Padma Awards 2025: ಅನಂತ್‌ ನಾಗ್‌ಗೆ ಪದ್ಮಭೂಷಣ, ಎಸ್‌. ಲಕ್ಷ್ಮಿನಾರಾಯಣಗೆ ಪದ್ಮವಿಭೂಷಣ ಪುರಸ್ಕಾರ

2025ರ ಪದ್ಮ ಪ್ರಶಸ್ತಿಗಳಲ್ಲಿ ಕನ್ನಡ ನಟ ಅನಂತ್ ನಾಗ್ ಮತ್ತು ಸಂಗೀತ ದಿಗ್ಗಜ ಸುಬ್ರಮಣಿಯಂ ಲಕ್ಷ್ಮಿನಾರಾಯಣ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆ. ಒಟ್ಟು ಏಳು ಮಂದಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.

Padma Bhushan Actor Anant Nag violinist Padma Vibhushan for Subramaniam Lakshminarayana san

ಬೆಂಗಳೂರು (ಜ.25): ಕನ್ನಡದ ಹೆಸರಾಂತ ನಟ, ಪೋಷಕ ಕಲಾವಿದ ಅನಂತ್‌ ನಾಗ್‌ ಅವರಿಗೆ 2025ರ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರೊಂದಿಗೆ ಕಲೆ ವಿಭಾಗದಲ್ಲಿ ಪಿಟೀಲು ವಾದಕ, ಸಂಯೋಜಕ ಮತ್ತು ಸಂಗೀತ ನಿರ್ದೇಶಕ, ಕರ್ನಾಟಿಕ್‌ ಸಂಗೀತದ ದಿಗ್ಗಜ ಸುಬ್ರಮಣಿಯಂ ಲಕ್ಷ್ಮಿನಾರಾಯಣ ಅವರಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.  ಕೇಂದ್ರ ಸರ್ಕಾರ ಒಟ್ಟು ಏಳು ಮಂದಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತದಲ್ಲಿ ಸುಜುಕಿ ಕಂಪನಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಜುಕಿ ಕಂಪನಿಯ ಮಾಜಿ ಚೇರ್ಮನ್‌ , ಇತ್ತೀಚೆಗೆ ನಿಧನರಾದ ಜಪಾನ್‌ನ ಒಸಾಮು ಸುಜುಕಿ ಅವರಿಗೆ ಪದ್ಮವಿಭೂಷಣದ ಮೂಲಕ ಭಾರತ ಗೌರವ ಸಲ್ಲಿಸಿದೆ. ಪ್ರತಿ ಬಾರಿ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರನ್ನು ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿದ್ದವು. ಅದರಲ್ಲೂ ದಶಕಗಳ ಕಾಲ ಕಲಾಸೇವೆಯಲ್ಲಿದ್ದ ಅನಂತ್‌ ನಾಗ್‌ ಅವರ ವಿಚಾರ ಬಂದಾಗ ಕೇಂದ್ರ ಸರ್ಕಾರ ಅವರಿಗೆ ಸಲ್ಲಬೇಕಾದ ಮನ್ನಣೆ ನೀಡಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದ್ದವು. ಈಗ ಕನ್ನಡಿಗರ ದಶಕಗಳ ಬೇಡಿಕೆಯನ್ನುಕೇಂದ್ರ ಸರ್ಕಾರ ಪೂರೈಸಿದ್ದು, 19 ಮಂದಿ ಪದ್ಮಭೂಷಣ ಪ್ರಶಸ್ತಿ ಪುರಸ್ಕತರಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಅದರಲ್ಲಿ ಅನಂಗ್‌ ಒಬ್ಬರಾಗಿದ್ದಾರೆ. ಪತ್ರಕರ್ತ ಎ.ಸೂರ್ಯ ಪ್ರಕಾಶ್‌ ಅವರಿಗೂ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Padma Awards 2025: ರಾಜ್ಯದ ವೆಂಕಪ್ಪ ಅಂಬಾಜಿ, ಭೀಮವ್ವ, ವಿಜಯಲಕ್ಷ್ಮಿ ದೇಶಮಾನೆಗೆ ಪದ್ಮಶ್ರೀ ಗೌರವ

ತೆಲಂಗಾಣದ ಡಾ.ಡಿ. ನಾಗೇಶ್ವರ್ ರೆಡ್ಡಿ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ, ಚಂಡೀಗಢದ ನಿವೃತ್ತ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಗೆ ಸಾರ್ವಜನಿಕ ವ್ಯವಹಾರಗಳಲ್ಲಿ, ಗುಜರಾತ್‌ನ ಕುಮುದಿನಿ ರಜನೀಕಾಂತ್ ಲಖಿಯಾ ಅವರಿಗೆ ಕಲಾ ಕ್ಷೇತ್ರದಲ್ಲಿ, ಕರ್ನಾಟಕದ ಲಕ್ಷ್ಮೀನಾರಾಯಣ ಸುಬ್ರಮಣ್ಯಂ ಅವರಿಗೆ ಕಲಾ ಕ್ಷೇತ್ರದಲ್ಲಿ. ಕೇರಳದ ಎಂ.ಟಿ. ವಾಸುದೇವನ್ ನಾಯರ್ ಅವರಿಗೆ ಮರಣೋತ್ತರವಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ, ಜಪಾನ್‌ನ ಒಸಾಮು ಸುಜುಕಿ ಅವರಿಗೆ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರದಲ್ಲಿ ಮರಣೋತ್ತರವಾಗಿ, ಬಿಹಾರದ ಶಾರದಾ ಸಿನ್ಹಾ ಅವರಿಗೆ ಕಲಾ ಕ್ಷೇತ್ರದಲ್ಲಿ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮ ಭೂಷಣ ಪಡೆದವರ ಪಟ್ಟಿ

ಹೆಸರು ಕ್ಷೇತ್ರ ರಾಜ್ಯ
ಎ. ಸೂರ್ಯಪ್ರಕಾಶ್ ಸಾಹಿತ್ಯ ಮತ್ತು ಶಿಕ್ಷಣ  ಕರ್ನಾಟಕ
ಅನಂತ ನಾಗ್  ಕಲೆ ಕರ್ನಾಟಕ
ಬಿಬೇಕ್ ದೇಬರಾಯ್ (ಮರಣೋತ್ತರ) ಸಾಹಿತ್ಯ ಮತ್ತು ಶಿಕ್ಷಣ  ದೆಹಲಿ
ಜತಿನ್ ಗೋಸ್ವಾಮಿ  ಕಲೆ ಅಸ್ಸಾಂ
ಜೋಸ್ ಚಾಕೊ ಪೆರಿಯಪ್ಪುರಂ ವೈದ್ಯಕೀಯ ಕೇರಳ
ಮನೋಹರ್ ಜೋಶಿ (ಮರಣೋತ್ತರ) ಸಾರ್ವಜನಿಕ ವ್ಯವಹಾರಗಳು  ಮಹಾರಾಷ್ಟ್ರ
ನಲ್ಲಿ ಕುಪ್ಪುಸ್ವಾಮಿ ಚೆಟ್ಟಿ ವ್ಯಾಪಾರ ಮತ್ತು ಉದ್ಯಮ  ತಮಿಳುನಾಡು
ನಂದಮೂರಿ ಬಾಲಕೃಷ್ಣ ಕಲೆ ಆಂಧ್ರಪ್ರದೇಶ
ಪಿ.ಆರ್. ಶ್ರೀಜೇಶ್ ಕ್ರೀಡೆ ಕೇರಳ
ಪಂಕಜ್ ಪಟೇಲ್ ವ್ಯಾಪಾರ ಮತ್ತು ಉದ್ಯಮ  ಗುಜರಾತ್
ಪಂಕಜ್ ಉಧಾಸ್ (ಮರಣೋತ್ತರ) ಕಲೆ ಮಹಾರಾಷ್ಟ್ರ
ರಾಮ್ ಬಹದ್ದೂರ್ ರಾಯ್  ಸಾಹಿತ್ಯ ಶಿಕ್ಷಣ  ಉತ್ತರ ಪ್ರದೇಶ
ಸಾಧ್ವಿ ಋತಂಭರಾ  ಸಾಮಾಜಿಕ ಕಾರ್ಯ  ಉತ್ತರ ಪ್ರದೇಶ
ಎಸ್. ಅಜಿತ್ ಕುಮಾರ್ ಕಲೆ ತಮಿಳುನಾಡು
ಶೇಖರ್ ಕಪೂರ್  ಕಲೆ ಮಹಾರಾಷ್ಟ್ರ
ಶೋಭನಾ ಚಂದ್ರಕುಮಾರ್  ಕಲೆ ತಮಿಳುನಾಡು
ಸುಶೀಲ್ ಕುಮಾರ್ ಮೋದಿ ಸಾರ್ವಜನಿಕ ವ್ಯವಹಾರಗಳು  ಬಿಹಾರ
ವಿನೋದ್ ಧಾಮ್ ವಿಜ್ಞಾನ ಮತ್ತು ಎಂಜಿನಿಯರಿಂಗ್  ಯುಎಸ್ಎ

 


 

Latest Videos
Follow Us:
Download App:
  • android
  • ios