ಜೂನ್ 2 ರಂದು ಸಂಭವಿಸಿದ ಭೀಕರ ತ್ರಿವಳಿ ರೈಲು ಅಪಘಾತದ ಬಳಿಕ ರದ್ದಾಗಿದ್ದ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಇದೀಗ ಮತ್ತೆ ಪ್ರಯಾಣ ಆರಂಭಿಸಿದೆ. ಇಂದು ಶಾಲಿಮಾರ್ ರೈಲು ನಿಲ್ದಾಣದಲ್ಲಿ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಲಾಗಿದೆ. 

ಕೋಲ್ಕತಾ(ಜೂ.07): ಒಡಿಶಾದದಲ್ಲಿ ನಡೆದ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಅಪಘಾತದ ಭೀಕರತೆ ಇನ್ನೂ ಹಾಗೇ ಇದೆ. ಹಲವು ಮೃತದೇಹಗಳು ಶವಗಾರದಲ್ಲಿ ಅನಾಥವಾಗಿದೆ. ಗಾಯಗೊಂಡವರ ಚಿಕಿತ್ಸೆ ಮುಂದುವರಿದಿದೆ. ಭೀಕರ ಅಪಘಾತದಿಂದ ಹಲವು ರೈಲು ಸಂಚಾರ ರದ್ದಾಗಿತ್ತು. ತ್ವರಿತಗತಿಯಲ್ಲಿ ರೈಲು ಹಳಿಗಳ ದುರಸ್ತಿ ಕಾರ್ಯಮುಗಿಸಿದ ಇಲಾಖೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ತ್ರಿವಳಿ ರೈಲು ಅಪಘಾತದ ಬಳಿಕ ರದ್ದಾಗಿದ್ದ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಇದೀಗ ಮತ್ತೆ ಪ್ರಯಾಣ ಆರಂಭಿಸಿದೆ. ಇಂದು ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಲ್ಲಿ ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರುನಿಶಾನೆ ತೋರಲಾಗಿದೆ. ಭೀಕರ ಅಪಘಾತದ ಬಳಿಕ ಮೊದಲ ಬಾರಿಗೆ ಕೊರಮಂಡೆಲ್ ಎಕ್ಸ್‌ಪ್ರೆಸ್ ಚೆನ್ನೈನತ್ತ ಹೊರಟಿದೆ.

ಬಾಲಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ಅಪಘಾತದ ಬಳಿಕ ಕೊರಮಂಡಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಿತ್ತು. ಇಂದು(ಜೂ.07) ಕೊರಮಂಡೆಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಗೊಂಡಿದೆ. ಬಹನಗ ರೈಲು ನಿಲ್ದಾಣದ ಬಳಿ ಎಲ್ಲಾ ರೈಲು ಹಳಿಗಳ ದರುಸ್ತಿ ಮಾಡಲಾಗಿದ್ದು, ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸತತ 51 ಗಂಟೆಗಳ ಕಾಲ ದುರಸ್ತಿ ಕಾರ್ಯ ನಡೆದಿತ್ತು.

ರೈಲು ದುರಂತದಲ್ಲಿ ಪತಿ ಮೃತ, ಸುಳ್ಳು ಹೇಳಿ 17 ಲಕ್ಷ ಪರಿಹಾರ ಪಡೆಯಲು ಯತ್ನಿಸಿದ ಪತ್ನಿ!

ತ್ರಿವಳಿ ರೈಲು ದುರಂತಕ್ಕೆ ಕಾರ​ಣ​ವಾ​ಗಿದ್ದ ಕೋರ​ಮಂಡಲ್‌ ಎಕ್ಸ್‌​ಪ್ರೆಸ್‌ ರೈಲು, ಅಪ​ಘಾತ ಸಂಭ​ವಿ​ಸಿದ ನಂತರ ಮಂಗ​ಳ​ವಾರ(ಜೂ.06) ರಂದು ಬಾಹಾ​ನಗಾ ನಿಲ್ದಾ​ಣದ ಮೂಲಕ ಸಂಚ​ರಿ​ಸಿತ್ತು. ಈ ವೇಳೆ ಕೇವಲ 30 ಕಿ.ಮೀ. ವೇಗ​ದಲ್ಲಿ ರೈಲು ಸಾಗಿತು. ಅಪ​ಘಾ​ತದ ದಿನ ಗಂಟೆಗೆ 128 ಕಿ.ಮೀ. ವೇಗ​ದಲ್ಲಿ ರೈಲು ಸಂಚ​ರಿ​ಸು​ತ್ತಿ​ತ್ತು. ರೈಲು ಸಂಚಾರ ಪುನಾ​ರಂಭದ ನಂತರ ಬಾಹಾ​ನಗಾ ಮೂಲಕ 70 ರೈಲು​ಗಳು ಸಾಗಿ​ವೆ.

Scroll to load tweet…

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂವರು ಗಾಯಾಳುಗಳು ಮೃತಪಟ್ಟಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 278ಕ್ಕೆ ಏರಿಕೆಯಾಗಿದೆ. ಇನ್ನು ‘278 ಮೃತರನ್ನು ಹೊರತುಪಡಿಸಿ ಅಪಘಾತದಲ್ಲಿ 1,100 ಜನ ಗಾಯಗೊಂಡಿದ್ದಾರೆ’ ಎಂದು ಖುರ್ದಾ ವೀಭಾಗೀಯ ರೈಲ್ವೆ ವ್ಯವಸ್ಥಾಪಕ ರಿಂಕೇಶ್‌ ರಾಯ್‌ ತಿಳಿಸಿದ್ದಾರೆ.

ಒಡಿಶಾ ರೈಲು ದುರಂತ ಹುಟ್ಟಿಸಿದೆ ಅನುಮಾನ: ಪುಟ್ಟ ಗಾಯವೂ ಇಲ್ಲದೇ ಸಾವು ಹೇಗಾಯ್ತು?

ಅಪಘಾತದ ಬಳಿಕ 288 ಜನರು ಮೃತಪಟ್ಟಿದ್ದಾರೆ ಎನ್ನಲಾಗಿತ್ತದರೂ ಕೆಲ ಶವಗಳನ್ನು ಎರಡು ಬಾರಿ ಎಣಿಸಲಾಗಿದೆಯಾದ್ದರಿಂದ ಒಟ್ಟು ಮೃತರ ಸಂಖ್ಯೆ 275 ಎಂದು ಸರ್ಕಾರ ಘೋಷಿಸಿತ್ತು. ಸದ್ಯ 278 ಮೃತದೇಹಗಳ ಪೈಕಿ 177 ದೇಹಗಳನ್ನು ಗುರುತಿಸಲಾಗಿದ್ದು, ಇನ್ನೂ 101 ಶವಗಳನ್ನು ಗುರುತಿಸಬೇಕಾಗಿದೆ. ಸಂಬಂಧಿಕರು ಬಂದು ಗುರುತಿಸದ ಈ ಶವಗಳನ್ನು ಸ್ಥಳೀಯ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಂರಕ್ಷಿಸಿ ಇರಿಸಲಾಗಿದೆ. ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಛತ್ತೀಸ್‌ಗಢ, ಬಿಹಾರ, ತೆಲಂಗಾಣ ಮತ್ತು ಆಂಧ್ರ ಪ್ರದೇಶದ ರಾಜ್ಯಗಳಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ರೈಲ್ವೆ ಮುಂದಾಗಿದೆ.