ಮಾ.15ರೊಳಗೆ ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸಿ, ಹೊಸದನ್ನು ಖರೀದಿಸೋದು ಹೇಗೆ? ಇಲ್ಲಿದೆ ಮಾಹಿತಿ

ಪೇಟಿಎಂ ಫಾಸ್ಟ್ ಟ್ಯಾಗ್ ಅನ್ನು ಮಾ.15ರೊಳಗೆ ಬದಲಾಯಿಸಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. ಹಾಗಾದ್ರೆ ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸೋದು ಹೇಗೆ? 
 

NHAI Advises PPBL FASTag Users To Switch To Alternatives Before March 15 Here is A Step By Step Guide To Deactivate Paytm FASTag anu

ನವದೆಹಲಿ (ಮಾ.14):  ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿಎಲ್) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್  (ಆರ್ ಬಿಐ) ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಮಾರ್ಚ್ 15ರ ಬಳಿಕ ಹೊಸ ಗ್ರಾಹಕರ ಸೇರ್ಪಡೆಗೊಳಿಸದಂತೆ, ಹೊಸ ಠೇವಣಿ ಸ್ವೀಕರಿಸದಂತೆ, ಪ್ರೀಪೇಯ್ಡ್ ಕಾರ್ಡ್ಸ್, ಪೇಟಿಎಂ ವ್ಯಾಲೆಟ್ಸ್, ಫಾಸ್ಟ್ ಟ್ಯಾಗ್ಸ್ ಹಾಗೂ ಎನ್ ಸಿಎಮ್ ಸಿ ಕಾರ್ಡ್ಸ್ ಸೇರಿದಂತೆ ಈಗಿರುವ ಗ್ರಾಹಕರ ಖಾತೆಗಳಿಗೆ ಮಾ.15ರ ಬಳಿಕ ಠೇವಣಿಗಳನ್ನು ಸ್ವೀಕರಿಸದಂತೆ ಆರ್ ಬಿಐ ನಿರ್ಬಂಧ ವಿಧಿಸಿದೆ. ಇದರಿಂದ ವಾಹನಗಳಲ್ಲಿ ಬಳಸುವ ಪೇಟಿಎಂ ಫಾಸ್ಟ್ಯಾಗ್ ಸೇವೆಗೆ ಕೂಡ ಸ್ಥಗಿತಗೊಳ್ಳಲಿದೆ. ಅಲ್ಲದೆ, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ನ್ನು ಅಧಿಕೃತ ಬ್ಯಾಂಕ್ ಪಟ್ಟಿಯಿಂದ ತೆಗೆದು ಹಾಕಿದೆ. ಹಾಗಾದ್ರೆ ಪೇಟಿಎಂ ಫಾಸ್ಟ್ ಟ್ಯಾಗ್ ಸೇವೆ ಹೊಂದಿರೋರು ಅದನ್ನು ನಿಷ್ಕ್ರಿಯಗೊಳಿಸಬೇಕಾ? ಅದು ಹೇಗೆ? ಹೊಸ ಫಾಸ್ಟ್ ಟ್ಯಾಗ್ ಖರೀದಿ ಹೇಗೆ? ಇಲ್ಲಿದೆ ಮಾಹಿತಿ.

ಮಾ.15ರ ಮುನ್ನ ಪೇಟಿಎಂ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸಬೇಕಾ?
ಆರ್ ಬಿಐ ನಿರ್ಬಂಧಗಳ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟ್ ಟ್ಯಾಗ್ ಮಾರ್ಚ್ 15ರ ಬಳಿಕ ಯಾವುದೇ ಹೊಸ ಠೇವಣಿ ಸ್ವೀಕರಿಸೋದಿಲ್ಲ ಅಥವಾ ರೀಚಾರ್ಜ್ ಮಾಡೋದಿಲ್ಲ. ಹೀಗಾಗಿ ಗ್ರಾಹಕರು ಪೇಟಿಎಂ ಫಾಸ್ಟ್ ಟ್ಯಾಗ್ ಕ್ಲೋಸ್ ಮಾಡೋದು ಒಳ್ಳೆಯದು. ಅದರಲ್ಲೂ ಪೇಟಿಎಂ ಫಾಸ್ಟ್ ಟ್ಯಾಗ್ ನಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೆ ಅದು ಕ್ಲೋಸ್ ಮಾಡಿ ಪರ್ಯಾಯ ಅಧಿಕೃತ ಸಂಸ್ಥೆಯಿಂದ ಹೊಸದನ್ನು ಅಂತಿಮ ಗಡುವಿನೊಳಗೆ ಖರೀದಿಸೋದು ಉತ್ತಮ. ಇದರಿಂದ ಮುಂದೆ ಯಾವುದೇ ತೊಂದರೆ ಎದುರಾಗೋದಿಲ್ಲ.  

ಪೇಟಿಎಂ FAStag ಮಾನ್ಯವಲ್ಲ, ಬ್ಯಾಂಕ್ ಪಟ್ಟಿಯಿಂದ PBBL ತೆಗೆದು ಹಾಕಿದ ಹೆದ್ದಾರಿ ಪ್ರಾಧಿಕಾರ!

ಪೇಟಿಎಂ ಫಾಸ್ಟ್ ಟ್ಯಾಗ್ ಕ್ಲೋಸ್ ಮಾಡೋದು ಹೇಗೆ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟ್ ಟ್ಯಾಗ್ ಕ್ಲೋಸ್ ಮಾಡುವ ಪ್ರಕ್ರಿಯೆಗೆ ಅಂದಾಜು  5-7 ಕಾರ್ಯನಿರತ ದಿನಗಳು ಬೇಕು. ಒಮ್ಮೆ ನೀವು ಪೇಟಿಎಂ ಫಾಸ್ಟ್ ಟ್ಯಾಗ್ ಖಾತೆ ಕ್ಲೋಸ್ ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ ಬಳಿಕ ನಿಮಗೆ 'ನಿಮ್ಮ ಫಾಸ್ಟ್ ಟ್ಯಾಗ್ ಖಾತೆ  5-7 ಕಾರ್ಯನಿರತ ದಿನಗಳಲ್ಲಿ ಕ್ಲೋಸ್ ಆಗುತ್ತದೆ. ಭದ್ರತಾ ಠೇವಣಿ ಹಾಗೂ ಕನಿಷ್ಠ ನಿರ್ವಹಣೆ ಬ್ಯಾಲೆನ್ಸ್ ನಿಮ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವ್ಯಾಲೆಟ್ ಗೆ ರೀಫಂಡ್ ಆಗುತ್ತದೆ' ಎಂಬ ಸಂದೇಶ ಬರುತ್ತದೆ. ಬೇರೆ ಬ್ಯಾಂಕಿನಿಂದ ಹೊಸ ಫಾಸ್ಟ್ ಟ್ಯಾಗ್ ಪಡೆಯುವ ಮುನ್ನ ನೀವು ಈಗಿರುವ ನಿಮ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫಾಸ್ಟ್ ಟ್ಯಾಗ್ ಅನ್ನು ಕ್ಲೋಸ್ ಮಾಡೋದು ಅಗತ್ಯ.

ಪೇಟಿಎಂ ಆಪ್ ನಲ್ಲಿ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸೋದು ಹೇಗೆ?
ಹಂತ 1: ಪೇಟಿಎಂ ಆಪ್ ತೆರೆಯಿರಿ.
ಹಂತ 2: ಪ್ರೊಫೈಲ್ ಐಕಾನ್ ಒತ್ತಿ (ಮೇಲೆ-ಎಡ ಬದಿಯಲ್ಲಿ).
ಹಂತ 3: ಹೆಲ್ಪ್ ಹಾಗೂ ಸಪೋರ್ಟ್ ಹೋಗಿ
ಹಂತ 4: "Banking Services & Payments'' ಅಡಿಯಲ್ಲಿ ಫಾಸ್ಟ್ ಟ್ಯಾಗ್ ಆಯ್ಕೆ ಮಾಡಿ.
ಹಂತ 5:  ನಿಷ್ಕ್ರಿಯ ಮನವಿ ಮುಮದುವರಿಸಲು "Chat with us" ಆಯ್ಕೆ ಮಾಡಿ.

ಪೇಟಿಎಂ ಪೋರ್ಟಲ್ ನಲ್ಲಿ ಫಾಸ್ಟ್ ಟ್ಯಾಗ್ ನಿಷ್ಕ್ರಿಯಗೊಳಿಸೋದು ಹೇಗೆ?
ಹಂತ 1: ಫಾಸ್ಟ್ ಟ್ಯಾಗ್ ಪೇಟಿಎಂ ಪೋರ್ಟಲ್ ಗೆ ಭೇಟಿ ನೀಡಿ ಹಾಗೂ ಲಾಗಿನ್ ಆಗಿ.
ಹಂತ 2: ಪರಿಶೀಲನೆಗೆ ಫಾಸ್ಟ್ ಟ್ಯಾಗ್ ಸಂಖ್ಯೆ ಹಾಗೂ ಅಗತ್ಯ ಮಾಹಿತಿಗಳನ್ನು ನೀಡಿ.
ಹಂತ 3: "Help & Support'' ಆಯ್ಕೆ ಮಾಡಿ ಹಾಗೂ  "I Want to Close My Fastag Profile'' ಆರಿಸಿ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ; ಬಿಎಸ್ ಇ ಫೈಲ್ಲಿಂಗ್ ನಲ್ಲಿ ಮಾಹಿತಿ ಬಹಿರಂಗ

ಹೊಸ ಫಾಸ್ಟ್ ಟ್ಯಾಗ್ ಖರೀದಿ ಹೇಗೆ?
ಹಂತ 1: "My FASTag"ಆಪ್ ಡೌನ್ಲೋಡ್ ಮಾಡಿ.
ಹಂತ 2: ಆಪ್ ತೆರೆದು "Buy Fastag''ಆಯ್ಕೆಗೆ ತೆರಳಿ.
ಹಂತ 3: ಅಮೆಜಾನ್ ಅಥವಾ ಫ್ಲಿಪ್ ಕಾರ್ಟ್ ಲಿಂಕ್ ಆಯ್ಕೆ ಮಾಡಿ.
ಹಂತ 4: ಫ್ಲಾಟ್ ಫಾರ್ಮ್ ಆಯ್ಕೆ ಮಾಡುವ ಮೂಲಕ, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಫಾಸ್ಟ್ ಟ್ಯಾಗ್ ಸಕ್ರಿಯಗೊಳಿಸಿ. 


 

Latest Videos
Follow Us:
Download App:
  • android
  • ios