ಐಎಎಸ್ ಅಧಿಕಾರಿಯನ್ನು ಹಿಂಬಾಲಿಸುತ್ತಿದ್ದ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಐಆರ್‌ಎಸ್ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನವದೆಹಲಿ ( ಮೇ 20, 2023): ದೇಶದಲ್ಲಿ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತಲೇ ಇರುತ್ತವೆ. ಇನ್ನು, ಇದು ಜನಸಾಮಾನ್ಯರು, ಬಡವರು ಮಾತ್ರವಲ್ಲ ಉನ್ನತ ಸರ್ಕಾರಿ ಅಧಿಕಾರಿಗಳನ್ನೂ ಬಿಟ್ಟಿಲ್ಲ. ಇದೇ ರೀತಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಐಆರ್‌ಎಸ್ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಐಎಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ರು ಎಂಬ ಆರೋಪವೂ ಕೇಳಿಬಂದಿದೆ.

ಐಎಎಸ್ ಅಧಿಕಾರಿಯನ್ನು ಹಿಂಬಾಲಿಸುತ್ತಿದ್ದ ಹಾಗೂ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಐಆರ್‌ಎಸ್ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧನದ ಬಳಿಕ ಆರೋಪಿ ಐಆರ್‌ಎಸ್‌ ಅಧಿಕಾರಿಗೆ ಈಗಾಗಲೇ ಜಾಮೀನು ನೀಡಲಾಗಿದೆ ಎಂದೂ ತಿಳಿದುಬಂದಿದೆ. ಈ ಆರೋಪ ಸಂಬಂಧ ರಾಷ್ಟ್ರ ರಾಜಧಾನಿ ದೆಹಲಿಯ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 (ಹೆಣ್ಣಿನ ಮೇಲೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ), 354-ಡಿ (ಹಿಂಬಾಲಿಸುವಿಕೆ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನು ಓದಿ: ಉದ್ಯೋಗದ ಟೆನ್ಷನ್‌ ಬೇಡ್ವೆಂದು ಕೆಲಸ ತೊರೆದು ಆರಾಮಾಗಿ ಟೆಂಟ್‌ನಲ್ಲಿ ರಿಲ್ಯಾಕ್ಸ್‌ ಮಾಡ್ತಿರೋ ಯುವಕ!

2020 ರಲ್ಲಿ ಕೋವಿಡ್ -19 ಸಪೋರ್ಟ್‌ ಗ್ರೂಪ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಐಆರ್‌ಎಸ್ ಅಧಿಕಾರಿ ತನ್ನೊಂದಿಗೆ ಸಂಪರ್ಕಕ್ಕೆ ಬಂದರು ಎಂದೂ ಸಂತ್ರಸ್ತೆ ಆರೋಪಿಸಿದ್ದಾರೆ. ಆರೋಪಿ ಅಧಿಕಾರಿ ಹಲವಾರು ಬಾರಿ ತನಗೆ ಕ್ಲೋಸ್‌ ಆಗಲು ಪ್ರಯತ್ನಿಸಿದ್ದರು. ಆದರೆ, ತಾನು ನಿರಾಕರಿಸುತ್ತಿದ್ದೆ ಎಂದೂ ಸಂತ್ರಸ್ತೆ ಮಹಿಳಾ ಅಧಿಕಾರಿ ಹೇಳಿಕೊಂಡಿದ್ದಾರೆ.

ಅಲ್ಲದೆ, ಈ ಬಗ್ಗೆ ಪತಿಗೆ ತಾನು ವಿಷಯ ತಿಳಿಸಿದಾಗ ಅವರು ಆ ಅಧಿಕಾರಿ ಜತೆಗೆ ಮಾತನಾಡಿ, ತಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳುವಂತೆ ಅವರಿಗೆ ಹೇಳಿದರು ಎಂದೂ ಮಹಿಳಾ ಐಎಎಸ್‌ ಅಧಿಕಾರಿ ಹೇಳಿದ್ದಾರೆ. ಆದರೂ, ಸುಧಾರಿಸಿಕೊಳ್ಳದ ಆ ಆರೋಪಿ ಅಧಿಕಾರಿ ತನಗೆ ಕಿರುಕುಳ ನೀಡುತ್ತಿದ್ದರು ಮತ್ತು ತನ್ನನ್ನು ಭೇಟಿಯಾಗುವಂತೆ ಸಂದೇಶ ಕಳುಹಿಸುತ್ತಿದ್ದರು ಎಂದೂ ಮಹಿಳಾ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ವಿವಾಹ ಸಮಾರಂಭದಲ್ಲೇ ಜಗಳವಾಡಿ ವಿಷ ಸೇವಿಸಿದ ವರ - ವಧು: ಮದುವೆ ಗಂಡು ಸಾವು, ಮಹಿಳೆ ಸ್ಥಿತಿ ಗಂಭೀರ

ಅಷ್ಟೇ ಅಲ್ಲದೆ, ಆತ ತನ್ನ ಕಚೇರಿಯಲ್ಲಿ ಒಮ್ಮೆ ಮಹಿಳಾ ಅಧಿಕಾರಿಯನ್ನು ಭೇಟಿಯಾಗಲು ಬಂದಿದ್ದರು ಮತ್ತು ತನ್ನೊಂದಿಗೆ ಸಂಬಂಧ ಹೊಂದಲು ಆಕೆಯನ್ನು ಬೆದರಿಸಲು ಪ್ರಯತ್ನಿಸಿದ್ದಾರೆ ಎಂದು ಮತ್ತೊಬ್ಬರು ಅಧಿಕಾರಿಯೊಬ್ಬರು ಸಹ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬಾಲ್ಯವಿವಾಹಕ್ಕೆ ಬ್ರೇಕ್‌ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್‌ ಮಾಡಲು ಮುಂದಾದ ಅಸ್ಸಾಂ ಸಿಎಂ