ಸಾಮಾಜಿಕ ಮಾಧ್ಯಮಗಳು ತಮ್ಮ ಬಳಕೆದಾರರ ವಿರುದ್ಧ ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳುವ ಪ್ರವೃತ್ತಿಗೆ ಇನ್ನು ಬ್ರೇಕ್‌ ಬೀಳಲಿದೆ. ಟ್ವೀಟರ್‌, ಫೇಸ್‌ಬುಕ್‌ನಂಥ ಸೋಷಿಯಲ್‌ ಮೀಡಿಯಾ ಕಂಪನಿಗಳು ಕೈಗೊಳ್ಳುವ ಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲೇ ಇನ್ನು ಸಮಿತಿಗಳು ರಚನೆ ಆಗಲಿದೆ.


ನವದೆಹಲಿ: ಸಾಮಾಜಿಕ ಮಾಧ್ಯಮಗಳು ತಮ್ಮ ಬಳಕೆದಾರರ ವಿರುದ್ಧ ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳುವ ಪ್ರವೃತ್ತಿಗೆ ಇನ್ನು ಬ್ರೇಕ್‌ ಬೀಳಲಿದೆ. ಟ್ವೀಟರ್‌, ಫೇಸ್‌ಬುಕ್‌ನಂಥ ಸೋಷಿಯಲ್‌ ಮೀಡಿಯಾ ಕಂಪನಿಗಳು ಕೈಗೊಳ್ಳುವ ಕ್ರಮ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕೇಂದ್ರ ಸರ್ಕಾರದ ಮಟ್ಟದಲ್ಲೇ ಇನ್ನು ಸಮಿತಿಗಳು ರಚನೆ ಆಗಲಿದೆ.

ಈ ಕುರಿತು ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಕೇಂದ್ರ ಸರ್ಕಾರ (Central Government) ಶುಕ್ರವಾರ ಮಹತ್ವದ ತಿದ್ದುಪಡಿ ತಂದಿದೆ. ಬಳಕೆದಾರರ ದೂರುಗಳನ್ನು ಸ್ವೀಕರಿಸಿ, ಸಮಸ್ಯೆ ಪರಿಹರಿಸಲು ಇನ್ನು 3 ತಿಂಗಳಲ್ಲಿ 1 ಅಥವಾ ಒಂದಕ್ಕಿಂತ ಹೆಚ್ಚು ಮೇಲ್ಮನವಿ ಸಮಿತಿ ರಚನೆ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.

Social Media ಸ್ಟಾರ್‌ಗಳಿಗೆ ಸರ್ಕಾರದ ಶಾಕ್: ರೆಡಿಯಾಗ್ತಿದೆ ಹೊಸ ಮಾರ್ಗಸೂಚಿ

ಈಗಾಗಲೇ ಟ್ವೀಟರ್‌(Twitter), ಫೇಸ್‌ಬುಕ್‌(Facebook), ಟೆಲಿಗ್ರಾಂನಂಥ (Telegram) ಸೋಷಿಯಲ್‌ ಮೀಡಿಯಾ (social media) ಕಂಪನಿಗಳು ತಮ್ಮ ಕಂಪನಿ ಮಟ್ಟದಲ್ಲಿ ಕುಂದುಕೊರತೆ ಅಧಿಕಾರಿಗಳನ್ನು ಸರ್ಕಾರದ ಆದೇಶಾನುಸಾರ ನೇಮಿಸಿಕೊಂಡಿವೆ. ಈ ಕುಂದುಕೊರತೆ ಅಧಿಕಾರಿಗಳಿಗೆ ಬಳಕೆದಾರರು ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳು, ಖಾತೆಗಳ ಅಮಾನತು, ಇತರ ವಿಷಯಗಳ ವಿರುದ್ಧ ಮನವಿ ಸಲ್ಲಿಸಬಹುದು. ಆದರೆ ಕುಂದುಕೊರತೆ ಅಧಿಕಾರಿ ಕೈಗೊಳ್ಳುವ ನಿರ್ಣಯ ಪ್ರಶ್ನಿಸಲು ಬಳಕೆದಾರರಿಗೆ ಅವಕಾಶ ಇರಲಿಲ್ಲ.

ಫೇಸ್‌ಬುಕ್‌ ಬೆನ್ನಲ್ಲೇ ಟ್ವಿಟರ್‌ಗೂ ನಿರ್ಬಂಧ ಹೇರಿದ ರಷ್ಯಾ, ವರ್ಚುವಲ್ ಕ್ಷೇತ್ರದ ಹಿಡಿತಕ್ಕೆ ಪುಟಿನ್ ಯತ್ನ!

ಹೀಗಾಗಿ ಸೋಷಿಯಲ್‌ ಮೀಡಿಯಾ ಕಂಪನಿಗಳ ನಿರಂಕುಶತ್ವಕ್ಕೆ(tyranny) ಅಂತ್ಯ ಹಾಡಲು ಇನ್ನು ಸರ್ಕಾರದ ಮಟ್ಟದಲ್ಲಿ ಮೇಲ್ಮನವಿ ಸಮಿತಿಗಳು ರಚನೆ ಆಗಲಿವೆ. ಇವು ಸಾಮಾಜಿಕ ಮಾಧ್ಯಮ ವೇದಿಕೆಗಳ ಕುಂದುಕೊರತೆ ಅಧಿಕಾರಿ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ 30 ದಿನಗಳ ಒಳಗಾಗಿ ಜನರು ದೂರು ಸಲ್ಲಿಸಿದರೆ ಆ ಬಗ್ಗೆ ಮರುಪರಿಶೀಲನೆ ನಡೆಸಲಿವೆ. ಪ್ರತಿ ಸಮಿತಿಯಲ್ಲಿ ಒಬ್ಬ ಮುಖ್ಯಸ್ಥ ಹಾಗೂ 2 ಪೂರ್ಣಾವಧಿ ಸದಸ್ಯರು ಇರುತ್ತಾರೆ. ಇವರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡಲಿದೆ. ಇವರಲ್ಲಿ ಒಬ್ಬ ವ್ಯಕ್ತಿ ಪದನಿಮಿತ್ತ ಸದಸ್ಯರಾಗಿದ್ದರೆ ಇನ್ನಿಬ್ಬರು ಸ್ವತಂತ್ರ ಸದಸ್ಯರಾಗಿರುತ್ತಾರೆ. ಸಮಿತಿಯು ಇಂತಹ ಅರ್ಜಿಗಳ ತ್ವರಿತವಾಗಿ ವಿಚಾರಣೆ ನಡೆಸಿ ಅರ್ಜಿ ದಾಖಲಿಸಿದ 30 ದಿನಗಳ ಒಳಗಾಗಿ ಅದನ್ನು ಇತ್ಯರ್ಥ ಪಡಿಸುತ್ತದೆ.