ಮುಂಬೈ ನಗರಕ್ಕೆ ಪಿಂಕ್‌ ಬಣ್ಣ ಬಳಿದ ಸಾವಿರಾರು ಫ್ಲೆಮಿಂಗೊಗಳು

First Published 5, May 2020, 4:06 PM

COVID-19 ಹರಡುವುದನ್ನು ತಡೆಯಲು ಭಾರತದಲ್ಲೂ ಲಾಕ್‌ಡೌನ್ ಜಾರಿಯಲ್ಲಿದೆ. ಕಡಿಮೆಯಾಗಿರುವ ಮನುಷ್ಯರ ಸಂಚಾರ, ಮಾಲಿನ್ಯಗಳಿಂದ ಪರಿಸರ ಸ್ವಚ್ಛಗೊಳ್ಳುತ್ತಿದೆ. ಪ್ರಾಣಿ ಪಕ್ಷಿಗಳು ನಿರ್ಭಯವಾಗಿ ಜನ ಓಡಾಡುವ ಸ್ಥಳಗಳಲ್ಲಿ ಓಡಾಡುವ ಹಾಗಾಗಿದೆ. ಕಾಡಿನಲ್ಲಿರುವ ಪ್ರಾಣಿಗಳು ಖಾಲಿಯಾಗಿರುವ ನಗರಗಳಿಗೆ ಭೇಟಿ ನೀಡುತ್ತಿರುವ ಫೋಟೋ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಈ ಕೊರೋನಾ ವೈರಸ್‌ ಲಾಕ್‌ಡೌನ್‌ ಮಧ್ಯೆ ಸಾವಿರಾರು ಫ್ಲೆಮಿಂಗೊಗಳು ಇಡೀ ಮುಂಬೈ ನಗರವನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಿದೆ. ಸಾವಿರಾರು ಫ್ಲೆಮಿಂಗೊಗಳು ಮುಂಬೈನ  ಸಮುದ್ರವನ್ನು ಪಿಂಕ್‌ ಪೈಂಟ್‌ ಮಾಡಿರುವಂತೆ ಕಾಣುತ್ತಿರುವ ಪೋಟೋಗಳು ಸಖತ್‌ ವೈರಲ್‌ ಆಗಿ ಜನರ ಮೆಚ್ಚಿಗೆ ಗಳಿಸಿದೆ.

ಮನುಷ್ಯರ ಅತಿಕ್ರಮಣ ಕಡಿಮೆಯಾಗಿರುವ ಕಾರಣದಿಂದ ಅಧಿಕ ಸಂಖ್ಯೆಯಲ್ಲಿ ಪಕ್ಷಿಗಳು ವಾಣಿಜ್ಯ ನಗರಿ ಮುಂಬೈಗೆ ವಲಸೆ ಬರುತ್ತಿವೆ ಈ ಬಾರಿ.

ಕೊರೋನಾ ವೈರಸ್ ಲಾಕ್‌ಡೌನ್ ಮಧ್ಯೆ ಸಾವಿರಾರು ಫ್ಲೆಮಿಂಗೊಗಳು ಮುಂಬೈ ನಗರವನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಿವೆ.

ಸಾವಿರಾರು ಫ್ಲೆಮಿಂಗೊಗಳು ಉದ್ದಕ್ಕೂ ಬಂದಿಳಿದು ನವೀ ಮುಂಬಯಿಯ ನಿವಾಸಿಗಳನ್ನು ಬೆರಗುಗೊಳಿಸಿದೆ.

ಲಾಕ್‌ಡೌನ್‌ನಿಂದಾಗಿ ಕಡಿಮೆಯಾಗಿರುವ ಮನುಷ್ಯರ ಸಂಚಾರ ಮತ್ತು ಮಾಲಿನ್ಯಗಳಿಂದ ಪರಿಸರ ಸ್ವಚ್ಛಗೊಳುತ್ತಿದೆ.

ಇತ್ತೀಚಿನ ವಾರಗಳಲ್ಲಿ ಸಾವಿರಾರು ಪಕ್ಷಿಗಳು ರಾಷ್ಟ್ರದ ಅತಿದೊಡ್ಡ ನಗರವಾದ ಮುಂಬೈಗೆ ಇಳಿದಿವೆ.

ಮುಂಬೈಯ ಈ ದೃಶ್ಯ ಕಣ್ಣಿಗೆ ಹಬ್ಬ.

ಮುಂಬೈಯ ಈ ದೃಶ್ಯ ಕಣ್ಣಿಗೆ ಹಬ್ಬ.

ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಫ್ಲೆಮಿಂಗೊಗಳು ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ತಮ್ಮ ಆಹಾರ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ ವಲಸೆ ಬರುತ್ತವೆ. ಈಗ ಮನುಷ್ಯರ ಓಡಾಟ ಕಡಿಮೆ ಆಗಿರುವುದರಿಂದ ನಗರದಲ್ಲಿ ಹೆಚ್ಚು ಸ್ಥಳದ ಲಭ್ಯವಿರುವ ಕಾರಣದಿಂದಾಗಿ ಈ ವರ್ಷ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಸಾಧಾರಣವಾಗಿ ಹೆಚ್ಚಿನ ಸಂಖ್ಯೆಯ ಪಕ್ಷಿಗಳನ್ನು ನೋಡಿದ್ದಾರೆಂದು ವರದಿ ಮಾಡಿದ್ದಾರೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಪ್ರಕಾರ, ಕಳೆದ ವರ್ಷ 1.2 ಲಕ್ಷ ಪಕ್ಷಿಗಳು ಭೇಟಿ ನೀಡಿದ್ದು  ಫ್ಲೆಮಿಂಗೊ ​​ವಲಸೆಯಲ್ಲಿ 25% ಹೆಚ್ಚಳವಾಗಿದೆ. ಈ ವರ್ಷ, ಏಪ್ರಿಲ್ ಮೊದಲ ವಾರದಲ್ಲಿ 1.5 ಲಕ್ಷಕ್ಕೂ ಹೆಚ್ಚು ಪಕ್ಷಿಗಳನ್ನು ಗುರುತಿಸಲಾಗಿದೆ.

ಗುಜರಾತ್‌ನ ರಣ್‌ ಆಫ್ ಕಚ್ ಮತ್ತು ರಾಜಸ್ಥಾನದ ಸಂಭರ್ ಸರೋವರದಿಂದ ಫ್ಲೆಮಿಂಗೊಗಳು ಆಗಮಿಸುತ್ತವೆ.

ದೂರದ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್ ಮತ್ತು ಇಸ್ರೇಲ್‌ನಿಂದ ಸಹ ವಲಸೆ ಬರತ್ತವೆ ಮಾಯನಗರಿಗೆ.

ರವೀನಾ ಟಂಡನ್, ದಿಯಾ ಮಿರ್ಜಾ ಮತ್ತು ಟ್ವಿಂಕಲ್ ಖನ್ನಾ ಅವರಂತಹ ಹಲವಾರು ಸೆಲೆಬ್ರೆಟಿಗಳು ಈ  ಅದ್ಭುತ ದೃಶ್ಯಗಳ ಬಗ್ಗೆ  ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಾವಿರಾರು ಫ್ಲೆಮಿಂಗೊಗಳು ಮುಂಬೈನ ಸಮುದ್ರವನ್ನು ಪಿಂಕ್‌ ಪೈಂಟ್‌ ಮಾಡಿರುವಂತೆ ಕಾಣುತ್ತಿರುವ ಪೋಟೋಗಳು ಸಖತ್‌ ವೈರಲ್‌ ಆಗಿವೆ.

loader