ಮಣಿಪುರ ಸ್ಥಿತಿ ಶಾಂತ: ಕೆಲವು ಕಡೆ ಭದ್ರತಾ ಪಡೆ-ಬಂಡುಕೋರರ ಚಕಮಕಿ; 2 ದಿನದ ಹಿಂಸೆಯಲ್ಲಿ 13 ಜನ ಬಲಿ

ಚುರಾಚಂದ್‌ಪುರ್‌, ಬಿಷ್ಣುಪುರ್‌, ದೋಲಾಯ್‌ತಾಬಿ ಮತ್ತು ಪುಕಾವೋಗಳಲ್ಲಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡಲು 6,000 ಮಂದಿ ಯೋಧರು ಹಾಗೂ ಅಸ್ಸಾಂ ರೈಫಲ್ಸ್‌ ಪಡೆಗಳನ್ನು ನಿಯೋಜಿಸಲಾಗಿದೆ.

manipur violence effect peace meeting organised in meghalaya 13 dead ash

ಇಂಫಾಲ್‌ (ಮೇ 6, 2023): ಭಾರಿ ಹಿಂಸಾಚಾರಕ್ಕೆ ತುತ್ತಾಗಿದ್ದ ಮಣಿಪುರ ಶುಕ್ರವಾರ ಬಹುತೇಕ ಶಾಂತವಾಗಿದೆ. ಆದರೂ ಪ್ರಕ್ಷುಬ್ಧ ಸ್ಥಿತಿ ಇದ್ದು, ಕೆಲವು ಪ್ರದೇಶಗಳಲ್ಲಿ ಪ್ರತಿಭಟನಾನಿರತ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಮೇ 3 ಹಾಗೂ 4ರಂದು ನಡೆದ 2 ದಿನದ ಹಿಂಸಾಚಾರದ ವೇಳೆ ಸಾವಿನ ಅಧಿಕೃತ ಮಾಹಿತಿಯನ್ನು ಸರ್ಕಾರ ನೀಡಿಲ್ಲವಾದರೂ, 13 ಜನರು ಸಾವನ್ನಪ್ಪಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಚುರಾಚಂದ್‌ಪುರ್‌, ಬಿಷ್ಣುಪುರ್‌, ದೋಲಾಯ್‌ತಾಬಿ ಮತ್ತು ಪುಕಾವೋಗಳಲ್ಲಿ ಬಂಡುಕೋರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಆದರೆ ಈ ವೇಳೆ ಸಂಭವಿಸಿರಬಹುದಾದ ಅಪಾಯಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದಲ್ಲಿ ಸುವ್ಯವಸ್ಥೆಯನ್ನು ಕಾಪಾಡಲು 6,000 ಮಂದಿ ಯೋಧರು ಹಾಗೂ ಅಸ್ಸಾಂ ರೈಫಲ್ಸ್‌ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನು ಓದಿ: ಮಣಿಪುರದಲ್ಲಿ ಕಂಡಲ್ಲಿ ಗುಂಡು ಆದೇಶ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರಚಾರ ದಿಢೀರ್‌ ರದ್ದು!

ಗುರುವಾರ ಭಾರಿ ಹಿಂಸಾಚಾರಕ್ಕೆ ಗುರಿಯಾಗಿದ್ದ ರಾಜ್ಯದಲ್ಲಿ ಶುಕ್ರವಾರ ಕೊಂಚ ಮಟ್ಟಿಗೆ ಶಾಂತಿ ನೆಲೆಸಿದೆ. ‘ರಾಜ್ಯದಲ್ಲಿನ ಪರಿಸ್ಥಿತಿಯನ್ನು ಭಾರತೀಯ ವಾಯುಪಡೆ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಅಸ್ಸಾಂನಲ್ಲಿರುವ 2 ಯುದ್ಧಭೂಮಿಗಳಲ್ಲಿ ಸಿ17 ಗ್ಲೋಬ್‌ ಮಾಸ್ಟರ್‌ ಮತ್ತು ಎಎನ್‌ 32 ವಿಮಾನಗಳನ್ನು ಸುಸ್ಥಿತಿಯಲ್ಲಿಡಲಾಗಿದೆ’ ಎಂದು ಸೇನೆ ತಿಳಿಸಿದೆ.

ನಿಗಾ ಇರಿಸಿರುವ ಅಮಿತ್‌ ಶಾ:
ಮಣಿಪುರದಲ್ಲಿ ಉಂಟಾಗಿರುವ ಹಿಂಸಾಚಾರದ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಿಗಾ ಇರಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುರುವಾರ ಮಣಿಪುರ ಮುಖ್ಯಮಂತ್ರಿ ನೆಫಿಯೋ ರಿಯೋ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮಿಜೋರಾಂ ಮುಖ್ಯಮಂತ್ರಿ ಝರೋಂತಂಗಾ ಜೊತೆಗೆ ಅಮಿತ್‌ ಶಾ ಸಭೆ ನಡೆಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಅವು ಹೇಳಿವೆ.

ಇದನ್ನೂ ಓದಿ: ಹೊತ್ತಿ ಉರಿಯುತ್ತಿದೆ ಮಣಿಪುರ: ದಯವಿಟ್ಟು ಸಹಾಯ ಮಾಡಿ ಎಂದು ಮೋದಿ, ಅಮಿತ್ ಶಾ ನೆರವು ಕೇಳಿದ ಮೇರಿ ಕೋಮ್

ಕರ್ನಾಟಕ ಬಿಡಿ, ಮಣಿಪುರದತ್ತ ಕಣ್ಣಿಡಿ: ಮೋದಿಗೆ ಕಾಂಗ್ರೆಸ್‌ ಟೀಕೆ
ನವದೆಹಲಿ: ಮಣಿಪುರ ಹಿಂಸಾಚಾರದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿರುವ ಕಾಂಗ್ರೆಸ್‌, ಕರ್ನಾಟಕ ಚುನಾವಣಾ ಪ್ರಚಾರದಿಂದ ಬಿಡುವು ಮಾಡಿಕೊಂಡು ಮಣಿಪುರದತ್ತ ಗಮನ ಹರಿಸಿ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಎಂದು ಹೇಳಿದೆ.

'ರಾಜ್ಯದಲ್ಲಿ ಉಂಟಾಗಿರುವ ಹಿಂಸೆಯನ್ನು ತಡೆಗಟ್ಟಲು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು. ಮೋದಿ ಅವರೇ ನೀವು ಇಡೀ ದೇಶದ ಪ್ರಧಾನಿ, ಮಣಿಪುರದಲ್ಲಿ ಏನಾಗುತ್ತಿದೆ ಎಂಬುದನ್ನು ಕರ್ನಾಟಕದ ಜನರೂ ನೋಡುತ್ತಿದ್ದಾರೆ. ಕರ್ನಾಟಕದಲ್ಲಿ ಮತ ಸೆಳೆಯುವುದಷ್ಟೇ ನಿಮ್ಮ ಕರ್ತವ್ಯವಲ್ಲ’ ಎಂದು ಕಾಂಗ್ರೆಸ್‌ ಹೇಳಿದೆ.

ಇದನ್ನೂ ಓದಿ: ಮಣಿಪುರದ ಬೆನ್ನಲ್ಲೇ ಮೇಘಾಲಯದಲ್ಲಿ ಹಿಂಸಾಚಾರ, ಕುಕಿ, ಮೀಟಿ ಹೋರಾಟಕ್ಕೆ ಶಿಲ್ಲಾಂಗ್ ಭಸ್ಮ!

Latest Videos
Follow Us:
Download App:
  • android
  • ios