79ನೇ ವಸಂತಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ| ಟ್ವೀಟ್ ಮೂಲಕ ಬಿಎಸ್‌ವೈಗೆ ಮೋದಿ ಶುಭಾಶಯ| ಅತ್ಯಂತ ಅನುಭವಿ ನಾಯಕ ಎಂದು ರಾಜಾಹುಲಿ ಹೊಗಳಿದ ಪ್ರಧಾನಿ!

ಬೆಂಗಳೂರು(ಫೆ.27): ಇಂದು ಸಿಎಂ ಯಡಿಯೂರಪ್ಪಗೆ ಹುಟ್ಟುಹಬ್ಬದ ಸಂಭ್ರಮ. 79ನೇ ವಸಂತಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಸಚಿವರು, ಶಾಸಕರು ಸೇರಿದಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡಾ ಶುಭ ಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಡಿಯೂರಪ್ಪರನ್ನು ಅತ್ಯಂತ ಅನುಭವಿ ನಾಯಕ ಎಂದು ಕರೆದಿದ್ದಾರೆ.

Scroll to load tweet…

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹುಟ್ಟುಹಬ್ಬ ಪ್ರಯುಕ್ತ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 'ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪನವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಯಡಿಯೂರಪ್ಪನವರು ನಮ್ಮ ಅತ್ಯಂತ ಹಿರಿಯ ಅನುಭವಿ ನಾಯಕರಲ್ಲೊಬ್ಬರು. ಅವರು ಯತತಮ್ಮ ಜೀವನವನ್ನು ರೈತರು, ಬಡವರ ಅಭಿವೃದ್ಧಿಗಾಗಿ ಮುಡಿಪಾಗಿಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ದೇವರು ಆರೋಗ್ಯ ಆಯಸ್ಸು ನೀಡಲೆಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

Scroll to load tweet…

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡಾ ಬಿಎಸ್‌ವೈಗೆ ಜನ್ಮ ದಿನದ ಶುಭಾಶಯ ಕೋರಿದ್ದು, 'ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಅವರ ಜನ್ಮದಿನದಂದು ಶುಭಾಶಯ ತಿಳಿಸುತ್ತೇನೆ. ಅವರು ಕರ್ನಾಟಕದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಬಡವರನ್ನು ಮೇಲೆತ್ತುವ ಹಾಗೂ ರೈತರ ಸಬಲೀಕರಣದಲ್ಲಿ ಅವರು ಅವಿರತ ಕೆಲಸ ಮಾಡುತ್ತಿದ್ದಾರೆ. ಅವರ ಸುದೀರ್ಘ ಮತ್ತು ಆರೋಗ್ಯಯುತ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

Scroll to load tweet…

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಕೂಡಾ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು ಎಂದುಕನ್ನಡದಲ್ಲಿ ಶುಭ ಹಾರೈಸಿದ್ದಾರೆ.