ಆರೋಪಿಗಳ ಮುಖಕ್ಕೆ ಸೂಕ್ತ ಇಮೋಜಿ ಬಳಸಿದ ಪೊಲೀಸ್, ಇದಕ್ಕೆ ಬಂದ ಕಮೆಂಟ್ ಮತ್ತೂ ಅದ್ಭುತ!
ಅರೆಸ್ಟ್ ಆಗಿರುವ ಆರೋಪಿಗಳ ಮುಖಕ್ಕೆ ಇಮೋಜಿ ಬಳಸಿ ಪೋಸ್ಟ್ ಮಾಡಲಾಗಿದೆ. ಪೊಲೀಸರ ಕ್ರಿಯೇಟಿವಿಟಿಗೆ ಜನರು ಮನಸೋತಿದ್ದಾರೆ. ಈ ಮಟ್ಟಕ್ಕೆ ಎಐ ಕೂಡ ಯೋಚಿಸುವುದಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಭುವನೇಶ್ವರ(ನ.09) ಪೊಲೀಸರು ಆರೋಪಿಗಳ ಅರೆಸ್ಟ್ ಮಾಡಿ ಫೋಟೋ ತೆಗೆದು ದಾಖಲಿಸುತ್ತಾರೆ. ಇದೇ ಫೋಟೋ ಸೋಶಿಯಲ್ ಮೀಡಿಯಾ ಸೇರಿದಂತೆ ಇತರ ಮಾಧ್ಯಮಗಳಲ್ಲೂ ಹರಿದಾಡುತ್ತದೆ. ಇದು ಸಾಮಾನ್ಯ ಪ್ರಕ್ರಿಯೆ. ಪೊಲೀಸರು ಅಧಿಕೃತ ಫೋಟೋಗಳೇ ಮುಂದೆ ಅಗತ್ಯವಿರುವ ಮಾಧ್ಯಮಗಳು ಬಳಕೆ ಮಾಡುತ್ತದೆ. ವಿಶೇಷ ಅಂದರೆ ಈ ರೀತಿ ಆರೋಪಿಗಳ ಪೋಟೋ ಫೋಸ್ಟ್ ಮಾಡುವಾಗ ಒಡಿಶಾ ಪೊಲೀಸರು ತೋರಿದ ಜಾಣ್ಮೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕೂಡ ಯೋಚಿಸುವುದಿಲ್ಲ ಎಂದು ಹಲವರು ಹೇಳಿದ್ದಾರೆ. ಹಲ್ಲೆ ಆರೋಪಿಗಳನ್ನು ಅರೆಸ್ಟ್ ಮಾಡಿದ ಪೊಲೀಸರು ಎಲ್ಲಾ ಆರೋಪಿಗಳ ಮುಖಕ್ಕೆ ಸೂಕ್ತವಾಗುವ ಇಮೋಜಿ ಬಳಸಿದ್ದಾರೆ.
ಒಡಿಶಾದ ಬೆರ್ಮಪುರ್ ಪೊಲೀಸರು ನಾಲ್ವರು ಆರೋಪಿಗಳನ್ನು ಆರೆಸ್ಟ್ ಮಾಡಿದ್ದಾರೆ. ತಂದೆ ಹಾಗೂ ಮಗನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ಆರೆಸ್ಟ್ ಮಾಡಿದ್ದಾರೆ. ಘಟನೆ ನಡೆದೆ ಕೆಲ ದಿನದಲ್ಲಿ ಪೊಲೀಸರು ಆರೋಪಿಗಳ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಟಿವಿ ಸೇರಿದಂತೆ ಇತರ ಮಾಹಿತಿಗಳ ಪರಿಶೀಲಿಸಿ ಆೋಪಿಗಳ ಅರೆಸ್ಟ್ ಮಾಡಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಆರೋಪಿಗಳ ಅರೆಸ್ಟ್ ಕುರಿತ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಪೋಸ್ಟ್ ಮಾಡುವಾಗ ಸಾಮಾನ್ಯವಾಗಿ ಪೊಲೀಸರು ಹಾಗೇ ಪೋಸ್ಟ್ ಮಾಡುತ್ತಾರೆ. ಅಥವಾ ಮುಖ ಎಡಿಟ್ ಮಾಡಿ ಬ್ಲರ್ ಮಾಡಲಾಗುತ್ತದೆ. ಆದರೆ ಒಡಿಶಾ ಪೊಲೀಸರು ಹಾಗೇ ಮಾಡಿಲ್ಲ. ಆರೋಪಿಗಳ ಮುಖಕ್ಕೆ ಸೂಕ್ತ ಇಮೋಜಿ ಬಳಸಿದ್ದಾರೆ.
ಈಗ ಮೂವಿ ನೆನಪಿಸಿದ ಪೊಲೀಸ್ ತನಿಖೆ, ನೊಣದ ನೆರವಿನಿಂದ ಆರೋಪಿ ಪತ್ತೆ!
ಅಳುತ್ತಿರುವ, ಬೇಸರ, ನೋವಿನ, ಆತಂಕದ ಇಮೋಜಿಗಳನ್ನು ಆರೋಪಿಗಳ ಮುಖಕ್ಕೆ ಬಳಸಲಾಗಿದೆ. ಬಳಿಕ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರು ಪೋಸ್ಟ್ ಮಾಡಿದ್ದಾರೆ. ಪೊಲೀಸರು ಈ ಫೋಟೋ ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಮೋಜಿ ಅಂಟಿಸಿದ ಮುಖ ನೋಡಿದ ಹಲವರು ಇವರ ಮುಖ ನೋಡಿದರೆ ತಂದೆ ಮಗನಿಗೆ ಹಲ್ಲೆ ಮಾಡಿದಂತೆ ಕಾಣುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ಸುದ್ದಿ ಓದಿದಾಗ ಬೇಸರವಾಯಿತು. ಆದರೆ ಇಮೋಜಿ ನೋಡಿ ಖುಷಿಯಾಯ್ತು ಎಂದಿದ್ದಾರೆ.
ಸಾಮಾನ್ಯವಾಗಿ ಸೆಲೆಬ್ರೆಟಿಗಳು, ಸೇರಿದಂತೆ ಜನಸಾಮಾನ್ಯರು ಮಕ್ಕಳ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವಾಗ ಹ್ಯಾಪಿ ಇಮೋಜಿ ಬಳಸುತ್ತಾರೆ. ಆದರೆ ಪೊಲೀಸರು ಈ ರೀತಿ ಬಳಕೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಒಡಿಶಾ ಪೊಲೀಸರು ಹೊಸ ಪ್ರಯೋಗ ಮಾಡಿ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಮುಖಕ್ಕೆ ಇಮೋಜಿ ಬಳುಸುವುದು ಹೆಚ್ಚು ಸೂಕ್ತ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ನ್ಯಾಯಲದ ಅಪರಾಧಿಗಳು ಎಂದು ತೀರ್ಪು ನೀಡುವವರೆಗೆ ಆರೋಪಿಗಳ ಮುಖಕ್ಕೆ ಇಮೋಜಿ ಬಳಸಿ ಪೋಸ್ಟ್ ಮಾಡುವುದು ಸೂಕ್ತ. ಇದರಿಂದ ನಿರಪರಾಧಿಗಳಿಗೆ ನ್ಯಾಯ ಸಿಗಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.