Asianet Suvarna News Asianet Suvarna News

ಆನ್‌ಲೈನಲ್ಲಿ ಆಧಾರ್‌ ವಿಳಾಸ ಬದಲಾವಣೆ ಇನ್ನಷ್ಟು ಸುಲಭ

ಯಾವುದೇ ವಿಳಾಸ ಪುರಾವೆ ಇಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಆಧಾರ್‌ ವಿಳಾಸ ಬದಲಾವಣೆಗೆ ಇನ್ನು ಮುಂದೆ ಪರದಾಡಬೇಕಿಲ್ಲ. ಕುಟುಂಬದ ಯಾವುದಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ವಿಳಾಸ ಪುರಾವೆ ಇದ್ದರೆ, ಅವರನ್ನೇ ‘ಕುಟುಂಬದ ಮುಖ್ಯಸ್ಥ’ ಎಂದು ತೋರಿಸಿ ವಿಳಾಸ ಬದಲಿಸಬಹುದಾದ ಆಯ್ಕೆಯನ್ನು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಇದೀಗ ನೀಡಿದೆ.

Online Aadhaar Address Change is even easier now akb
Author
First Published Jan 4, 2023, 9:19 AM IST

ನವದೆಹಲಿ: ಯಾವುದೇ ವಿಳಾಸ ಪುರಾವೆ ಇಲ್ಲ ಎಂಬ ಕಾರಣಕ್ಕೆ ಆನ್‌ಲೈನ್‌ನಲ್ಲಿ ಆಧಾರ್‌ ವಿಳಾಸ ಬದಲಾವಣೆಗೆ ಇನ್ನು ಮುಂದೆ ಪರದಾಡಬೇಕಿಲ್ಲ. ಕುಟುಂಬದ ಯಾವುದಾದರೂ ಒಬ್ಬ ಸದಸ್ಯರ ಹೆಸರಿನಲ್ಲಿ ವಿಳಾಸ ಪುರಾವೆ ಇದ್ದರೆ, ಅವರನ್ನೇ ‘ಕುಟುಂಬದ ಮುಖ್ಯಸ್ಥ’ ಎಂದು ತೋರಿಸಿ ವಿಳಾಸ ಬದಲಿಸಬಹುದಾದ ಆಯ್ಕೆಯನ್ನು ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರ ಇದೀಗ ನೀಡಿದೆ. ಪಡಿತರ ಚೀಟಿ, ಅಂಕಪಟ್ಟಿ, ವಿವಾಹ ಪ್ರಮಾಣಪತ್ರ, ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ನೀಡುವ ಮೂಲಕ ಕುಟುಂಬದ ಮುಖ್ಯಸ್ಥರ ಜತೆಗಿನ ತನ್ನ ಸಂಬಂಧವನ್ನು ನಿರೂಪಿಸಿ ಅರ್ಜಿದಾರರು ಆನ್‌ಲೈನ್‌ನಲ್ಲಿ ವಿಳಾಸ ಬದಲಿಸಬಹುದು.

ಒಂದು ವೇಳೆ, ಇಂತಹ ಯಾವುದೇ ದಾಖಲೆಗಳೂ ಕುಟುಂಬ ಸದಸ್ಯರ (Family member)ಬಳಿ ಇರದಿದ್ದಲ್ಲಿ, ವಿಶಿಷ್ಟ ಗುರುತಿನ ಸಂಖ್ಯೆ ಪ್ರಾಧಿಕಾರವೇ ನಿಗದಿತ ನಮೂನೆಯಲ್ಲಿ ಕುಟುಂಬದ ಮುಖ್ಯಸ್ಥರ ಸ್ವಯಂ ಘೋಷಣೆಯೊಂದನ್ನು ನೀಡುತ್ತದೆ. ಅದನ್ನು ಅರ್ಜಿದಾರ ಬಳಸಿಕೊಳ್ಳಬಹುದು. ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ಬಹುತೇಕ ದಾಖಲೆಗಳು ಇರುತ್ತವೆ. ಆದರೆ ಮಕ್ಕಳು, ಪತಿ/ಪತ್ನಿ, ಪೋಷಕರಂತಹ ಬಂಧುಗಳ ಬಳಿ ವಿಳಾಸ ಪುರಾವೆ ದಾಖಲೆಗಳು ಇರದಿದ್ದರೆ ಅವರಿಗೆ ಈ ಸೌಲಭ್ಯ ಅನುಕೂಲವಾಗುತ್ತದೆ. ಪದೇ ಪದೇ ನಗರದಿಂದ ನಗರಕ್ಕೆ ವಲಸೆ ಹೋಗುವವರಿಗೂ ಇದರಿಂದ ಪ್ರಯೋಜನವಾಗಲಿದೆ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಹುಷಾರ್.. ನಕಲಿ ಆಧಾರ್‌ ಮಾಫಿಯಾ ಇದೆ: ಇದು ಹೇಗೆ ಕೆಲಸ ಮಾಡುತ್ತೆ ಗೊತ್ತಾ?

ತಿದ್ದುಪಡಿ ಹೇಗೆ?:

18 ವರ್ಷ ಮೇಲ್ಪಟ್ಟಯಾರು ಬೇಕಾದರೂ ‘ಕುಟುಂಬದ ಮುಖ್ಯಸ್ಥ’ರಾಗಬಹುದು. ಅವರು ತಮ್ಮ ವಿಳಾಸವನ್ನು ಬಂಧುಗಳ ಜತೆ ಹಂಚಿಕೊಳ್ಳಬಹುದು. ಇದಕ್ಕಾಗಿ ಅರ್ಜಿದಾರರು ಮಾಡಬೇಕಿರುವುದು ಇಷ್ಟು. ‘ಮೈ ಆಧಾರ್‌’ ವೆಬ್‌ಸೈಟ್‌ಗೆ (My Aadhaar' website) ಹೋಗಬೇಕು. ಕುಟುಂಬದ ಮುಖ್ಯಸ್ಥರ ಆಧಾರ್‌ ಸಂಖ್ಯೆ( Unique Identification Number Authority) (ನಮೂದಿಸಬೇಕು. ದೃಢೀಕರಣವಾದ ಬಳಿಕ ಕುಟುಂಬದ ಮುಖ್ಯಸ್ಥನ ಜತೆ ತನಗಿರುವ ಸಂಬಂಧ ರುಜುವಾತುಪಡಿಸುವ ದಾಖಲೆಯನ್ನು ಅರ್ಜಿದಾರ ಅಪ್‌ಲೋಡ್‌ ಮಾಡಬೇಕು. ಅದೇ ವೇಳೆ 50 ರು. ಸೇವಾ ಶುಲ್ಕ ಪಾವತಿಸಬೇಕು. ಶುಲ್ಕ ಪಾವತಿ ಬಳಿಕ ಸೇವಾ ಕೋರಿಕೆ ಸಂಖ್ಯೆ (ಎಸ್‌ಆರ್‌ಎನ್‌) ಅರ್ಜಿದಾರನಿಗೆ ಬರಲಿದೆ. ಅದೇ ವೇಳೆ ಕುಟುಂಬ ಮುಖ್ಯಸ್ಥನ ಮೊಬೈಲ್‌ಗೆ ವಿಳಾಸ ಬದಲಾವಣೆ ಕೋರಿಕೆ ಬಂದಿರುವ ಕುರಿತು ಎಸ್‌ಎಂಎಸ್‌ (SMS)ರವಾನೆಯಾಗಲಿದೆ.

Mangaluru Auto Blast: ಗೃಹ ಸಚಿವ ಹಾಗೂ ಡಿಜಿಪಿಯ ಫೇಕ್ ಆಧಾರ್-ಐಡಿ ಕಾರ್ಡ್ ಮಾಡಿದ ಶಾರೀಕ್

ಆತ ಮೈ ಆಧಾರ್‌ ವೆಬ್‌ಸೈಟ್‌ಗೆ ಹೋಗಿ ವಿಳಾಸ ಬದಲಾವಣೆ ಕೋರಿಕೆ ಬಂದ 30 ದಿನಗಳಲ್ಲಿ ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಒಂದು ವೇಳೆ ಆತ ತಿರಸ್ಕರಿಸಿದರೆ ಅಡ್ರೆಸ್‌ ಬದಲಾಗುವುದಿಲ್ಲ. 50 ರು. ಶುಲ್ಕವನ್ನು ಮರಳಿಸುವುದಿಲ್ಲ.

Follow Us:
Download App:
  • android
  • ios