'ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವವರೆಗೂ ಚುನಾವಣೆಗೆ ನಿಲ್ಲಲ್ಲ' ಓಮರ್ ಶಪಥ

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದು ಮಾಡಿ ಒಂದು ವರ್ಷ ಸಮೀಪ/ ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗೆ ನಿಲ್ಲಲ್ಲ/ ಎನ್ ಸಿ ನಾಯಕ ಓಮರ್ ಅಬ್ದುಲ್ಲಾ ಶಪಥ

Omar Abdullah Won t Contest Jammu And Kashmir Assembly Polls It Remains A Union Territory

ಶ್ರೀನಗರ (ಜು. 27) ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಿಎಂ,  ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ  ನಾಯಕ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದು ಮಾಡಿ ಒಂದು ವರ್ಷ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಬ್ದುಲ್ಲಾ ಈ ಮಾತನ್ನಾಡಿದ್ದಾರೆ.  ಮಾತನಾಡುತ್ತ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಟೀಕಿಸಿದ್ದಾರೆ.

ಎಂಟು ತಿಂಗಳ ನಂತರ ಬಿಡುಗಡೆಯಾದ ಓಮರ್ ಹೇಳಿದ ಮಾತು

ಕಳೆದ 2019ರ ಆಗಸ್ಟ್  5 ರಂದು ತೆಗೆದುಕೊಂಡ ತೀರ್ಮಾನದ ನಂತರ ಜಮ್ಮು ಮತ್ತು ಕಾಶ್ಮೀರ ಸಾಂವಿಧಾನಿಕ, ಕಾನೂನಾತ್ಮಕ, ಆರ್ಥಿಕ ಸ್ವಾಯತ್ತತೆ ಕಳೆದುಕೊಂಡಿದೆ. ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರವನ್ನು ಮೊದಲಿನಿಂದಲೂ ವಿರೋಧ ಮಾಡಿಕೊಂಡೆ ಬಂದಿದ್ದೇವೆ. ಯಾವುದೇ ಸ್ವಾತಂತ್ರ್ಯವಿಲ್ಲದ ವಿಧಾನಸಭೆಯ ಸದಸ್ಯನಾಗಲು ನನಗೆ ಇಷ್ಟ ಇಲ್ಲ ಎಂದು ಅಬ್ದುಲ್ಲಾ ಹೇಳಿದ್ದಾರೆ.

ನಮ್ಮ ಪಕ್ಷ ಸಾವಿರಾರು ಕಾರ್ಯಕರ್ತರನ್ನು ಇದೇ ಕಾರಣಕ್ಕೆ ಕಳೆದುಕೊಂಡಿದೆ.  ಕಾರಣವಿಲ್ಲದೇ ವಿವಿಧ ರಾಜಕೀಯ  ಪಕ್ಷದ ನಾಯಕರ ಬಂಧನ ಮಾಡಿ ಹಿಂಸೆ ನೀಡಲಾಗಿದೆ, ಇಂದಿಗೂ ಅದು ಮುಂದುವರಿದಿದೆ. ಇಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಜಮ್ಮು ಕಾಶ್ಮೀರ ವಿಶೇಷ ಸ್ಥಾನ ಮಾನ ರದ್ದು ವಿಚಾರ ಸಂಬಂಧ ಎದ್ದಿದ್ದ ಗೊಂದಲಗಳ ನಡುವೆ ಓಮರ್ ಅಬ್ದುಲ್ಲಾ ಅವರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಸುಮಾರು 232 ದಿನ ಕಸ್ಟಡಿಯಲ್ಲಿ ಇದ್ದರು.

 

Latest Videos
Follow Us:
Download App:
  • android
  • ios