Asianet Suvarna News Asianet Suvarna News

Padma Awards : ಗುಲಾಂ ನಬಿಗೆ ಪದ್ಮ ಪ್ರಶಸ್ತಿ, ಹಿರಿಯ ಕಾಂಗ್ರೆಸಿಗರಲ್ಲೇ ಮುಸುಕಿನ ಗುದ್ದಾಟ!

ಗುಲಾಂ ನಬಿ ಆಜಾದ್ ಗೆ ಪದ್ಮಭೂಷಣ ಗೌರವ
ಕಾಂಗ್ರೆಸ್ ನಲ್ಲಿ ಜೈರಾಮ್ ರಮೇಶ್ ವರ್ಸಸ್ ಕಪಿಲ್ ಸಿಬಲ್ 
ಪ್ರಶಸ್ತಿಯನ್ನು ತಿರಸ್ಕರಿಸಬೇಕು ಎನ್ನುವ ಅಭಿಪ್ರಾಯ ಕೆಲ ಕಾಂಗ್ರೆಸ್ ನಾಯಕರಲ್ಲಿದೆ

Padma Bhushan For Ghulam Nabi Azad and Congress vs Congress Over Padma Honour to Senior Leader san
Author
Bengaluru, First Published Jan 26, 2022, 10:06 PM IST

ನವದೆಹಲಿ (ಜ. 26): ಜಮ್ಮು ಕಾಶ್ಮೀರದ ನಾಯಕ (Jammu and Kashmir) ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಅಜಾದ್ (Ghulam Nabi Azad) ಅವರಿಗೆ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಮಾಡಿದೆ. ಆದರೆ, ಈ ಪ್ರಶಸ್ತಿ ಘೋಷಣೆ ಆಗಿರುವುದು ಕಾಂಗ್ರೆಸ್ ನಲ್ಲಿರುವ ಕೆಲ ನಾಯಕರಿಗೆ ಇಷ್ಟವಾಗಿಲ್ಲ. ಅದರಲಲೂ ಜೈರಾಮ್ ರಮೇಶ್ (Jairam Ramesh), ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ರೀತಿ ಗುಲಾಂ ನಬಿ ಆಜಾದ್  ಕೂಡ ತಮಗೆ ಬಂದಿರುವ ಪ್ರಶಸ್ತಿಯನ್ನು ತಿರಸ್ಕಾರ ಮಾಡಬೇಕು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದರೆ, ಕಪಿಲ್ ಸಿಬಲ್ (Kapil Sibal )ಹಾಗೂ ಶಶಿ ತರೂರ್ (Shashi Tharoor)ಅವರು ಗುಲಾಂ ನಬಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕತ್ವದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗಬೇಕು ಹಾಗೂ ಅದು ಸಾಕ್ಷೀಕರಿಸುವಂತಿರಬೇಕು ಎಂದು ಅಧಿನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಜಿ-23 ನಾಯಕರುಗಳ ಪೈಕಿ ಗುಲಾಂ ನಬಿ ಆಜಾದ್ ಪ್ರಮುಖರಾಗಿದ್ದರು. ಜಿ-23 ನಾಯಕರುಗಳ ಲಿಸ್ಟ್ ನಲ್ಲಿದ್ದ ಕಪಿಲ್ ಸಿಬಲ್, ಆನಂದ್ ಶರ್ಮ ಹಾಗೂ ಶಶಿ ತರೂರ್ ಅವರು ಗುಲಾಂ ನಬಿ ಆಜಾದ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮಾಜಿ ಕೆಂದ್ರ ಸಚಿವ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್ ಗೆ ಅಭಿನಂದನೆ ಸಲ್ಲಿಸಿದ್ದು ಮಾತ್ರವಲ್ಲದೆ, ತಮ್ಮ ಪಕ್ಷದ ನಾಯಕತ್ವದ ವಿರುದ್ಧವೂ ಕಿಡಿಕಾರಿದ್ದಾರೆ. ಸಹೋದರನಿಗೆ ಅಭಿನಂದನೆಗಳು ಸಾರ್ವಜನಿಕ ಜೀವನದಲ್ಲಿ ಗುಲಾಂ ನಬಿ ಆಜಾದ್ ಅವರ ಸೇವೆಯನ್ನು ರಾಷ್ಟ್ರ ಗುರುತಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ಕಾಂಗ್ರೆಸ್ ಗೆ ಮಾತ್ರ ಇವರ ಸೇವೆ ಅಗತ್ಯವಿಲ್ಲ ಎನ್ನುವ ರೀತಿ ಇದೆ ಎಂದು ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
 


ಸಂಸತ್ತಿನ ಪ್ರಜಾಪ್ರಭುತ್ವ ಹಾಗೂ ಸಾರ್ವಜನಿಕ ಸೇವೆಯಲ್ಲಿ ತಮ್ಮ ಜೀವಮಾನ ಪೂರ್ತಿ ಕಳೆದ ಗುಲಾಂ ನಬಿ ಆಜಾದ್ ಅವರಿಗೆ ಅರ್ಹವಾಗಿ ಸಿಕ್ಕಿರುವ ಗೌರವ ಎಂದು ಆನಂದ್ ಶರ್ಮ ಟ್ವೀಟ್ ಮಾಡಿದ್ದಾರೆ. ಅಧಿಕಾರದಲ್ಲಿ ಬೇರೆ ಪಕ್ಷ ಇದ್ದ ನಡುವೆಯೂ ವ್ಯಕ್ತಿಯೊಬ್ಬರ ಸಾರ್ವಜನಿಕ ಸೇವೆಯನ್ನು ಗುರುತಿಸಿರುವುದು ಒಳ್ಳೆಯ ವಿಚಾರ' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಆದರೆ, ಗುಲಾಂ ನಬಿ ಆಜಾದ್ ಗೆ ಪದ್ಮ ಪ್ರಶಸ್ತಿ ಸಿಕ್ಕಿರುವುದು ಕಾಂಗ್ರೆಸ್ ನ ಎಲ್ಲರ ಸಂಭ್ರಮಕ್ಕೂ ಕಾರಣವಾಗಿಲ್ಲ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಬುದ್ಧದೇವ್ ಭಟ್ಟಾಚಾರ್ಯ ಅವರ ಉದಾಹರಣೆಯನ್ನು ನೀಡಿ, "ಈಗ ಮಾಡುವ ಸರಿಯಾದ ಕೆಲಸ ಏನೆಂದರೆ, ಗುಲಾಂ ಆಗಿರುವ ಬದಲು ಆಜಾದ್ ಆಗಿರುವುದು' ಎಂದು ಬುದ್ಧದೇವ್ ಭಟ್ಟಾಚಾರ್ಯ ಅವರ ನಿರ್ಧಾರದ ಟ್ವೀಟ್ ಅನ್ನು ಕೋಟ್ ಟ್ವೀಟ್ ಮಾಡಿದ್ದಾರೆ.

Padma Awards : ಪ್ರಶಸ್ತಿ ಧಿಕ್ಕರಿಸಿದ ಮೂವರು ಬಂಗಾಳಿಗರು, ಹಿಂದೆಯೂ ಆಗಿತ್ತು ಇಂಥ ಘಟನೆಗಳು!
ಅದಲ್ಲದೆ, 1973ರಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಅಧಿಕಾರಿಯಾಗಿ ನಿವೃತ್ತಿಯಾದ ಪಿಎನ್ ಹಕ್ಸರ್ (PN Haksar) ಅವರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಇದಕ್ಕೆ ಅವರು ನೀಡಿದ ಉತ್ತರವನ್ನು ಕೂಡ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಈ ನಡುವೆ ಗುಲಾಂ ನಬಿ ಆಜಾದ್ ತಮ್ಮ ಟ್ವಿಟರ್ ಖಾತೆಯಲ್ಲಿ ತಾವು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಎಂದು ಬಯೋದಲ್ಲಿ ಸೇರಿಸಿಕೊಂಡಿದ್ದಾರೆ ಎನ್ನುವ ರೀತಿಯ ಟ್ವೀಟ್ ಗಳು ಬಂದಿದ್ದವು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ಅವರು. "ಗೊಂದಲ ಸೃಷ್ಟಿಸಲು ಕೆಲವರು ಕಿಡಿಗೇಡಿತನದ ಅಪಪ್ರಚಾರ ಮಾಡುತ್ತಿದ್ದಾರೆ. ನನ್ನ ಟ್ವಿಟರ್ ಪ್ರೊಫೈಲ್‌ಗೆ ಏನನ್ನೂ ತೆಗೆದುಹಾಕಲಾಗಿಲ್ಲ ಅಥವಾ ಸೇರಿಸಲಾಗಿಲ್ಲ. ಪ್ರೊಫೈಲ್ ಮೊದಲಿನಂತೆಯೇ ಇದೆ" ಎಂದು ಟ್ವೀಟ್ ಮಾಡಿದ್ದಾರೆ.

Padma Awards: ಪದ್ಮ ಪ್ರಶಸ್ತಿ ತಿರಸ್ಕರಿಸಿದ ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ!
ಗುಲಾಂ ನಬಿ ಆಜಾದ್ ಐದು ಬಾರಿ ರಾಜ್ಯಸಭಾ ಸಂಸದರಾಗಿದ್ದರೆ, 2 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾದವರು. 2021ರ ಫೆಬ್ರವರಿ 16 ರಂದು ಆಜಾದ್ ಅವರ ರಾಜ್ಯಸಭಾ ಅವಧಿ ಮುಕ್ತಾಯಗೊಂಡಿದ್ದರೆ, ಕಾಂಗ್ರೆಸ್  ಮತ್ತೆ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿರಲಿಲ್ಲ. ಈ ವೇಳೆ ಅವರನ್ನು ರಾಜಸಭೆಯಿಂದ ಅವರನ್ನು ಬೀಳ್ಕೊಡುವ ವೇಳೆ ಮಾತನಾಡಿದ್ದ ಪ್ರಧಾನಿ ಮೋದಿ, "ಕೆಲಸದ ಮೂಲಕ ಗುಲಾಂ ನಬಿ ಆಜಾದ್ ಸ್ಥಾನವನ್ನು ತುಂಬುವುದು ಕಷ್ಟ. ಯಾಕೆಂದರೆ, ಅವರು ಕೇವಲ ತಮ್ಮ ಪಕ್ಷ ಮಾತ್ರವಲ್ಲ ಇಡೀ ದೇಶ ಹಾಗೂ ರಾಜ್ಯಸಭೆಯ ಗೌರವಕ್ಕಾಗಿ ಕೆಲಸ ಮಾಡಿದ್ದರು' ಎಂದು ಹೇಳಿದ್ದರು.

Follow Us:
Download App:
  • android
  • ios