ಎಂಟು ತಿಂಗಳ ಬಳಿಕ ಕಾಶ್ಮೀರ ಮಾಜಿ ಸಿಎಂ ಒಮರ್‌ ಬಿಡುಗಡೆ|  ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾರನ್ನು ಜಮ್ಮು ಕಾಶ್ಮೀರ ಆಡಳಿತ ಮಂಗಳವಾರ ಬಂಧ ಮುಕ್ತ 

ಶ್ರೀನಗರ(ಮಾ.೨೫): 8 ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಜಮ್ಮು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾರನ್ನು ಜಮ್ಮು ಕಾಶ್ಮೀರ ಆಡಳಿತ ಮಂಗಳವಾರ ಬಂಧ ಮುಕ್ತ ಮಾಡಿದೆ. ತಮ್ಮ ತಂದೆ ಫಾರೂಕ್‌ ಅಬ್ದುಲ್ಲಾ ಬಿಡುಗಡೆಯಾದ 10 ದಿನದ ಬಳಿಕ ಒಮರ್‌ ಬಂಧನದಿಂದ ಮುಕ್ತರಾಗಿದ್ದಾರೆ.

2019 ಆ.5ರಂದು ಜಮ್ಮು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರ ರದ್ದು ಮಾಡುವ ಮುನ್ನ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧನಕ್ಕೆ ಒಳ ಪಡಿಸಲಾಗಿತ್ತು.

Scroll to load tweet…

ಒಮರ್‌ ಬಂಧ ಮುಕ್ತರಾಗುತ್ತಿರುವುದನ್ನು ಗೃಹ ಕಾರ್ಯದರ್ಶಿ ಶಲೀನ್‌ ಕಬ್ರಾ ಘೋಷಣೆ ಮಾಡುತ್ತಿದ್ದಂತೆಯೇ, ಹರಿ ನಿವಾಸದಲ್ಲಿರುವ ಅವರ ಮನೆ ಮುಂದೆ ತಾಯಿ ಸೇರಿ ನೂರಾರು ಅಭಿಮಾನಿಗಳು ಬಂದು ಸ್ವಾಗತಿಸಿದರು.