Asianet Suvarna News Asianet Suvarna News

ಬೆಳಗಾವಿ: ಚಿಕಿತ್ಸೆ ಪಡೆಯಲು ಕಚ್ಚಿದ ಹಾವನ್ನೂ ಜೊತೆಗೆ ತಂದ ಯುವಕ, ತಬ್ಬಿಬ್ಬಾದ ಆಸ್ಪತ್ರೆ ಸಿಬ್ಬಂದಿ..!

ಹಾವು ಯಾವುದು ಎಂದು ಗೊತ್ತಾದ್ರೆ ಚಿಕಿತ್ಸೆ ಸುಲಭ ಎಂದು ಭಾವಿಸಿದ ಶಾಹಿದ್ ಡಬ್ಬಿಯಲ್ಲಿ ಮುಚ್ಚಿಕೊಂಡು ಜೀವಂತ ಹಾವನ್ನು ಆಸ್ಪತ್ರೆಗೆ ತಂದಿದ್ದಾನೆ. ಡಬ್ಬಿಯಲ್ಲಿ ಇರೋ ಜೀವಂತ ಹಾವು ನೋಡಿದ ಆಸ್ಪತ್ರೆ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. 
 

Young Man Came to Hospital along with Snake in Belagavi grg
Author
First Published May 28, 2024, 10:35 AM IST

ಬೆಳಗಾವಿ(ಮೇ.28):  ಯುವಕನೊಬ್ಬ ಚಿಕಿತ್ಸೆ ಪಡೆಯಲು ಕಚ್ಚಿದ ಹಾವನ್ನೂ ಜೊತೆಗೆ ತಂದ ಘಟನೆ ಬೆಳಗಾವಿ ಬಿಮ್ಸ್ ಆಸ್ಪತ್ರೆ ಬಳಿ ಇಂದು(ಮಂಗಳವಾರ) ನಡೆದಿದೆ.  ಬೆಳಗಾವಿ ತಾಲೂಕಿನ ಹುಣಶ್ಯಾನಹಟ್ಟಿ ಗ್ರಾಮದಲ್ಲಿ ಯುವಕ ಶಾಹಿದ್(21)  ಎಂಬಾತನಿಗೆ ಹಾವು‌ ಕಚ್ಚಿತ್ತು. 

ಸ್ನೇಹಿತರ ಜೊತೆಗೆ ಚಿಕಿತ್ಸೆ ಪಡೆಯಲು ಬಂದ ಯುವಕ ಕಚ್ಚಿದ ಹಾವುನ್ನು ಜೊತೆಗೆ ತಂದಿದ್ದಾನೆ. ಡಬ್ಬಿಯಲ್ಲಿ ಹಾವನ್ನು ಹಾಕಿಕೊಂಡು ಬಿಮ್ಸ್ ಆಸ್ಪತ್ರೆಗೆ ಬಂದಿದ್ದಾನೆ ಯುವಕ. ಮನೆಯ ಬಳಿ ಬಂದಿದ್ದ ಹಾವನ್ನ ಶಾಹಿದ್ ಹಿಡಿದಿದ್ದ, ಬಳಿಕ ಬಳಿಯ ಬೆಟ್ಟದ ಮೇಲೆ ಹಾವು ಬಿಡುವ ಸಂದರ್ಭದಲ್ಲಿ ಹಾವು ಕಚ್ಚಿತ್ತು. 

ವಿದ್ಯುತ್ ಕಂಬದ ಮೇಲೇರಿದ ಮಾನಸಿಕ ಅಸ್ವಸ್ಥ; ಏ ದೋಸ್ತೀ ಹಮ್ ನಹೀ ಚೋಡೇಂಗೆ ಹಾಡುತ್ತಾ ಹುಚ್ಚಾಟ!

ಹಾವು ಯಾವುದು ಎಂದು ಗೊತ್ತಾದ್ರೆ ಚಿಕಿತ್ಸೆ ಸುಲಭ ಎಂದು ಭಾವಿಸಿದ ಶಾಹಿದ್ ಡಬ್ಬಿಯಲ್ಲಿ ಮುಚ್ಚಿಕೊಂಡು ಜೀವಂತ ಹಾವನ್ನು ಆಸ್ಪತ್ರೆಗೆ ತಂದಿದ್ದಾನೆ. ಡಬ್ಬಿಯಲ್ಲಿ ಇರೋ ಜೀವಂತ ಹಾವು ನೋಡಿದ ಆಸ್ಪತ್ರೆ ಸಿಬ್ಬಂದಿ ತಬ್ಬಿಬ್ಬಾಗಿದ್ದಾರೆ. ಚಿಕಿತ್ಸೆ ಪಡೆದು ಸ್ನೇಹಿತರ ಬೈಕ್ ನಲ್ಲಿ ಮನೆಗೆ ತೆರಳಿದ್ದಾನೆ ಯುವಕ. 

Latest Videos
Follow Us:
Download App:
  • android
  • ios