Asianet Suvarna News Asianet Suvarna News

Operation Weapon Recovery: ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಶಾಂತಿ ಸ್ಥಾಪನೆಗೆ ಆಯುಧ ವಶಪಡಿಸಿಕೊಳ್ಳಲು ಮುಂದಾದ ಸೇನೆ

ಮೇಥಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರವಾಗಿ ಆರಂಭವಾದ ಘರ್ಷಣೆ ಭಾರಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಇದನ್ನು ತಡೆಗಟ್ಟಲು ಭಾರತೀಯ ಸೇನೆಯನ್ನು ನಿಯೋಜನೆ ಮಾಡಲಾಗಿದೆ.

operation weapon recovery army defangs rivals in manipur by recovering arms to bring peace ash
Author
First Published May 28, 2023, 3:38 PM IST

ಇಂಫಾಲ್‌ (ಮೇ 28, 2023): ಮತ್ತೊಮ್ಮೆ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ ಮಾಡುವುದಕ್ಕಾಗಿ ಭಾರತೀಯ ಸೇನೆ ‘ವೆಪನ್‌ ರಿಕವರಿ’ ಹೆಸರಿನಲ್ಲಿ ಆಪರೇಶನ್‌ ಆರಂಭಿಸಿದೆ. ಸಾರ್ವಜನಿಕರ ಮನೆಗಳಿಗೆ ತೆರಳಿದ ಸೇನಾಧಿಕಾರಿಗಳು ಆಯುಧಗಳಿಗಾಗಿ ಶೋಧ ನಡೆಸಿದ್ದಾರೆ.

ಕೇಥೆಲ್ಮಾನ್ಬಿ ಗ್ರಾಮದಲ್ಲಿ ಶುಕ್ರವಾರ ದಿಢೀರ್‌ ದಾಳಿ ನಡೆಸಿದ ಸೇನೆ, ಕಂಟ್ರಿ ಮೇಡ್‌ ಗನ್‌ಗಳು, ಬೃಹತ್‌ ಪ್ರಮಾಣದಲ್ಲಿ ಸ್ಫೋಟಕಗಳು, ಏರ್‌ಗನ್‌ಗಳು ಮತ್ತು ಕಾರ್ಟಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ. ಶಸ್ತ್ರಾಸ್ತ್ರಗಳನ್ನು ಹೊಂದಿರುವ ಗುಂಪುಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದ ಕಾರಣ ಹಿಂಸಾಚಾರ ಉಂಟಾಗಿತ್ತು. 

ಇದನ್ನು ಓದಿ: ಈ ರಾಜ್ಯದಲ್ಲಿ ನೀಟ್‌ ಪರೀಕ್ಷೆ ಮುಂದೂಡಿಕೆ: ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

ಈ ಹಿನ್ನೆಲೆಯಲ್ಲಿ ಇದನ್ನು ತಹಬಂದಿಗೆ ತರುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಸೇನೆ ನಿರ್ಧರಿಸಿದೆ. ‘ಯಾವುದೇ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿಲ್ಲ. ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ ಪಡೆಗಳು ಅನಿರೀಕ್ಷಿತವಾಗಿ ದಾಳಿ ನಡೆಸುತ್ತಿವೆ. ನಮ್ಮ ಗುರಿ ಏನಿದ್ದರೂ ಇತರ ಸಮುದಾಯವನ್ನು ಹೆದರಿಸುತ್ತಿರುವವರನ್ನು ತಡೆಯುವುದಾಗಿದೆ. ಹಾಗಾಗಿ ನಾವು ಆಯುಧಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೇಥಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಚಾರವಾಗಿ ಆರಂಭವಾದ ಘರ್ಷಣೆ ಭಾರಿ ಹಿಂಸಾಚಾರಕ್ಕೆ ಕಾರಣವಾಗಿದ್ದು, ಇದನ್ನು ತಡೆಗಟ್ಟಲು ಭಾರತೀಯ ಸೇನೆಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಹಿಂದೂ ಮೀಟಿ ಸಮುದಾಯ, ಆದಿವಾಸಿ ಕ್ರೈಸ್ತರ ನಡುವೆ ಸಂಘರ್ಷ: ಬೂದಿ ಮುಚ್ಚಿದ ಕೆಂಡವಾದ ಮಣಿಪುರ ಹಿಂಸೆಗೆ 54 ಬಲಿ!

ಜನರಲ್‌ ಪಾಂಡೆ ಭೇಟಿ:
ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಸರ್ವ ಪ್ರಯತ್ನಗಳು ನಡೆಯುತ್ತಿರುವ ಬೆನ್ನಲ್ಲೇ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಕ್ಕೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿದ್ದರು.

ಇದನ್ನೂ ಓದಿ: ಇದನ್ನೂ ಓದಿ: ಮಣಿಪುರ ಸ್ಥಿತಿ ಶಾಂತ: ಕೆಲವು ಕಡೆ ಭದ್ರತಾ ಪಡೆ-ಬಂಡುಕೋರರ ಚಕಮಕಿ; 2 ದಿನದ ಹಿಂಸೆಯಲ್ಲಿ 13 ಜನ ಬಲಿ

Follow Us:
Download App:
  • android
  • ios