ದೆಹಲಿಯ ಕಲ್ಕಾಜಿ ದೇಗುಲದಲ್ಲಿ ಕುಸಿದ ವೇದಿಕೆ: ಮಹಿಳೆ ಬಲಿ, 17 ಮಂದಿಗೆ ತೀವ್ರ ಗಾಯ
ಗಾಯಕ ಬಿ ಪ್ರಾಕ್ ಆಗಮಿಸಿದಾಗ, ನೂಕುನುಗ್ಗಲಿನ ಪರಿಸ್ಥಿತಿಯು ಉಂಟಾಯಿತು. ಬದಿಯಲ್ಲಿ ಒಂದು ವೇದಿಕೆ ಇತ್ತು, ಮತ್ತು ಬಹಳಷ್ಟು ಜನರು ಅದರ ಮೇಲೆ ಜಮಾಯಿಸಿದ ಪರಿಣಾಮವಾಗಿ ಅದು ಕುಸಿದುಬಿತ್ತು ಎಂದು ದೇವಸ್ಥಾನದ ಅರ್ಚಕ ಹೇಳಿದ್ದಾರೆ.
ನವದೆಹಲಿ (ಜನವರಿ 28, 2024): ದೆಹಲಿಯ ಪ್ರಸಿದ್ಧ ಕಲ್ಕಾಜಿ ದೇವಸ್ಥಾನದ ಬಳಿ ಶನಿವಾರ ಮಧ್ಯರಾತ್ರಿ ದುರಂಗ ಘಟನೆ ನಡೆದಿದೆ. ಪ್ರಸಿದ್ಧ ದೇಗುಲದ ಮಾತಾ ಜಾಗರಣದಲ್ಲಿ ಮರ ಮತ್ತು ಕಬ್ಬಿಣದ ಚೌಕಟ್ಟಿನಿಂದ ಮಾಡಿದ ವೇದಿಕೆ ಕುಸಿದು ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ. ಅಲ್ಲದೆ, ಈ ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪೊಲೀಸ್ ಮತ್ತು ಸುದ್ದಿ ಸಂಸ್ಥೆ ಹಂಚಿಕೊಂಡ ದೃಶ್ಯಗಳ ಪ್ರಕಾರ, ಸಂಘಟಕರು ಮತ್ತು ವಿಐಪಿಗಳ ಕುಟುಂಬಗಳಿಗೆ ಕುಳಿತುಕೊಳ್ಳಲು ಮುಖ್ಯ ವೇದಿಕೆಯ ಬಳಿ ಎತ್ತರದ ವೇದಿಕೆಯನ್ನು ರಚಿಸಲಾಗಿತ್ತು. ಮಧ್ಯರಾತ್ರಿ 12.30ರ ಸುಮಾರಿಗೆ ಶ್ಲೋಕಗಳನ್ನು ಹಾಡುತ್ತಿದ್ದಾಗ ಹಲವಾರು ಭಕ್ತರು ವೇದಿಕೆಯ ಮೇಲೆ ಹತ್ತಿದರು. ಇದರಿಂದ ಪ್ರೇಕ್ಷಕರ ಭಾರ ತಾಳಲಾರದೆ ವೇದಿಕೆ ಕುಸಿಯಿತು ಎಂದು ತಿಳಿದುಬಂದಿದೆ.
ಯಾದಗಿರಿ: ಜೆಡಿಎಸ್ ಮಾಜಿ ಶಾಸಕ ನಾಗನಗೌಡ ಕಂದಕೂರ್ ಹೃದಯಾಘಾತದಿಂದ ವಿಧಿವಶ!
ಇನ್ನು, ಕಾರ್ಯಕ್ರಮ ನಡೆಸಲು ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೇವಸ್ಥಾನದ ಮಹಂತ್ ಪರಿಸರದಲ್ಲಿ ರಾತ್ರಿಯ ಜಾಗರಣೆ, ಹಾಡು, ನೃತ್ಯ ಮತ್ತು ದೇವರ ಪೂಜೆಗಾಗಿ ಪೂಜೆಯನ್ನು ಒಳಗೊಂಡಿರುವ ಹಿಂದೂ ಆಚರಣೆಯಾದ ದುರ್ಗಾ ದೇವಿಯ ಜಾಗರಣೆಯಲ್ಲಿ ಸುಮಾರು 1,500-1,600 ಜನರು ಪಾಲ್ಗೊಂಡಿದ್ದರು.
ಇನ್ನು, ಈ ಸಂಬಂಧ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿ, ನಮಗೆ ಮಧ್ಯರಾತ್ರಿ 12.30 ರ ಸುಮಾರಿಗೆ ಕರೆ ಬಂತು. ಕಲ್ಕಾಜಿ ದೇವಸ್ಥಾನದಲ್ಲಿ ಜಾಗರಣ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದ್ದ ವೇದಿಕೆ ಕುಸಿದಿದೆ. ತಂಡಗಳು ಸ್ಥಳಕ್ಕೆ ಧಾವಿಸಿವೆ. ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿರುವ ಬಗ್ಗೆ ಪಿಟಿಐ ವರದಿ ಮಾಡಿದೆ.
ಎಂಗೇಜ್ಮೆಂಟ್ ಆಗಿರುವ ಗರ್ಲ್, ಸಾಯಲು ಹೊರಟಿರುವ ಬಾಯ್ ಮಧ್ಯೆ ಯಾಕೆ ಹುಟ್ಕೊಂಡ್ತು ಲವ್..!
ಅಲ್ಲದೆ, ಗಾಯಕ ಬಿ ಪ್ರಾಕ್ ಬಂದ ನಂತರ ನೂಕುನುಗ್ಗಲು ಉಂಟಾಯಿತು ಎಂದು ದೇವಸ್ಥಾನದ ಅರ್ಚಕ ಸುನೀಲ್ ಸನ್ನಿ ಹೇಳಿದ್ದಾರೆ. ನಿನ್ನೆ ಕಲ್ಕಾಜಿ ದೇವಸ್ಥಾನದಲ್ಲಿ 23ನೇ ವಾರ್ಷಿಕ ಜಾಗರಣೆ ನಡೆದಿತ್ತು. ಪ್ರಮುಖ ಗಾಯಕರು ಮತ್ತು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಬಿ ಪ್ರಾಕ್ ಆಗಮಿಸಿದಾಗ, ನೂಕುನುಗ್ಗಲಿನ ಪರಿಸ್ಥಿತಿಯು ಉಂಟಾಯಿತು.
ಬದಿಯಲ್ಲಿ ಒಂದು ವೇದಿಕೆ ಇತ್ತು, ಮತ್ತು ಬಹಳಷ್ಟು ಜನರು ಅದರ ಮೇಲೆ ಜಮಾಯಿಸಿದ ಪರಿಣಾಮವಾಗಿ ಅದು ಕುಸಿದುಬಿತ್ತು. ಕಲ್ಕಾಜಿ ಮಂದಿರದ ಆಡಳಿತ, ಪೊಲೀಸರು ಮತ್ತು ಸ್ವಯಂಸೇವಕರು ಪರಿಸ್ಥಿತಿಯನ್ನು ನಿಭಾಯಿಸಿದರು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಾನಿಯನ್ನು ಕಡಿಮೆ ಮಾಡಿದರು. ಮುಖ್ಯ ವೇದಿಕೆ ಕುಸಿಯಲಿಲ್ಲ, ಬದಿಯ ಕಡೆಗೆ ಭಕ್ತರು ಕುಳಿತುಕೊಳ್ಳಲು ವೇದಿಕೆಯನ್ನು ಮಾಡಲಾಗಿತ್ತು. ಆದರೆ, ಅದು ಕುಸಿದು ಬಿದ್ದಿದೆ ಎಂದೂ ಅವರು ಎಎನ್‌ಐಗೆ ತಿಳಿಸಿದರು.