ಪುದುಚೇರಿ(ಫೆ.22): ಶಾಸಕರ ರಾಜೀನಾಮೆಯಿಂದ ಸಂಖ್ಯಾಬಲ ಕಳೆದುಕೊಂಡಿದ್ದ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಇಂದು(ಫೆ.22) ಪತನಗೊಂಡಿದೆ. ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ ಕಾಂಗ್ರೆಸ್ ಹಾಗೂ ಡಿಎಂಕೆ ಸರ್ಕಾರ ನೆಲಕ್ಕುರುಳಿದೆ. ಆದರೆ ಸರ್ಕಾರ ರಚಿಸಲು ಬಿಜೆಪಿ ನಿರಾಕರಿಸಿದೆ.

ಕಾಂಗ್ರೆಸ್‌ಗೆ ಬಿಗ್ ಶಾಕ್, ಪುದುಚೇರಿಯಲ್ಲಿ ಸರ್ಕಾರ ಪತನ!.

ಮುಖ್ಯಮಂತ್ರಿ ನಾರಾಯಣಸ್ವಾಮಿ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಸರ್ಕಾರ ರಚಿಸಲು ಹಕ್ಕು ಮಂಡಿಸಿಲ್ಲ. ಈ ಕುರಿತು ಪುದುಚೇರಿ ಬಿಜೆಪಿ ಸ್ಪಷ್ಟನೆ ನೀಡಿದೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿಜೆಪಿ ಮಿತ್ರ ಪಕ್ಷಗಳು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸವಿದೆ. ಜನರ ಆರ್ಶಿವಾದದೊಂದಿಗೆ ಪುದುಚೇರಿಯಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಪುದುಚೇರಿ ಬಿಜೆಪಿ ರಾಜ್ಯಾಧ್ಯಕ್ಷ ವಿ ಸ್ವಾಮಿನಾಥನ್ ಹೇಳಿದ್ದಾರೆ.

ರಾಜ್ಯದಲ್ಲಿ ಹೆಚ್ಚಿದ ಕೊರೋನಾ, ಪುದುಚೇರಿ ಸರ್ಕಾರ ಪತನ; ಫೆ.22ರ ಟಾಪ್ 10 ಸುದ್ದಿ!...

ಬಿಜೆಪಿ ಸರ್ಕಾರ ರಚಿಸಲು ಹಕ್ಕು ಮಂಡಿಸದ ಕಾರಣ ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ. ಚುನಾವಣೆಗೆ ಸಮೀಪಿಸುತ್ತಿದ್ದಂತೆ ಸರ್ಕಾರ ಪತನವಾಗಿರುವ ಕಾರಣ ಬಿಜೆಪಿ ಸರ್ಕಾರ ರಚಿಸುವತ್ತ ಆಸಕ್ತಿ ತೋರಿಲ್ಲ. ಇಷ್ಟೇ ಅಲ್ಲ ಸ್ವಂತ ಬಲದಿಂದ ಸರ್ಕಾರ ರಚಿಸಲು ಬಿಜೆಪಿ ಉತ್ಸುಕವಾಗಿದೆ.

ಕೇಂದ್ರಾಡಳಿತಕ್ಕ ನೀಡಿರುವ ಹಣ ದುರುಪಯೋಗ ಮಾಡಿದ ಆಡಳಿತರೂಢ ಕಾಂಗ್ರೆಸ್-ಡಿಎಂಕೆ ಸರ್ಕಾರ, ಕೋಟಿ ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ. ನಿರುದ್ಯೋಗ, ಪುದುಚೇರಿ ಅಭಿವೃದ್ಧಿ ಸೇರಿದಂತೆ ಯೋಜನೆಗಳನ್ನು ಸರ್ಕಾರ ಮರೆತಿತ್ತು. ಹೀಗಾಗಿ ಸರ್ಕಾರ ಪತನಗೊಂಡಿದೆ. ಕೇಂದ್ರಾಡಳಿತದ ಸರ್ಕಾರ ಪತನ ಕಪ್ಪುಚುಕ್ಕೆಯಾಗಿದೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ.