ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳ ತೆರವು ಸಂದರ್ಭದಲ್ಲಿ ಯಾವುದೇ ಗಲಾಟೆ ಆಗದಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪೊಲೀಸರು, ಪಿಎಸಿ ಮತ್ತು ಆರ್‌ಎಎಫ್ ಅನ್ನು ನಿಯೋಜಿಸಲಾಗಿತ್ತು. ಅಗ್ನಿಶಾಮಕ ದಳದ ತಂಡಗಳೂ ಹಾಜರಿದ್ದವು. ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳ ತೆರವು ವಿರೋಧಿಸಿ ಪ್ರತಿಭಟನೆ ನಡೆಸಿದ ಸುಮಾರು ಅರ್ಧ ಡಜನ್ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಲಹಾಬಾದ್ (ಮೇ.20): ಅಲಹಾಬಾದ್ ಸೆಂಟ್ರಲ್ ಯೂನಿವರ್ಸಿಟಿಯ ಅತಿದೊಡ್ಡ ಹಾಸ್ಟೆಲ್ ಹಾಲೆಂಡ್ ಹಾಲ್ ಹಾಸ್ಟೆಲ್ ಅನ್ನು ಶನಿವಾರ ಭಾರೀ ಪೊಲೀಸ್ ಪಡೆಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಎಳೆದು ಹೊರಹಾಕಲಾಗಿದೆ.. ಇದೇ ವೇಳೆ ವಿದ್ಯಾರ್ಥಿಗಳು ಆಪರೇಷನ್ ವಾಶ್‌ಔಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದ ಸುಮಾರು ಅರ್ಧ ಡಜನ್ ವಿದ್ಯಾರ್ಥಿಗಳನ್ನು ಪೊಲೀಸರು ಬಲವಂತವಾಗಿ ವಶಕ್ಕೆ ತೆಗೆದುಕೊಂಡರು. ವಿದ್ಯಾರ್ಥಿಗಳ ಹೇಳಿಕೆಯಂತೆ ಪೊಲೀಸರು ತಮಗೆ ಮಾಹಿತಿ ನೀಡದೆ ಹಾಸ್ಟೆಲ್ ಖಾಲಿ ಮಾಡಿಸಿದ್ದಾರೆ. ಈ ನಡುವೆ ವಿದ್ಯಾರ್ಥಿಗಳು ನಮಗೆ ಪರೀಕ್ಷೆಗಳಿವೆ. ಇದರಿಂದ ನಮಗೆ ಸಾಕಷ್ಟು ಸಮಸ್ಯೆಗಳು ಎದುರಾಗಲಿದೆ ಎಂದು ಹೇಳಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದ ಹಾಲೆಂಡ್ ಹಾಲ್ ಹಾಸ್ಟೆಲ್‌ಅನ್ನು ಟ್ರಸ್ಟ್ ನಿರ್ವಹಿಸುತ್ತದೆ. ಟ್ರಸ್ಟ್‌ನ ಪದಾಧಿಕಾರಿಗಳ ಪ್ರಕಾರ, ಹಾಸ್ಟೆಲ್‌ನಲ್ಲಿ 18 ಹಳೆಯ ವಿದ್ಯಾರ್ಥಿಗಳು ಮತ್ತು 8 ಹೊಸ ವಿದ್ಯಾರ್ಥಿಗಳು ಸೇರಿದಂತೆ 26 ವಿದ್ಯಾರ್ಥಿಗಳು ಮಾತ್ರ ಇರಬಹುದಾಗಿದೆ. ಆದರೆ, 200ಕ್ಕೂ ಹೆಚ್ಚು ಕೊಠಡಿಗಳಿರುವ ಈ ಹಾಸ್ಟೆಲ್‌ನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಕ್ರಮವಾಗಿ ವಾಸ ಮಾಡುತ್ತಿದ್ದಾರೆ ಎಂದು ಹೇಳಿತ್ತು.
ಶನಿವಾರ ಬೆಳಗ್ಗೆಯೇ ಹಾಸ್ಟೆಲ್ ವಾಶ್ ಔಟ್ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಹಾಸ್ಟೆಲ್‌ಗಳ ತೆರವು ಸಂದರ್ಭದಲ್ಲಿ ಯಾವುದೇ ಗಲಾಟೆ ಆಗದಂತೆ ನೋಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ಪೊಲೀಸರು, ಪಿಎಸಿ ಮತ್ತು ಆರ್‌ಎಎಫ್ ಅನ್ನು ನಿಯೋಜಿಸಲಾಗಿದೆ. ಅಗ್ನಿಶಾಮಕ ದಳದ ತಂಡಗಳೂ ಇಲ್ಲಿವೆ. ಹಾಸ್ಟೆಲ್ ತೆರವು ವಿರೋಧಿಸಿ ಪ್ರತಿಭಟನೆ ನಡೆಸಿದ ಸುಮಾರು ಅರ್ಧ ಡಜನ್ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಸ್ಲಿಂ ಹಾಸ್ಟೆಲ್‌ನಿಂದ ಸದಾಕತ್ ಖಾನ್ ಬಂಧನ: ಹಾಲೆಂಡ್ ಹಾಲ್ ನಂತರ ಇತರೆ ಹಾಸ್ಟೆಲ್ ಗಳಲ್ಲೂ ವಾಷ್ಔಟ್ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಇದಕ್ಕೂ ಮುನ್ನ ಮುಸ್ಲಿಂ ಬೋರ್ಡಿಂಗ್ ಹಾಸ್ಟೆಲ್ ಕೂಡ ವಾಶ್‌ಔಟ್ ಮಾಡಲಾಗಿದೆ. ಉಮೇಶ್ ಪಾಲ್ ಶೂಟೌಟ್‌ನ ಸಂಚುಕೋರ ಸದಾಕತ್ ಖಾನ್‌ನನ್ನು ಮುಸ್ಲಿಂ ಬೋರ್ಡಿಂಗ್‌ನಿಂದ ಬಂಧನ ಮಾಡಲಾಗಿದೆ. ಹಾಲೆಂಡ್ ಹಾಲ್ ಹಾಸ್ಟೆಲ್ ನಲ್ಲಿ ಕ್ರಿಮಿನಲ್ ಪ್ರವೃತ್ತಿಯ ಅನೇಕ ಜನರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಅಪರಾಧ ಘಟನೆಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಯ್ಯೋ ಪಾಪ.. ಮಹಿಳಾ ಐಎಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ: ಐಆರ್‌ಎಸ್ ಅಧಿಕಾರಿ ಬಂಧನ
ಇದೇ ವೇಳೆ ಹಾಸ್ಟೆಲ್‌ನಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ವಾಶ್‌ಔಟ್ ಕ್ರಮವನ್ನು ವಿರೋಧಿಸಿದ್ದಾರೆ. ಹಾಸ್ಟೆಲ್ ತೆರವು ಮಾಡುವ ಮುನ್ನ ತಮಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಮುಂದಿನ ಹಂತದ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗಳು ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳು ಇನ್ನೇನು ನಡೆಯುವ ಹಂತದಲ್ಲಿದೆ.
ಮಗಳ ಅತ್ಯಾಚಾರಿ ಆರೋಪಿಗಳಿಗೆ ಶಿಕ್ಷೆ ನೀಡದೆ ಸಂಧಾನ ಮಾಡಿದ ಪೊಲೀಸರು; ಬೇಸತ್ತ ದಲಿತ ರೈತನ ಆತ್ಮಹತ್ಯೆ
ವಾಸ್ತವದಲ್ಲಿ ಅಲಹಾಬಾದ್ ಹೈಕೋರ್ಟ್ ಆದೇಶದ ನಂತರ ಹಾಸ್ಟೆಲ್ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವವಿದ್ಯಾನಿಲಯದ ಹಾಲೆಂಡ್ ಹಾಲ್ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಅಕ್ರಮವಾಗಿ ತಂಗಿರುವ ಕುರಿತು ಅರ್ಜಿ ಸಲ್ಲಿಸಲಾಗಿತ್ತು. ಅದರಂತೆ ಹಾಸ್ಟೆಲ್‌ಗಳಿಂದ ವಿದ್ಯಾರ್ಥಿಗಳನ್ನು ಹೊರಹಾಕುವ ಕ್ರಮ ಕೈಗೊಳ್ಳಲಾಗುತ್ತಿದೆ.
