ITBP bus accident: ಇಂಡೋ ಟಿಬೇಟ್‌ ಬಾರ್ಡರ್‌ ಪೊಲೀಸ್‌ ಮತ್ತು ಇಬ್ಬರು ಜಮ್ಮು ಕಾಶ್ಮೀರ ಸೈನಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ ಅಪಘಾತವಾಗಿದ್ದು ಪ್ರಪಾತಕ್ಕೆ ಉರಳಿದೆ. ಬಸ್‌ ಬ್ರೇಕ್‌ ಫೇಲ್ಯೂರ್‌ ಆಗಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಕಾಶ್ಮೀರ: 37 ಇಂಡೋ ಟಿಬೇಟ್‌ ಬಾರ್ಡರ್‌ ಪೊಲೀಸ್‌ ಮತ್ತು ಇಬ್ಬರು ಜಮ್ಮು ಕಾಶ್ಮೀರ ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್‌ ಪ್ರಪಾತಕ್ಕೆ ಉರುಳಿದ್ದು, ಆರು ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಚಂದನ್ವಾರಿಯಿಂದ ಪಹಲ್ಮಾಮ್‌ಗೆ ತೆರಳುತ್ತಿದ್ದಾಗ ಬಸ್‌ನ ಬ್ರೇಕ್‌ ಫೇಲ್‌ ಆಗಿದ್ದು, ನಿಯಂತ್ರಣಕ್ಕೆ ಸಿಗದೇ ನದಿ ತಟೆಯತ್ತ ಬಸ್‌ ಉರುಳಿದೆ ಎನ್ನಲಾಗಿದೆ. ಸೈನಿಕರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಆರು ಸೈನಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದವರನ್ನು ಹೆಲಿಕಾಪ್ಟರ್‌ ಮೂಲಕ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ. 

Scroll to load tweet…

ಈ ಬಗ್ಗೆ ಎಎನ್‌ಐ ಕೂಡ ಟ್ವೀಟ್‌ ಮಾಡಿದ್ದು ಘಟನೆಯ ಮಾಹಿತಿ ನೀಡಿದೆ. ಘಟನೆಯ ಬಳಿಕ ಐಟಿಬಿಪಿ ಸಿಬ್ಬಂದಿಗಳನ್ನು ಶ್ರೀನಗರ ಸೇನಾ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗುತ್ತಿದೆ ಎಂದು ಎಎನ್‌ಐ ಮಾಹಿತಿ ನೀಡಿದೆ.

ಈ ಎಲ್ಲಾ ಯೋಧರೂ ಅಮರನಾಥ ಯಾತ್ರಾ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿತ್ತು. ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್‌ನ ಬ್ರೇಕ್‌ ಫೇಲ್‌ ಆದ ನಂತರ ರಸ್ತೆ ಬದಿಯ ನದಿಯ ದಂಡೆಗೆ ಬಸ್‌ ಬಿದ್ದಿದೆ. 

"ಚಂದನ್ವಾರಿ ಮತ್ತು ಪಹಲ್ಗಾಮ್‌ ನಡುವೆ ರಸ್ತೆ ಅಪಘಾತವಾಗಿದ್ದು, ಆರು ಐಟಿಬಿಪಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅನಂತ್‌ನಾಗ್‌ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಹಲವಾರು ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಎಲ್ಲರನ್ನೂ ಸೇನಾ ಆಸ್ಪತ್ರೆಗೆ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು," ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: ಶ್ರೀನಗರದಲ್ಲಿ ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ್‌ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ

ಇನ್ನಷ್ಟು ಮಾಹಿತಿ ನಿರೀಕ್ಷಿಸಿ...