Asianet Suvarna News Asianet Suvarna News

ಒಂದು ವಾಹನ ಒಂದು ಫಾಸ್ಟ್ಯಾಗ್‌ ಜಾರಿ: ಹಲವು ವಾಹನಕ್ಕೆ ಒಂದೇ ಫಾಸ್ಟ್ಯಾಗ್‌ ಇನ್ನು ಅಸಾಧ್ಯ

ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆಯನ್ನು ನಿರ್ಬಂಧಿಸುತ್ತದೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನೂ ತಡೆಗಟ್ಟುತ್ತದೆ

One vehicle one FASTag enforcement Single FASTag for multiple vehicles is no longer possible akb
Author
First Published Apr 2, 2024, 10:59 AM IST

ಪಿಟಿಐ ನವದೆಹಲಿ: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆಯನ್ನು ನಿರ್ಬಂಧಿಸುತ್ತದೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನೂ ತಡೆಗಟ್ಟುತ್ತದೆ.

ಮಾ.1ರಿಂದಲೇ ಇದು ಜಾರಿಗೆ ಬರಬೇಕಿತ್ತು. ಆದರೆ ನಿರ್ಬಂಧಿತ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಫಾಸ್ಟ್ಯಾಗ್ ಬಳಕೆದಾರರು ಸಮಸ್ಯೆಗೀಡಾದ ಕಾರಣ ಗಡುವನ್ನು 1 ತಿಂಗಳು ವಿಸ್ತರಿಸಲಾಗಿತ್ತು. ಹೀಗಾಗಿ ಏ.1ರಿಂದ ಇದು ಜಾರಿಗೆ ಬಂದಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರ, ‘ಇನ್ನು ಬಹು ಫಾಸ್ಟ್ಯಾಗ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಒಂದು ವಾಹನಕ್ಕೆ ಬಹು ಫಾಸ್ಟ್ಯಾಗ್‌ಗಳನ್ನು ಹೊಂದಿರುವ ಜನರಿಗೆ ಇಂದಿನಿಂದ (ಏಪ್ರಿಲ್ 1) ಆ ಎಲ್ಲ ಫಾಸ್ಟ್ಯಾಗ್‌ಗಳನ್ನೂ ಬಳಸಲು ಸಾಧ್ಯವಾಗುವುದಿಲ್ಲ’ ಎಂದರು.

ಮಾ.15ರೊಳಗೆ ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸಿ, ಹೊಸದನ್ನು ಖರೀದಿಸೋದು ಹೇಗೆ? ಇಲ್ಲಿದೆ ಮಾಹಿತಿ

ಈವರೆಗೆ ಜನರು ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಲಿಂಕ್‌ ಮಾಡುತ್ತಿದ್ದರು ಅಥವಾ ಅನೇಕ ವಾಹನಗಳಿಗೆ ಒಂದೇ ಫಾಸ್ಟ್ಯಾಗ್‌ ಬಳಸುವುದನ್ನು ರೂಢಿಸಿಕೊಂಡಿದ್ದರು. ಇದನ್ನು ತಡೆಗಟ್ಟಿ ಟೋಲ್‌ಗಳಲ್ಲಿ ತಡೆರಹಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ‘ಒಂದು ವಾಹನ-ಒಂದು ಫಾಸ್ಟ್ಯಾಗ್‌’ ನಿಯಮ ಜಾರಿಗೆ ತಂದಿತ್ತು. ಇದಕ್ಕಾಗಿ ಕೆವೈಸಿ ಅಪೂರ್ಣ ಇರುವ ಫಾಸ್ಟ್ಯಾಗ್‌ ಗ್ರಾಹಕರು ತಾವು ಅದನ್ನು ಪಡೆದ ಬ್ಯಾಂಕ್‌ಗಳಿಗೆ ಹೋಗಿ ಕೆವೈಸಿ ನವೀಕರಣ ಮಾಡಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿತ್ತು.

ಫಾಸ್ಟ್ ಟ್ಯಾಗ್ ನಿಂದ ಜಿಎಸ್ ಟಿ ತನಕ ಮಾರ್ಚ್ ತಿಂಗಳಲ್ಲಿ ಬದಲಾಗಲಿವೆ ಈ ನಿಯಮಗಳು, ಹೆಚ್ಚಲಿದೆ ಜೇಬಿನ ಮೇಲಿನ ಹೊರೆ
 

ಹೆದ್ದಾರಿ ಟೋಲ್ ದರ ಹೆಚ್ಚಳಕ್ಕೆ ಚುನಾವಣಾ ಆಯೋಗ ಬ್ರೇಕ್

ನವದೆಹಲಿ: ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತಾವಕ್ಕೆ ಚುನಾವಣಾ ಆಯೋಗ ಅಸ್ತು ಎಂದಿದೆ. ಆದರೆ, ಏ.1ರ ಬದಲು ಲೋಕಸಭೆ ಚುನಾವಣೆಗಳು ಮುಗಿದ ನಂತರ ದರ ಜಾರಿಗೊಳಿಸಬೇಕು ಎಂದು ಸೂಚಿಸಿದೆ. ಇದರಿಂದಾಗಿ ಏ.1ರಿಂದ ಹೈವೇ ಟೋಲ್ ದರ ಹೆಚ್ಚಳ ಬಿಸಿಯಿಂದ ಸದ್ಯಕ್ಕೆ ವಾಹನ ಸವಾರರು ಪಾರಾದಂತಾಗಿದೆ. ಚುನಾವಣಾ ಪ್ರಕ್ರಿಯೆಗಳು ಜೂ.4ಕ್ಕೆ ಮುಗಿಯುತ್ತವೆ. ಹೀಗಾಗಿ ಜೂ.5ರವರೆಗೆ ಪರಿಷ್ಕೃತ ದರಗಳು ಜಾರಿಗೆ ಬರದೇ ಹಳೆಯದೇ ದರಗಳು ಮುಂದುವರಿಯಲಿವೆ. ವಾರ್ಷಿಕ ಪದ್ಧತಿಯಂತೆ 2.100 ಶೇ.5 ರಷ್ಟು ಟೋಲ್ ದರ ಹೆಚ್ಚಳ ನಿರ್ಧರಿಸಿದ್ದ ಹೆದ್ದಾರಿ ಪ್ರಾಧಿಕಾರ, ಈಗ ಚುನಾವಣೆ ನಡೆಯುತ್ತಿರುವ ಕಾರಣ ಆಡಳಿತದ ಹೊಣೆ ಹೊತ್ತಿರುವ ಚುನಾವಣಾ ಆಯೋಗದ ಅನುಮತಿ ಬೇಡಿತ್ತು. ಇದಕ್ಕೆ ಆಯೋಗ ಪ್ರತಿಕ್ರಿಯಿಸಿದೆ.

Follow Us:
Download App:
  • android
  • ios