ನವ​ದೆ​ಹ​ಲಿ(ಮಾ.10): ಮೊನ್ನೆಯ ದಿನ ಅಂದರೆ ಮಾ.8ರಂದು 20 ಲಕ್ಕೂ ಹೆಚ್ಚು ಮಂದಿಗೆ ಕೊರೋನಾ ಲಸಿಕೆ ನೀಡ​ಲಾ​ಗಿದ್ದು, ಒಂದು ದಿನ​ದಲ್ಲಿ ನೀಡ​ಲಾದ ದಾಖಲೆ ಪ್ರಮಾ​ಣದ ಲಸಿ​ಕೆ​ಯಾ​ಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗ​ಳವಾರ ಮಾಹಿತಿ ನೀಡಿದೆ.

ಇದ​ರೊಂದಿಗೆ ದೇಶಾ​ದ್ಯಂತ ಈವ​ರೆಗೆ ಒಟ್ಟು 2.3 ಕೋಟಿ ಮಂದಿಗೆ ಲಸಿಕೆ ನೀಡ​ಲಾ​ಗಿದೆ ಎಂದು ಇಲಾಖೆ ಹೇಳಿದೆ. ಲಸಿಕೆ ಅಭಿ​ಯಾ​ನದ 52ನೇ ದಿನ​ವಾದ ಸೋಮ​ವಾರ 20,19,723 ಮಂದಿಗೆ ಲಸಿಕೆ ಕೊಡಲಾ​ಗಿದೆ.

ಇದ​ರಲ್ಲಿ ಆರೋಗ್ಯ ಕಾರ್ಯ​ಕ​ರ್ತರು ಮತ್ತು ಮುಂಚೂಣಿ ಕಾರ್ಯ​ಕ​ರ್ತರು ಸೇರಿ​ದಂತೆ ಒಟ್ಟು 17,15,380 ಮಂದಿಗೆ ಮೊದಲ ಡೋಸ್‌ ಹಾಗೂ 3,04,343 ಮಂದಿಗೆ 2ನೇ ಡೋಸ್‌ ನೀಡ​ಲಾ​ಗಿದೆ