Asianet Suvarna News Asianet Suvarna News

ನೆಹರು ಮೇಲೆ ಬಿಜೆಪಿಗೆ ಯಾಕೆ ಇಷ್ಟೊಂದು ದ್ವೇಷ? ಕೇಂದ್ರಕ್ಕೆ ಶಿವಸೇನಾ ನಾಯಕ ರಾವತ್ ಪ್ರಶ್ನೆ!

  • 75ನೇ ಸ್ವಾತಂತ್ರ್ಯ ದಿನಾಚರಣೆಗೆ ಕೇಂದ್ರ ಬಿಡುಗಡೆ ಮಾಡಿದ ಫೋಟದಲ್ಲಿ ನೆಹರು ಕಾಣೆ
  • ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ, ಇದೀಗ ಮೈತ್ರಿ ಪಕ್ಷ ಶಿವಸೇನೆ ನಾಯಕನ ಪ್ರಶ್ನೆ
  • ಮಾಜಿ ಪ್ರಧಾನಿ ನೆಹರು ದ್ವೇಷಿಸುತ್ತಿರುವುದು ಯಾಕೆ? ಬಿಜೆಪಿಗೆ ಸಂಜಯ್ ರಾವತ್ ಪ್ರಶ್ನೆ
Omission Of Nehru Image Shiv Sena MP Sanjay Raut Bjp Why Do You Hate Former PM So Much ckm
Author
Bengaluru, First Published Sep 5, 2021, 5:43 PM IST

ಮುಂಬೈ(ಸೆ.05) ಮಾಜಿ ಪ್ರಧಾನಿ ನೆಹರು ಫೋಟೋ ವಿವಾದ ಭಾರಿ ಸದ್ದು ಮಾಡುತ್ತಿದೆ. ಭಾರತೀಯ ಕೌನ್ಸಿಲ್ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆ ಮಾಡಿದ ಫೋಟೋದಲ್ಲಿ ಎಲ್ಲಾ ಪ್ರಧಾನಿಗಳ ಭಾವಚಿತ್ರ ಹಾಕಲಾಗಿದೆ. ಆದರೆ ನೆಹರು ಫೋಟೋ ಮಾಯವಾಗಿತ್ತು. ಈ ಕುರಿತು ಕಾಂಗ್ರೆಸ್ ತೀವ್ರ ಆಕ್ಷೇಪ ಸಲ್ಲಿಸಿತ್ತು. ಇದೀಗ ಮೈತ್ರಿ ಪಕ್ಷ ಶಿವಸೇನಾ ನಾಯಕ ಸಂಜಯ್ ರಾವತ್ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಬಿಜೆಪಿ ನೆಹರೂ ದ್ವೇಷಿಸುತ್ತಿರುವುದೇಕೆ ಎಂದು ರಾವತ್ ಕೇಳಿದ್ದಾರೆ.

ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ: ನೆಹರೂ ಫೋಟೋ ಮಾಯ, ಕಾಂಗ್ರೆಸ್‌ ಕಿಡಿ

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದವರು ಇತಿಹಾಸ ಉಲ್ಲೇಖಿಸಿದರೆ ಇದಕ್ಕಿಂತ ಭಿನ್ನವಾಗಿ ನಿರೀಕ್ಷಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ವೀರನನ್ನು ಹೊರಗಿಟ್ಟು ಪೋಸ್ಟರ್ ಹಾಕಿರುವ ಬಿಜೆಪಿ, ನೆಹರುವನ್ನು ದ್ವೇಷಿಸಲು ಕಾರಣವೇನು ಎಂದು ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ನೆಹರೂ ಈ ದೇಶದಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ಕಟ್ಟಿದ್ದಾರೆ. ನೆಹರೂ ಸಿದ್ಧಾಂತಕ್ಕೆ, ನಿರ್ಧಾರಗಳಿಗೆ ವಿರೋಧವಿರಬಹುದು. ಆದರೆ ಅವರ ಕೊಡುಗೆಯನ್ನು ಕಡೆಗಣಿಸಲು ಸಾಧ್ಯವೇ ಎಂದು ರಾವತ್ ಕೇಂದ್ರ ಸರ್ಕಾರವನ್ನು ಕೇಳಿದ್ದಾರೆ. ಕೇಂದ್ರ ಸರ್ಕಾರ
ಯೋಜನೆಗಳು ನೆಹರು ದೂರದೃಷ್ಟಿಯ ಯೋಜನೆಗಳಾಗಿವೆ. ಯೋಜನೆ ಆರಂಭದಲ್ಲಿ ನೆಹರೂ ದೂರದೃಷ್ಟಿ ಎಂದು ಬಿಂಬಿಸುವ ಬಿಜೆಪಿ ನೆಹರೂ ಫೋಟೋವನ್ನೇ ಮಾಯಮಾಡಿದ್ದು ಯಾಕೆ ಎಂದಿದ್ದಾರೆ.

ನೆಹರೂ ಫೋಟೋವನ್ನು ಪೋಸ್ಟರ್‌ನಿಂದ ತೆಗೆದ ಕಾರಣವನ್ನು ದೇಶದ ಜನತೆ ಮುಂದೆ ಬಹಿರಂಗ ಪಡಿಸಬೇಕು. ಬಿಜೆಪಿ ನಿಲುವುಗಳು, ಅಸಲಿ ಮುಖ ಜನರಿಗೆ ತಿಳಿಯಬೇಕು ಎಂದು ಸಂಜಯ್ ರಾವತ್ ಹೇಳಿದ್ದಾರೆ.

Follow Us:
Download App:
  • android
  • ios