Asianet Suvarna News Asianet Suvarna News

Noise Pollution: DJ ಶಬ್ಧಕ್ಕೆ 63 ಕೋಳಿ ಸಾವು, FIR ದಾಖಲಿಸಿದ ಫಾರ್ಮ್ ಮಾಲೀಕ!

* ಡಿಜೆ ಸೌಂಡ್‌ಗೆ ಬೆಚ್ಚಿ ಕೋಳಿಗಳು ಸಾವು

* ಮದುವೆ ಮನೆಯವರ ಮೇಲೆ ದೂರು ದಾಖಲಿಸಿದ ಕೋಳಿ ಫಾರ್ಮ್ ಮಾಲೀಕ

* ಪ್ರಾಣಿಗಳಲ್ಲಿ ಹೃದಯಾಘಾತ ಹೆಚ್ಚಳವಾಗೋದು ಹೇಗೆ?

Odisha poultry farm owner alleges loud DJ music killed 63 of his birds pod
Author
Bangalore, First Published Nov 24, 2021, 8:07 PM IST
  • Facebook
  • Twitter
  • Whatsapp

ಒಡಿಶಾ(ನ.24): ಒಡಿಶಾದ (Odisha) ಬಾಲಸೋರ್‌ನಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಸಾಂಪ್ರದಾಯಿಕ ಮದುವೆಯಲ್ಲಿ (Wedding) ಬ್ಯಾಂಡ್, ಪಟಾಕಿ ಮತ್ತು ನೃತ್ಯದ ಶಬ್ದದಿಂದ 63 ಕೋಳಿಗಳು ಸಾವನ್ನಪ್ಪಿವೆ. ಈ ಘಟನೆಯ ಬಗ್ಗೆ ಈ ಕೋಳಿಗಳ ಮಾಲೀಕ ರಂಜಿತ್ ಕುಮಾರ್ ಪರಿದಾ ಪೊಲೀಸರಿಗೆ ದೂರು ನೀಡಿದ್ದಾರೆ. ಭಾನುವಾರ ಮಧ್ಯರಾತ್ರಿ ಸ್ವಲ್ಪ ಮೊದಲು ಭಾರೀ ಧ್ವನಿವರ್ಧಕಗಳಿಂದ ಕೂಡಿದ್ದ ದಿಬ್ಬಣ ತನ್ನ ಕೋಳಿ ಫಾರಂ (Poultry) ಮೂಲಕ ಹಾದುಹೋಯಿತು ಎಂದು ಪರಿದಾ ಆರೋಪಿಸಿದ್ದಾರೆ. ಅವರು AFP ಸುದ್ದಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡುತ್ತಾ, ಧ್ವನಿ ತುಂಬಾ ಹೆಚ್ಚಿದೆ ಇದರಿಂದ ಕೋಳಿಗಳು ಹೆದರುತ್ತವೆ. ಹೀಗಾಗಿ ಶಬ್ಧ ಕೊಂಚ ಕಡಿಮೆ ಮಾಡಿ ಎಂದು ಮನವಿ ಮಾಡಿದೆ. ಆದರೆ ಯಾರೂ ನನ್ನ ಮಾತು ಕೆಲಲಿಲ್ಲ. ಬದಲಾಗಿ ವರನ ಗೆಳೆಯರು ನನಗೇ ಬೈದರು ಎಂದಿದ್ದಾರೆ.

ಇನ್ನು ಈ ಕೋಳಿಗಳು ಹೃದಯಾಘಾತದಿಂದ (Heart Attack) ಮೃತಪಟ್ಟಿವೆ ಎಂದು ಪ್ರಾಣಿ ವೈದ್ಯರು ಪರಿದಾಗೆ ತಿಳಿಸಿದ್ದಾರೆ. ಇದಾದ ಬಳಿಕ ಅವರು ಪರಿಹಾರಕ್ಕಾಗಿ ಮದುವೆಯ ಸಂಘಟಕರನ್ನು ಸಂಪರ್ಕಿಸಿದರು. ಸಂಘಟಕರು ಪರಿಹಾರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. "ಪಕ್ಷಿಗಳು (Birds)  ದೊಡ್ಡ ಶಬ್ದದಿಂದಾಗಿ ಬಹುಶಃ ಆಘಾತದಿಂದ ಸತ್ತಿದ್ದರಿಂದ ನಾನು ಸುಮಾರು 180 ಕೆಜಿ ಕೋಳಿಗಳನ್ನು ಕಳೆದುಕೊಂಡೆ" ಎಂದು ಪರಿದಾ ಹೇಳಿದ್ದಾರೆ. ದೂರಿನ ಬಗ್ಗೆ ಚರ್ಚಿಸಲು ಪರಿದಾ ಮತ್ತು ಆಕೆಯ ನೆರೆಹೊರೆಯವರಿಬ್ಬರನ್ನೂ ಕರೆದಿದ್ದೇನೆ ಎಂದು ನೀಲಗಿರಿ ಪೊಲೀಸ್ ಠಾಣೆ ಪ್ರಭಾರಿ ದ್ರೌಪದಿ ದಾಸ್ ಹೇಳಿದ್ದಾರೆ.

ಪ್ರಾಣಿಗಲಲ್ಲಿ ಹೃದಯಾಘಾತ ಹೆಚ್ಚುವುದು ಹೀಗೆ

ಪ್ರಾಣಿಗಳ ನಡವಳಿಕೆಯ ಕುರಿತು ಪುಸ್ತಕ ಬರೆದಿರುವ ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಸೂರ್ಯಕಾಂತ್ ಮಿಶ್ರಾ ಹಿಂದೂಸ್ತಾನ್ ಟೈಮ್ಸ್‌ ಬಳಿ ಮಾತನಾಡುತ್ತಾ, ದೊಡ್ಡ ಶಬ್ದ ಪಕ್ಷಿಗಳಲ್ಲಿ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತವೆ.  “ಕೋಳಿಗಳು ಹಗಲು ಮತ್ತು ರಾತ್ರಿಯ ನೈಸರ್ಗಿಕ ಬೆಳಕು / ಕತ್ತಲೆಯ ಚಕ್ರದಿಂದ ನಿಯಂತ್ರಿಸಲ್ಪಡುವ ಸಿರ್ಕಾಡಿಯನ್ ಲಯದಿಂದ ನಿಯಂತ್ರಿಸಲ್ಪಡುತ್ತವೆ. "ಜೋರಾಗಿ ಸಂಗೀತದ ಕಾರಣದಿಂದಾಗಿ ಹಠಾತ್ ಉತ್ಸಾಹ ಅಥವಾ ಒತ್ತಡವು ಅವರ ಜೈವಿಕ ಗಡಿಯಾರವನ್ನು ಅಡ್ಡಿಪಡಿಸುತ್ತದೆ" ಎಂದು ಮಿಶ್ರಾ ಹೇಳಿದರು.

ಡಿಜೆ ನಿಷೇಧಿಸಲು ಆದೇಶಿಸಿದ್ದ ಅಲಹಾಬಾದ್ ಹೈಕೋರ್ಟ್‌

2019 ರಲ್ಲಿ, ಅಲಹಾಬಾದ್ ಹೈಕೋರ್ಟ್ (Allahabad High Court) ಉತ್ತರ ಪ್ರದೇಶದಲ್ಲಿ ಡಿಜೆಗಳನ್ನು "ಮಾನವನ ಆರೋಗ್ಯಕ್ಕೆ ಗಂಭೀರ ಅಪಾಯ" ಎಂದು ವಿವರಿಸಿ ಸಂಪೂರ್ಣ ನಿಷೇಧವನ್ನು ಹೊರಡಿಸಿತ್ತು.“ಅವುಗಳನ್ನು ಅತ್ಯಂತ ಕಡಿಮೆ ಧ್ವನಿಯಲ್ಲಿ ಇಟ್ಟರೂ, ಇದು ನಿಯಮಗಳು, 2000 ರ ಅಡಿಯಲ್ಲಿ ಅನುಮತಿಸುವ ಮಿತಿಗಳನ್ನು ಮೀರಿದೆ. ಒಂದು DJ ಹಲವಾರು ಆಂಪ್ಲಿಫೈಯರ್‌ಗಳಿಂದ ಮಾಡಲ್ಪಟ್ಟಿದೆ ಮತ್ತು ಸಂಯೋಜಿತ ಧ್ವನಿಯು ಸಾವಿರ ಡೆಸಿಬಲ್‌ಗಳಿಗಿಂತ ಹೆಚ್ಚು ಹೊರಬರುತ್ತದೆ." ಎಂದಿತ್ತು.

ಅಲ್ಲದೇ  ಡಿಜೆ ಮಾನವನ ಆರೋಗ್ಯಕ್ಕೆ, ವಿಶೇಷವಾಗಿ ಮಕ್ಕಳು, ಹಿರಿಯ ನಾಗರಿಕರು ಮತ್ತು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಗಂಭೀರ ಅಪಾಯ ಎಂದು ಕೋರ್ಟ್‌ ತಿಳಿಸಿತ್ತು. 

Follow Us:
Download App:
  • android
  • ios