Asianet Suvarna News Asianet Suvarna News

ಮಹಾರಾಷ್ಟ್ರದಲ್ಲಿ ಗೂಡ್ಸ್, ಪ್ಯಾಸೆಂಜರ್‌ ರೈಲು ಡಿಕ್ಕಿ: 50 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮಹಾರಾಷ್ಟ್ರದ ಗೋಂಡಿಯಾದಲ್ಲಿ ನಸುಕಿನ ಜಾವ 2.30 ರ ವೇಳೆಗೆ ಗೂಡ್ಸ್‌ ರೈಲು ಹಾಗೂ ಪ್ಯಾಸೆಂಜರ್‌ ರೈಲು ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. 

over 50 injured in collission between goods and passenger train in maharashtra gondia ash
Author
Bangalore, First Published Aug 17, 2022, 5:18 PM IST

ದೇಶದಲ್ಲಿಂದು ಮತ್ತೊಂದು ರೈಲು ದುರಂತ ಸಂಭವಿಸಿದೆ. ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ ಪ್ಯಾಸೆಂಜರ್‌ ರೈಲು ಹಾಗೂ ಗೂಡ್ಸ್‌ ರೈಲು ಪರಸ್ಪರ ಡಿಕ್ಕಿಯಾಗಿದ್ದು, ಈ ಹಿನ್ನೆಲೆ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತಕ್ಕೆ ಪ್ಯಾಸೆಂಜರ್‌ ರೈಲಿನ ಮೂರು ಬೋಗಿಗಳು ಹಳಿ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. 
 
ಮಹಾರಾಷ್ಟ್ರದ ಗೋಂಡಿಯಾದಲ್ಲಿ ಬುಧವಾರ ನಸುಕಿನ ಜಾವ 2.30ರ ವೇಳೆಗೆ ಪ್ಯಾಸೆಂಜರ್‌ ರೈಲು ಹಾಗೂ ಗೂಡ್ಸ್‌ ರೈಲು ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಅಪಘಾತವಾಗಿದೆ. ಈ ಹಿನ್ನೆಲೆ ಪ್ರಯಾಣಿಕ ರೈಲಿನಲ್ಲಿದ್ದ 3 ಬೋಗಿಗಳು ಹಳಿ ತಪ್ಪಿದ್ದು, ಈ ಘಟನೆಯಲ್ಲಿ 50 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ, ಅದೃಷ್ಟವಶಾತ್‌ ಈ ಅಪಘಾತದಲ್ಲಿ ಯಾರೂ ಪ್ರಾಣ ಕಳೆದುಕೊಂಡಿಲ್ಲ ಎಂದು ತಿಳಿದುಬಂದಿದೆ.

ಕೋಲಾರ: ಮುಳಬಾಗಿಲು ಬಳಿ ಖಾಸಗಿ ಬಸ್‌ ಪಲ್ಟಿ, ಇಬ್ಬರ ಸಾವು
 
ಹಳಿ ತಪ್ಪಿದ ಪ್ಯಾಸೆಂಜರ್‌ ರೈಲು ಛತ್ತೀಸ್‌ಗಢದ ಬಿಲಾಸ್ಪುರದಿಂದ ರಾಜಸ್ಥಾನದ ಜೋಧಪುರಕ್ಕೆ ತೆರಳುತ್ತಿತ್ತು. ಇನ್ನು, ಸಿಗ್ನಲ್‌ ನೀಡುವಲ್ಲಿ ಉಂಟಾದ ಎಡವಟ್ಟಿನಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಪ್ರಯಾಣಿಕ ರೈಲಿನ ಲೋಕೋಪೈಲಟ್‌ ಎಮರ್ಜೆನ್ಸಿ ಬ್ರೇಕ್‌ ಅನ್ನು ಹಾಕಿದರೂ ಗೂಡ್ಸ್‌ ರೈಲಿನ ಜತೆ ಡಿಕ್ಕಿಯಾಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದೂ ಹೇಳಲಾಗಿದೆ. ಆದರೆ, ಬೆಳಗ್ಗಿನ ಜಾವ 4: 30 ರ ವೇಳೆಗೆ ಹಳಿ ತಪ್ಪಿದ ರೈಲಿನ ಬೋಗಿಗಳನ್ನು ಸರಿ ಪಡಿಸಲಾಗಿದೆ. ನಂತರ, ಅಪಘಾತ ನಡೆದ ಸ್ಥಳದಿಂದ ಬೆಳಗ್ಗೆ 5: 24 ರ ವೇಳೆಗೆ ಹೊರಟಿತು ಹಾಗೂ 5:44ಕ್ಕೆ ಗೋಂಡಿಯಾ ರೈಲು ನಿಲ್ದಾಣವನ್ನು ಅಪಘಾತಕ್ಕೊಳಗಾದ ಪ್ರಯಾಣಿಕ ರೈಲು ತೆರಳಿತು ಎಂದೂ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಹಾಗೂ 5: 45 ರ ವೇಳೆಗೆ ಅಪ್‌ ಹಾಗೂ ಡೌನ್‌ ಟ್ರಾಫಿಕ್‌ ಪುನಾರಂಭವಾಯಿತು ಎಂದೂ ರೈಲ್ವೆ ಇಲಾಖೆ ತಿಳಿಸಿದೆ.

ಎಕ್ಸ್‌ಪ್ರೆಸ್‌ ರೈಲಿನ 4 ಟೈರ್‌ಗಳು ಟ್ರ್ಯಾಕ್‌ನಿಂದ ಹೊರಕ್ಕೆ ಬಂದು ಈ ಅಪಘಾತವಾಗಿದ್ದು, ಯಾವ ಪ್ರಯಾಣಿಕರಿಗೂ ಗಂಭೀರ ಗಾಯಗಳಾಗಿಲ್ಲ ಎಂದೂ ರೈಲ್ವೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ರೈಲ್ವೆ ಸುರಕ್ಷತಾ ಆಯುಕ್ತ ಈ ಅಪಘಾತ ಸಂಬಂಧ ತನಿಖೆ ನಡೆಸಲಿದೆ ಎಂದೂ ಹೇಳಿದ್ದಾರೆ.
 
ಹರ್ಯಾಣದ ಗುರುಗ್ರಾಮದಲ್ಲಿ ರೈಲಿಗೆ ತಗುಲಿ ಮೂವರ ಸಾವು
ಇನ್ನೊಂದೆಡೆ, ಹರ್ಯಾಣದ ಗುರುಗ್ರಾಮದಲ್ಲಿ ರೈಲ್ವೆ ಟ್ರ್ಯಾಕ್‌ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮೂವರು ಗೆಳೆಯರಿಗೆ ರೈಲು ಡಿಕ್ಕಿ ಹೊಡೆದು ಅವರು ಮೃತಪಟ್ಟಿರುವ ಘಟನೆಯೂ ನಡೆದಿದೆ. ಈ ಮೂವರನ್ನು ಆದಿಲ್‌, ಫೈಜಾನ್‌ ಹಾಗೂ ಸಾಹುಲ್‌ ಎಂದು ಗುರುತಿಸಲಾಗಿದ್ದು, ಈ ಮೂವರೂ ಸಹ 18 ರಿಂದ 23 ವರ್ಷ ವಯಸ್ಸಿನೊಳಗಿನವರು ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು, ಒಂದು ರೈಲ್ವೆ ಹಳಿಯ ಮೇಲೆ ಇವರು ನಡೆದುಕೊಂಡು ಹೋಗುತ್ತಿದ್ದರು. ಆ ವೇಳೆ ಆ ಹಳಿಯಲ್ಲಿ ಡಬ್ಬಲ್‌ ಡೆಕ್ಕರ್‌ ರೈಲು ಬರುತ್ತಿರುವುದನ್ನು ನೋಡಿ ಮತ್ತೊಂದು ಹಳಿಗೆ ಹೋದರು. ಆದರೆ, ಆ ಹಳಿಯಲ್ಲಿ ರೆವಾರಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಡೀಸೆಲ್‌ ಮಲ್ಟಿಪಲ್‌ ಯುನಿಟ್ ರೈಲು ಬಂದು ಅವರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೂವರೂ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

 

37 ITBP ಸೈನಿಕರು, ಇಬ್ಬರು ಕಾಶ್ಮೀರ ಪೊಲೀಸರು ತೆರಳುತ್ತಿದ್ದ ವಾಹನ ಅಪಘಾತ: 6 ಸೈನಿಕರ ಸಾವು


ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ದೆಹಲಿ - ರೆವಾರಿ ರೈಲು ಮಾರ್ಗದಲ್ಲಿ ಹಿರಿಯ ಮಹಿಳೆಯೊಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ಧನವಾಸ್‌ ಬಳಿ ರೈಲೊಂದಕ್ಕೆ ಡಿಕ್ಕಿ ಹೊಡೆದು 62 ವರ್ಷದ ಕಮಲಾದೇವಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ಆ ಮಹಿಳೆ ರೈಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಕಮಲಾದೇವಿಯ ಸಂಬಂಧಿಕರು ಹೇಳಿಕೊಂಡಿದ್ದಾರೆ ಎಂದೂ ವರದಿಯಾಗಿದೆ. 

Follow Us:
Download App:
  • android
  • ios