ಅಸ್ಸಾಂನ ನಾಗಾಂವ್ ಜಿಲ್ಲೆಯ ನಿವಾಸಿಯೊಬ್ಬರು ತಮ್ಮ ಮನೆಯಿಂದ ಹೊರಬರುವ ಹಲವಾರು ಹಾವುಗಳನ್ನು ಕಂಡು ನಡುಗಿದ್ದಾರೆ.

ಅಸ್ಸಾಂನ ನಾಗಾನ್ ಜಿಲ್ಲೆಯ ನಿವಾಸಿಯೊಬ್ಬರು ಮನೆಯಲ್ಲಿ ಹೊಸದಾಗಿ ಟಾಯ್ಲೆಟ್ ಕಟ್ಟಿಸಿದ ಖುಷಿಯಲ್ಲಿದ್ದರು. ಬಳಸೋಕೆ ಹೋಗಬೇಕೆಂದಾಗ ಅಲ್ಲಿ ಹಾವುಗಳ ದೊಡ್ಡ ಬಳಗವೇ ತೆವಳಾಡುತ್ತಾ ಬುಸುಗುಡುತ್ತಾ ಅವರನ್ನು ಸ್ವಾಗತಿಸಿವೆ. 
ಅಯ್ಯಬ್ಬಾ! ನೆನೆಸಿಕೊಂಡರೇ ಮೈ ನವಿರೇಳುತ್ತೆ ಅಲ್ಲವೇ? ಕಡೆಗೆ ಅವರು ಹಾವು ರಕ್ಷಿಸುವವರನ್ನು ಕರೆಸಿ ಎಲ್ಲವನ್ನು ಹೊರಗೆಳಿಸಿದಾಗ ಸಿಕಿದ್ದು ಬರೋಬ್ಬರಿ 35 ಹಾವುಗಳು! ಹೌದು, ಇದೊಂತೂ ಹಾರರ್ ಚಿತ್ರಗಳಿಗೂ ಭಯಾನಕವೆನಿಸುತ್ತದೆ.


ಸುದ್ದಿ ಸಂಸ್ಥೆ ANI ವ್ಯಕ್ತಿಯೊಬ್ಬರ ಮನೆಯಿಂದ ಹಾವುಗಳನ್ನು ಸಂಗ್ರಹಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದೆ. ಪೋಸ್ಟ್‌ನಲ್ಲಿ, 'ಅಸ್ಸಾಂನ ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಪ್ರದೇಶದ ಮನೆಯೊಂದರಲ್ಲಿ ಸುಮಾರು 35 ಹಾವುಗಳು ತೆವಳುತ್ತಿರುವುದು ಕಂಡುಬಂದಿದೆ. ಪ್ರಾಣಿ ಪ್ರೇಮಿ ಸಂಜಿಬ್ ದೇಕಾ ಅವರು ಹಾವುಗಳನ್ನು ರಕ್ಷಿಸಿದ್ದಾರೆ' ಎಂದು ಅವರು ಮಾಹಿತಿ ನೀಡಿದೆ.

ವೀಡಿಯೊ ದೊಡ್ಡ ಬಂಡೆಯ ಕೆಳಗೆ ಸುತ್ತಿಕೊಂಡಿರುವ ಹಲವಾರು ಹಾವುಗಳ ಕ್ಲೋಸ್-ಅಪ್ ಶಾಟ್‌ನೊಂದಿಗೆ ಪ್ರಾರಂಭವಾಗುತ್ತದೆ. ಮುಂದಿನ ದೃಶ್ಯದಲ್ಲಿ, ಒಬ್ಬ ವ್ಯಕ್ತಿಯು ಹಲವಾರು ಹಾವುಗಳನ್ನು ಬಕೆಟ್‌ನಲ್ಲಿ ಎಚ್ಚರಿಕೆಯಿಂದ ಸಂಗ್ರಹಿಸುತ್ತಿರುವುದನ್ನು ತೋರಿಸಲಾಗಿದೆ. ವೀಡಿಯೋ ಮುಂದುವರೆದಂತೆ, ಬಂಡೆಯ ಕೆಳಗೆ ಹಾವುಗಳು ಹೊರಬರುವುದನ್ನು ಮತ್ತು ಬಯಲಿಗೆ ಜಾರಿಕೊಳ್ಳುವುದನ್ನು ಇದು ಸೆರೆಹಿಡಿಯುತ್ತದೆ.

Scroll to load tweet…