಣ - ಮೈಸೂರಿನ ಗಿರಿಜನ ಕಲ್ಯಾಣ ಕಾರ್ಯಕರ್ತ
ಪ್ರೇಮಾ ಧನರಾಜ್ - ಪ್ಲಾಸ್ಟಿಕ್ ಸರ್ಜನ್ ಮತ್ತು ಸಾಮಾಜಿಕ ಕಾರ್ಯಕರ್ತೆ
ಪರ್ಬತಿ ಬರುವಾ - ಭಾರತದ ಮೊದಲ ಮಹಿಳಾ ಮಾವುತ
ಚಾಮಿ ಮುರ್ಮು - ಖ್ಯಾತ ಬುಡಕಟ್ಟು ಪರಿಸರವಾದಿ
ಸಂಗತಂಕಿಮಾ - ಮಿಜೋರಾಂನ ಸಮಾಜ ಸೇವಕ
ಜಾಗೇಶ್ವರ್ ಯಾದವ್ - ಬುಡಕಟ್ಟು ಕಲ್ಯಾಣ ಕಾರ್ಯಕರ್ತ
ಗುರ್ವಿಂದರ್ ಸಿಂಗ್ - ಸಿರ್ಸಾದ ದಿವ್ಯಾಂಗ ಸಾಮಾಜಿಕ ಕಾರ್ಯಕರ್ತ
ಸತ್ಯನಾರಾಯಣ ಬೇಲೇರಿ - ಕಾಸರಗೋಡಿನ ರೈತ
ದುಖು ಮಾಝಿ - ಸಿಂದ್ರಿ ಗ್ರಾಮದ ಬುಡಕಟ್ಟು ಪರಿಸರವಾದಿ
ಕೆ ಚೆಲ್ಲಮ್ಮಾಳ್ - ಅಂಡಮಾನ್‌ನ ಸಾವಯವ ಕೃಷಿಕ
ಹೇಮಚಂದ್ ಮಾಂಝಿ - ನಾರಾಯಣಪುರದ ವೈದ್ಯಕೀಯ ವೈದ್ಯರು
ಯಾನುಂಗ್ ಜಮೊಹ್ ಲೆಗೊ - ಅರುಣಾಚಲ ಪ್ರದೇಶದ ಗಿಡಮೂಲಿಕೆ ಔಷಧಿ ತಜ್ಞ
ಸರ್ಬೇಶ್ವರ್ ಬಸುಮತರಿ - ಚಿರಾಂಗ್‌ನ ಬುಡಕಟ್ಟು ರೈತ
ಉದಯ್ ವಿಶ್ವನಾಥ್ ದೇಶಪಾಂಡೆ - ಅಂತಾರಾಷ್ಟ್ರೀಯ ಮಲ್ಲಕಂಬ ಕೋಚ್
ಯಾಜ್ಡಿ ಮಾನೆಕ್ಷಾ ಇಟಾಲಿಯಾ - ಕುಡಗೋಲು ಕಣ ರಕ್ತಹೀನತೆಯಲ್ಲಿ ಸೂಕ್ಷ್ಮ ಜೀವಶಾಸ್ತ್ರಜ್ಞ ತಜ್ಞ
ಶಾಂತಿ ದೇವಿ ಪಾಸ್ವಾನ್ ಮತ್ತು ಶಿವನ್ ಪಾಸ್ವಾನ್ - ಗಂಡ-ಹೆಂಡತಿ ಜೋಡಿ ಗೋದ್ನಾ ವರ್ಣಚಿತ್ರಕಾರರು
ರತನ್ ಕಹರ್ - ಬದು ಜಾನಪದ ಗಾಯಕ
ಅಶೋಕ್ ಕುಮಾರ್ ಬಿಸ್ವಾಸ್ - ಸಮೃದ್ಧ ಟಿಕುಲಿ ವರ್ಣಚಿತ್ರಕಾರ
ಬಾಲಕೃಷ್ಣನ್ ಸದನಂ ಪುತಿಯಾ ವೀಟಿಲ್ - ಪ್ರತಿಷ್ಠಿತ ಕಲ್ಲುವಾಝಿ ಕಥಕ್ಕಳಿ ನರ್ತಕಿ
ಉಮಾ ಮಹೇಶ್ವರಿ ಡಿ - ಮಹಿಳಾ ಹರಿಕಥಾ ಘಾತಕ
ಗೋಪಿನಾಥ್ ಸ್ವೈನ್ - ಕೃಷ್ಣ ಲೀಲಾ ಗಾಯಕ
ಸ್ಮೃತಿ ರೇಖಾ ಚಕ್ಮಾ - ತ್ರಿಪುರಾದಿಂದ ಚಕ್ಮಾ ಲೋಯಿನ್ಲೂಮ್ ಶಾಲು ನೇಯುವವರು
ಓಂಪ್ರಕಾಶ್ ಶರ್ಮಾ - ಮ್ಯಾಕ್ ರಂಗಭೂಮಿ ಕಲಾವಿದ
ನಾರಾಯಣನ್ ಇ ಪಿ - ಕಣ್ಣೂರಿನ ಹಿರಿಯ ತೆಯ್ಯಂ ಜಾನಪದ ನೃತ್ಯಗಾರ
ಭಗಬತ್ ಪದಾನ್ - ಶಬ್ದ ನೃತ್ಯ ಜಾನಪದ ನೃತ್ಯ ತಜ್ಞ
ಸನಾತನ ರುದ್ರ ಪಾಲ್ - ಪ್ರತಿಷ್ಠಿತ ಶಿಲ್ಪಿ
ಬದ್ರಪ್ಪನ್ ಎಂ - ವಲ್ಲಿ ಓಯಿಲ್ ಕುಮ್ಮಿ ಜಾನಪದ ನೃತ್ಯದ ಪ್ರತಿಪಾದಕ
ಜೋರ್ಡಾನ್ ಲೆಪ್ಚಾ - ಲೆಪ್ಚಾ ಬುಡಕಟ್ಟಿನ ಬಿದಿರಿನ ಕುಶಲಕರ್ಮಿ
ಮಚಿಹನ್ ಸಾಸಾ - ಉಖ್ರುಲ್‌ನಿಂದ ಲಾಂಗ್ಪಿ ಪಾಟರ್
ಗಡ್ಡಂ ಸಮ್ಮಯ್ಯ - ಖ್ಯಾತ ಚಿಂದು ಯಕ್ಷಗಾನ ರಂಗಭೂಮಿ ಕಲಾವಿದ
ಜಂಕಿಲಾಲ್ - ಭಿಲ್ವಾರಾದ ಬೆಹ್ರುಪಿಯಾ ಕಲಾವಿದ
ದಾಸರಿ ಕೊಂಡಪ್ಪ - 3ನೇ ತಲೆಮಾರಿನ ಬುರ್ರ ವೀಣಾವಾದಕರು
ಬಾಬು ರಾಮ್ ಯಾದವ್ - ಹಿತ್ತಾಳೆ ಮರೋರಿ ಕುಶಲಕರ್ಮಿ
ನೇಪಾಳ ಚಂದ್ರ ಸೂತ್ರಧರ್ - 3 ನೇ ತಲೆಮಾರಿನ ಚೌ ಮಾಸ್ಕ್ ತಯಾರಕ
ಪದ್ಮವಿಭೂಷಣ ಪ್ರಶಸ್ತಿ
ವೈಜಯಂತಿ ಬಾಲಿ (ಕಲೆ)-ತಮಿಳುನಾಡು
ಕೆ.ಚಿರಂಜೀವಿ (ಕಲೆ)-ಆಂಧ್ರಪ್ರದೇಶ
ಎಂ.ವೆಂಕಯ್ಯ ನಾಯ್ಡು (ಸಾರ್ವಜನಿಕ ಸೇವೆ)-ಆಂಧ್ರ ಪ್ರದೇಶ
(ಮರಣೋತ್ತರ) ಬಿಂದೇಶ್ವರ ಪಾಠಕ್ (ಸೋಶಿಯಲ್ ವರ್ಕ್)-ಬಿಹಾರ
ಪದ್ಮ ಸುಬ್ರಹ್ಮಣ್ಯಂ(ಕಲೆ)-ತಮಿಳುನಾಡು
ಪದ್ಮಭೂಷಣ ಪ್ರಶಸ್ತಿ (ಕರ್ನಾಟಕ)
ಸೀತಾರಾಮ್ ಜಿಂದಾಲ್-ಟ್ರೇಡ್& ಇಂಡಸ್ಟ್ರಿ-ಕರ್ನಾಟಕ
ಪ್ರೇಮ ಧನರಾಜ್ ಅವರ ಕುರಿತು:
1965ರಲ್ಲಿ ಪ್ರೇಮ ಧನರಾಜ್ ಅವರಿಗೆ 8 ವರ್ಷವಾಗಿದ್ದಾಗ, ಬೆಂಗಳೂರಿನಲ್ಲಿ ಸಂಭವಿಸಿದ ಅವಗಢದಲ್ಲಿ ಅವರ ಮುಖ ಸಂಪೂರ್ಣವಾಗಿ ಸುಟ್ಟುಹೋಗಿತ್ತು. ಮನೆಯ ಅಡುಗೆ ಮನೆಯಲ್ಲಿ ಆಟವಾಡುವ ವೇಳೆ ಸ್ಟವ್ ಸಿಡಿದು ಅಅವರ ಮುಖ, ಕುತ್ತಿಗೆ ಹಾಗೂ ದೇಹ ಸಂಪೂರ್ಣವಾಗಿ ಸುಟ್ಟುಹೋಗಿತ್ತು.ಅಸಾಧ್ಯ ನೋವಿನ ನಡುವೆಯೂ ಅವರು ತಮ್ಮ ಬದುಕುವ ಹೋರಾಟವನ್ನು ಬಿಟ್ಟಿರಲಿಲ್ಲ. ಶೇ. 50ರಷ್ಟು ಸುಟ್ಟ ಗಾಯಗಳಾಗಿದ್ದ ಪ್ರೇಮಾ ಬದುಕುವುದೇ ಅನುಮಾನ ಎಂದು ವೈದ್ಯರು ತಿಳಿಸಿದ್ದರು. ಅಂದಾಜು ಒಂದು ತಿಂಗಳ ಚಿಕಿತ್ಸೆಯ ಬಳಿಕ ಪ್ರೇಮಾ ಅವರನ್ನು ಅವರ ತಂದೆ ಸಿಎಸ್ ಧನರಾಜ್ ಹಾಗೂ ತಾಯಿ ರೋಸಿ ಧನರಾಜ್ ತಮಿಳುನಾಡಿನ ವೆಲ್ಲೂರ್‌ನಲ್ಲಿರುವ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ಸೇರಿಸಿದ್ದರು. 'ಅಂದು ನನ್ನ ತುಟಿಗಳು ಎದೆಗೆ ತಾಕುತ್ತಿದ್ದವು. ನನಗೆ ಮಾತನಾಡಲು, ತಿನ್ನಲು ಆಗುತ್ತಿರಲಿಲ್ಲ. ಮೂರು ಬಾರಿ ನನಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ನನಗೆ ಕುತ್ತಿಗೆಯೇ ಇಲ್ಲದ ಕಾರಣ ಅವರು ನನ್ನನ್ನು ಇಂಟ್ಯೂಬೇಟ್ ಮಾಡಲು ಸಾಧ್ಯವಾಗಲಿಲ್ಲ" ಎಂದು ಡಾ. ಪ್ರೇಮಾ ತಮ್ಮ ಅಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರೇಮಾಗೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಹರಸಾಹಸ ಪಡುತ್ತಿದ್ದರೆ, ಆಕೆಯ ತಾಯಿ ರೋಸಿ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು.
ನನಗೆ ಎರಡನೇ ಜೀವನ ಸಿಕ್ಕರೆ ಅದೇ ಆಸ್ಪತ್ರೆಯಲ್ಲಿ ನನ್ನನ್ನು ವೈದ್ಯನನ್ನಾಗಿ ಮಾಡಿ ಜನರ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಡುತ್ತೇನೆ ಎಂದು ನನ್ನ ತಾಯಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದರು. ನಾಲ್ಕನೇ ಬಾರಿ ನನ್ನನ್ನು ಶಸ್ತ್ರಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು. ಅಂದು 12 ಗಂಟೆಗಳ ಕಾಲ ನನಗೆ ಆಪರೇಷನ್ ನಡೆದಿತ್ತು. ಇಷ್ಟೂ ಸಮಯ ನನ್ನ ತಾಯಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರು. ಶಸ್ತ್ರಚಿಕಿತ್ಸೆ ಮುಗಿಸಿ ನಾನು ಕಣ್ಣು ತೆರೆದಾಗ, ಆಕೆ ಹೇಳಿದ್ದ ಮೊದಲ ಮಾತು, ನಾನು ವೈದ್ಯರಾಗಬೇಕು ಎನ್ನುವುದು ಎಂದು ಪ್ರೇಮಾ ಹೇಳಿದ್ದಾರೆ.
ಸುಧಾಮೂರ್ತಿ, ಎಸ್‌ಎಲ್ ಭೈರಪ್ಪ ಸೇರಿ ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ಮುರ್ಮು!
ಸೋಮಣ್ಣ ಅವರ ಕುರಿತು:
ಹಿಂದುಳಿದ ಜೇನು ಕುರುಬ ಸಮುದಾಯದ ಪರವಾಗಿ ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿರುವ ಬುಡಕಟ್ಟು ಹಕ್ಕುಗಳ ಹೋರಾಟಗಾರ ಸೋಮಣ್ಣ. ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತ ಸೋಮಣ್ಣ ಅವರು 4 ದಶಕಗಳಿಂದ ಜೇನು ಕುರುಬ ಜನಾಂಗದ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ, ಸಮಾಜಕಾರ್ಯ ಕ್ಷೇತ್ರದಲ್ಲಿ ಅವರಿಗೆ ಪದ್ಮಶ್ರೀ ಗೌರವ ನೀಡಲಾಗಿದೆ.
ಪದ್ಮ ಪ್ರಶಸ್ತಿ ಸ್ವೀಕರಿಸುವ ಮೊದಲು ಪ್ರಧಾನಿ ಮೋದಿ ಬಳಿ ತೆರಳಿ ಭಾವುಕರಾದ ಸಿದ್ದಿ ಮಹಿಳೆ ಹೀರಾಬಾಯಿ!