ಅಮರಾವತಿ(ಡಿ.08) ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿಗೂಢ ರೋಗ| ಆಂಧ್ರ ನಿಗೂಢ ರೋಗಕ್ಕೆ ಸೊಳ್ಳೆ ನಿಯಂತ್ರಣ ಔಷಧ ಕಾರಣ?| ಮುಂದುವರೆದ ತನಿಖೆ

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಿಗೂಢವಾಗಿ ಮೂರ್ಛೆ ಬೀಳುತ್ತಿದ್ದುದಕ್ಕೆ ಪಟ್ಟಣದಲ್ಲಿ ಸಿಂಪಡಿಸಿದ ಸೊಳ್ಳೆ ನಿಯಂತ್ರಣ ಔಷಧ ಕಾರಣವೇ ಎಂಬ ಅನುಮಾನ ವ್ಯಕ್ತವಾಗಿದೆ. 

ಕೊರೋನಾ ಶಾಕ್ ಬೆನ್ನಲ್ಲೇ ಇದೀಗ ಫ್ರಾನ್ಸ್‌ನಲ್ಲಿ ಹರಡುತ್ತಿದೆ ಬಾತುಕೋಳಿ ಜ್ವರ!

ಘಟನೆಗೆ ಕಾರಣ ಪತ್ತೆಹಚ್ಚಲು ಮಂಗಳಗಿರುಯ ಆಲ್‌ ಇಂಡಿಯಾ ಮೆಡಿಕಲ್ ಸೈನ್ಸ್ ಆಸ್ಪತ್ರೆಯ ತಜ್ಞರು ಏಲೂರಿಗೆ ಧಾವಿಸಿ ಸಮಸ್ಯೆಗೆ ಒಳಗಾದವರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಜೊತೆಗೆ ಕೇಂದ್ರದ ತಜ್ಞರ ತಂಡವೊಂದು ಮಂಗಳವಾರ ಏಲೂರಿಗೆ ಭೇಟಿ ನೀಡಿ ನಿಗೂಢ ರೋಗದ ಮೂಲ ಪತ್ತೆಗೆ ನಿರ್ಧರಿಸಿದೆ. ಸಿಎಂ ಜಗನ್ ಕೂಡಾ ಭೇಟಿ ನೀಡಿದ್ದಾರೆ.

ಪಟ್ಟಣದಲ್ಲಿ ಭಾನುವಾರ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಫಿಟ್ಸ್ ಬಂದವರಂತೆ ಮೂರ್ಛೆ ತಪ್ಪಿ ಬಿದ್ದಿದ್ದರು. ಅವರ ಬಾಯಿಯಲ್ಲಿ ನೊರೆ ಕಂಡು ಬಂದಿತ್ತು. ಅಲ್ಲದೇ ಮೈ-ಕೈ ನಡುಗುತ್ತಿತ್ತು. 

ಕೊರೋನಾ ಇಲ್ಲ, ಆಂಧ್ರದಲ್ಲಿ ನಿಗೂಢ ರೋಗದ ಕಾಟ!

ಸೋಮವಾರ ಈ ನಿಗೂಢ ರೋಗ ಕಾಡುತ್ತಿದ್ದವರ ಸಂಖ್ಯೆ ಸುಮಾರು 350ಕ್ಕೇರಿದೆ. ಪ್ರತಿ ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಇಲ್ಲಿನ ಡಿಸಿ ತಿಳಿಸಿದ್ದರು.