* ದೇಶದಲ್ಲಿ ಕೊರೋನಾ ಹಾವಳಿ* ಕೊರೋ​ನಾ​ದಿಂದ ಪೋಷ​ಕ​ರನ್ನು ಕಳೆ​ದು​ಕೊಂಡ 30,000 ಮಕ್ಕ​ಳು* 2020ರ ಏಪ್ರಿಲ್‌ 1ರಿಂದ 2021ರ ಜೂ.5ರವರೆಗೆ ಕೊರೋನಾ ಹಾಗೂ ಇನ್ನಿತರ ಕಾರಣಗಳಿಂದ ಹೆತ್ತವರ ಕಳೆದುಕೊಂಡ ಮಕ್ಕಳು

ನವದೆಹಲಿ(ಜೂ.08): ಕೊರೋನಾ ಕಾರ​ಣ​ದಿಂದಾಗಿ ದೇಶ​ದಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳು ತಮ್ಮ ಪೋಷ​ಕ​ರನ್ನು ಕಳೆ​ದು​ಕೊಂಡಿ​ದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ(ಎನ್‌ಸಿಪಿಸಿಆರ್‌) ಮಾಹಿತಿ ನೀಡಿ​ದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ, ‘2020ರ ಏಪ್ರಿಲ್‌ 1ರಿಂದ 2021ರ ಜೂ.5ರವರೆಗೆ ಕೊರೋನಾ ಹಾಗೂ ಇನ್ನಿತರ ಕಾರಣಗಳಿಂದ ತಂದೆ ಅಥವಾ ತಾಯಿ, ಪೋಷಕರು ಹಾಗೂ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಕುರಿತಾದ ಮಾಹಿತಿಯನ್ನು ಸಂಗ್ರ​ಹಿಸಿ ಬಾಲ ಸ್ವರಾಜ್‌ ಪೋರ್ಟಲ್‌ನಲ್ಲಿ ಅಪ್ಲೋಡ್‌ ಮಾಡಿವೆ. ಈ ವರ​ದಿಯ ಪ್ರಕಾರ 26,176 ಮಕ್ಕಳು ತಂದೆ ಅಥವಾ ತಾಯಿ​ಯನ್ನು ಕಳೆ​ದು​ಕೊಂಡಿ​ದ್ದಾರೆ.

3,621 ಮಕ್ಕಳು ಪೋಷ​ಕ​ರನ್ನು ಕೆಳೆದು​ಕೊಂಡು ಅನಾ​ಥ​ರಾ​ಗಿ​ದ್ದಾ​ರೆ. 274 ಮಕ್ಕಳು ಕುಟುಂಬ​ದಿಂದ ದೂರ​ವಾಗಿ​ದ್ದಾರೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಕೊರೋನಾದಿಂದಾಗಿ 7084 ಮಕ್ಕಳು ತಂದೆ ಅಥವಾ ತಾಯಿ​ಯನ್ನು ಕಳೆ​ದು​ಕೊಂಡಿದ್ದು, 217 ಮಂದಿ ಅನಾ​ಥ​ರಾ​ಗಿ​ದ್ದಾರೆ ಎಂದು ವರ​ದಿ​ಯಲ್ಲಿ ತಿಳಿ​ಸ​ಲಾ​ಗಿದೆ.