2020ರ ಏಪ್ರಿಲ್ ನಿಂದ ಈವರೆಗೂ 1.47 ಲಕ್ಷ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆಕೋವಿಡ್-19 ಹಾಗೂ ಇತರ ಕಾರಣಗಳಿಂದಾಗಿ ಪೋಷಕರ ಸಾವುಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸಿದ ಎನ್ ಸಿಪಿಸಿಆರ್
ನವದೆಹಲಿ (ಜ. 16): ದೇಶದಲ್ಲಿ 2020ರ ಏಪ್ರಿಲ್ ನಿಂದ (April 2020) ಈವರೆಗೂ 1, 47, 492 ಮಕ್ಕಳು ಕರೋನಾ (Corona) ಹಾಗೂ ಇತರ ಕಾರಣಗಳಿಂದ ತಮ್ಮ ಪೋಷಕರಲ್ಲಿ ಒಬ್ಬರು ಅಥವಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್ ಸಿಪಿಸಿಆರ್) ಸುಪ್ರೀಂ ಕೋರ್ಟ್ ಗೆ (Supreem Court) ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಇದಲ್ಲಿ 76,508 ಮಂದಿ ಬಾಲಕರಾಗಿದ್ದರೆ, 70,980 ಬಾಲಕಿಯರಾಗಿದ್ದಾರೆ. 4 ತೃತೀಯ ಲಿಂಗಿಗಳ ಮಕ್ಕಳೂ ಇದರಲ್ಲಿ ಸೇರಿದ್ದಾರೆ.
ಬಾಲ ಸ್ವರಾಜ್ ಪೋರ್ಟ್ ಕೋವಿಡ್-ಕೇರ್ ಅಲ್ಲಿ (Baal Swaraj Portal-COVID care) ರಾಜ್ಯಗಳು (States) ಹಾಗೂ ಕೇಂದ್ರಾಡಳಿತ ಪ್ರದೇಶಗಳು (UT) ಒದಗಿಸಿದ ಮಾಹಿತಿಯನ್ನು ಇದು ಒಳಗೊಂಡಿದೆ ಎಂದು ಎನ್ ಸಿಪಿಸಿಆರ್ (National Commission for Protection of Child Rights) ತಿಳಿಸಿದೆ. 2020ರ ಏಪ್ರಿಲ್ ನಿಂದ 2021ರ ಜನವರಿ 11ರವರೆಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ದೇಶದಲ್ಲಿ 10,094 ಮಂದಿ ಮಕ್ಕಳು ಅನಾಥರಾಗಿದ್ದಾರೆ. 1,36,910 ಮಕ್ಕಳು ಪೋಷಕರ ಪೈಕಿ ಒಬ್ಬರನ್ನು ಕಳೆದುಕೊಂಡಿದ್ದಾರೆ. ಇನ್ನು 488 ಮಕ್ಕಳನ್ನು ಅವರ ಪೋಷಕರೇ ತೊರೆದಿದ್ದಾರೆ ಎಂದು ಎನ್ ಸಿಪಿಸಿಆರ್ (NCPCR) ತನ್ನ ವರದಿಯಲ್ಲಿ ತಿಳಿಸಿದೆ. ಈ ಮಕ್ಕಳಲ್ಲಿ, 59,010 ಮಕ್ಕಳು 8 ರಿಂದ 13 ವಯೋಮಾನದವರಾಗಿದ್ದರೆ, 14 ರಿಂದ 15 ವರ್ಷ ವಯಸ್ಸಿನ 22,763 ಮಕ್ಕಳಿದ್ದಾರೆ, 16 ರಿಂದ 18 ವರ್ಷದೊಳಗಿನ 22, 626 ಮಕ್ಕಳಿದ್ದರೆ, 4 ರಿಂದ 7 ವರ್ಷದೊಳಗಿನ 26,080 ಮಕ್ಕಳು ಇದರಲ್ಲಿ ಸೇರಿದ್ದಾರೆ.
ಈ ಮಕ್ಕಳ ಪೈಕಿ1, 25,205 ಮಕ್ಕಳು ತಂದೆ ಅಥವಾ ತಾಯಿಯ ಜೊತೆ ಬದುಕಿದ್ದರೆ, 11, 272 ಮಕ್ಕಳು ಕುಟುಂಬ ಸದಸ್ಯರೊಂದಿಗೆ ಬದುಕಿದ್ದಾರೆ, ಇನ್ನು 8450 ಮಕ್ಕಳು ಬೇರೊಬ್ಬ ಆರೈಕೆದಾರರ ಬಳಿ ಬೆಳೆಯುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು 1529 ಮಕ್ಕಳು ಚಿಲ್ಡ್ರನ್ಸ್ ಹೋಮ್ಸ್, 19 ಮಕ್ಕಳು ಆಶ್ರಯ ಗೃಹದಲ್ಲಿ, ಇಬ್ಬರು ಮಕ್ಕಳ ಅಬ್ಸರ್ವೇಷನ್ ಹೋಮ್ ನಲ್ಲಿ 188 ಮಕ್ಕಳು ಅನಾಥಾಶ್ರಮದಲ್ಲಿ, 66 ಮಕ್ಕಳು ವಿಶೇಷ ದತ್ತು ಸಂಸ್ಥೆಯಲ್ಲಿಹಾಗೂ 39 ಮಕ್ಕಳು ಹಾಸ್ಟೆಲ್ ನಲ್ಲಿ ಆಶ್ರಯ ಕಂಡುಕೊಂಡಿದ್ದಾರೆ.
ಕೊರೋನಾದಿಂದ ಪೋಷಕರನ್ನು ಕಳೆದುಕೊಂಡ 30,000 ಮಕ್ಕಳು!
ಒಡಿಶಾದಲ್ಲಿ ಗರಿಷ್ಠ: ಪೋಷಕರನ್ನು ಕಳೆದುಕೊಂಡ 1.47 ಲಕ್ಷ ಮಕ್ಕಳ ಪೈಕಿ ಒಡಿಶಾದಲ್ಲಿ(Odisha) ಗರಿಷ್ಠ 24,405 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (19,623), ಗುಜರಾತ್ (14,770), ತಮಿಳುನಾಡು (11,014), ಉತ್ತರ ಪ್ರದೇಶ (9247), ಆಂಧ್ರ ಪ್ರದೇಶ (8760), ಮಧ್ಯಪ್ರದೇಶ (7340), ಪಶ್ಚಿಮ ಬಂಗಾಳ (6835), ದೆಹಲಿ (6629) ಹಾಗೂ ರಾಜಸ್ಥಾನ (6827) ನಂತರದ ಸ್ಥಾನಗಳಲ್ಲಿವೆ. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮಕ್ಕಳ ಮೇಲೆ ಅದರ ಪರಿಣಾಮ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರಬೇಕು ಎನ್ನುವ ಕಾರಣಕ್ಕೆ ರಾಜ್ಯ ಆಯೋಗಗಳೊಂದಿಗೆ ಇದರ ಸಿದ್ಧತೆಗಳನ್ನು ಪರಿಶೀಲನೆ ಮಾಡುತ್ತಿರುವುದಾಗಿ ತಿಳಿಸಿದೆ. "ಈ ಸಂದರ್ಭದಲ್ಲಿ, ಎನ್ ಸಿಪಿಸಿಆರ್ ಪ್ರತಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಜ್ಯ ಆಯೋಗಗಳೊಂದಿಗೆ ವರ್ಚುವಲ್ ಸಭೆಗಳನ್ನು ನಡೆಸುತ್ತಿದೆ, ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆಯ ಸಂದರ್ಭದಲ್ಲಿ, ಅದನ್ನು ಎದುರಿಸಲು ಸೂಕ್ತವಾಗಿ ಸಿದ್ಧವಾಗಿರುವಂತೆ ಈ ಸಭೆಯಲ್ಲಿ ತಿಳಿಸಲಾಗುತ್ತಿದೆ' ಎಂದು ಎನ್ ಸಿಪಿಸಿಆರ್ ತಿಳಿಸಿದೆ.
