ಈಗ ಮೂವಿ ನೆನಪಿಸಿದ ಪೊಲೀಸ್ ತನಿಖೆ, ನೊಣದ ನೆರವಿನಿಂದ ಆರೋಪಿ ಪತ್ತೆ!
ಕೊಲೆ ಆರೋಪಿಯನ್ನು ನೊಣದ ನೆರವಿನಿಂದ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಈಗ ಮೂವಿ ರೀತಿಯಲ್ಲೇ ಈ ರೋಚಕ ಘಟನೆ ನಡೆದಿದೆ. ಪೊಲೀಸ್ ವಿಚಾರಣೆ, ಆರೋಪಿ ಪತ್ತೆ ಹಚ್ಚಲು ನೊಣ ನೆರವು ನೀಡಿದ್ದು ಹೇಗೆ?
ಇಂದೋರ್(ನ.6) ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಮೂವಿ ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ನಾಯಕಿಯ ಗೆಳೆಯನ ಹತ್ಯೆಗೆ ಸೇಡು ತೀರಿಸಲು ನೊಣವಾಗಿ ಬಂದು ಕಿಚ್ಚ ಸುದೀಪ್ ಮೇಲೆ ದಾಳಿ ಮಾಡುವ ನೊಣ ಚಿತ್ರದ ಪ್ರಮುಖ ಕಥವಸ್ತು. ಇದೀಗ ಇದೇ ರೀತಿ ನೊಣವೊಂದು ಆರೋಪಿ ಹಿಂಬಾಲಿಸಿದ ಘಟನೆ ನಡೆದಿದೆ. ಇಷ್ಟೇ ಅಲ್ಲ ಇದೇ ನೊಣದ ನೆರವಿನಿಂದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ ಘಟನೆ ಮಧ್ಯಪ್ರದೇಶದ ಜಬಲಪುರ ಜಿಲ್ಲೆಯಲ್ಲಿ ನಡೆದಿದೆ. ಈ ರೋಚಕ ಹಾಗೂ ಕುತೂಹಲ ಘಟನೆ ಮೈನವಿರೇಳಿಸುವುದು ಖಚಿತ.
19 ವರ್ಷದ ಧರಮ್ ಸಿಂಗ್ ದೀಪಾವಳಿ ದಿನ ಸಂಬಂಧಿ ಮನೋಜ್ ಠಾಕೂರ್ ಜೊತೆ ಸಂಜೆ ಬಾರ್ ಅಂಡ್ ರೆಸ್ಟೋರೆಂಟ್‌ಗೆ ತೆರಳಿದ್ದಾನೆ. ಆದರೆ ಮನೋಜ್ ಠಾಕೂರ್ ಹಾಗೂ ಧರಮ್ ಸಿಂಗ್ ಇಬ್ಬರು ಮನೆಗೆ ಮರಳಿಲ್ಲ. ಹೀಗಾಗಿ ಮನೋಜ್ ಠಾಕೂರ್ ಕುಟುಂಬಸ್ಥರು ಜಬಲಪುರ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹುಡುಕಾಟ ಆರಂಭಿಸಿದ್ದಾರೆ. ಆದರೆ ಪತ್ತೆಯಾಗಲಿಲ್ಲ. ಮರುದಿನ ಪೊಲೀಸರು ಹುಡುಕಾಟ ನಡೆಸುವಾಗ ಧರಮ್ ಸಿಂಗ್ ಮೃತದೇಹ ಪತ್ತೆಯಾಗಿತ್ತು. ಜಬಲಪುರ ಸಿಟಿ ಲಿಮಿಟ್ಸನ ಖಾಲಿ ಪ್ರದೇಶದಲ್ಲಿ ಧರಮ್ ಸಿಂಗ್ ಶವ ಪತ್ತೆ ಹಚ್ಚಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.
Home Remedies : ಒಂದಿದ್ದ ನೊಣ ಹತ್ತಾಗುತ್ತೆ… ಆರಂಭದಲ್ಲೇ ಮನೆ ಮದ್ದು ಬಳಸಿಯೇ ಓಡಿಸಿ
ಪೊಲೀಸರು ವಿಚಾರೆ ಆರಂಭಿಸಿದ್ದರು. ಈ ವೇಳೆ ಧರಮ್ ಸಿಂಗ್ ಕೊನೆಯದಾಗಿ ಭೇಟಿಯಾಗಿದ್ದು 26 ವರ್ಷದ ಮನೋಜ್ ಸಿಂಗ್ ಅನ್ನೋದು ಪೊಲೀಸರಿಗೆ ಗೊತ್ತಾಗಿದೆ. ತಕ್ಷಣವೇ ಮನೋಜ್ ಠಾಕೂರ್ ಪತ್ತೆ ಹಚ್ಚಿದ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಮೃತದೇಹ ಪತ್ತೆಯಾದ ಸ್ಥಳ, ಧರಮ್ ಸಿಂಗ್ ಮನೆ, ತೆರಳಿದ ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಎಲ್ಲಿಯೂ ಸಿಸಿಟಿವಿ ಇರಲಿಲ್ಲ. ಹೀಗಾಗಿ ಪೊಲೀಸರಿಗೆ ಆರೋಪಿ ಪತ್ತೆ ಹಚ್ಚುವುದು ಸವಾಲಾಗಿತ್ತು.
ಮನೋಜ್ ಠಾಕೂರ್ ವಿಚಾರಣೆ ವೇಳೆ ತನೆಗೇನು ಗೊತ್ತಿಲ್ಲದ ರೀತಿ ವರ್ತಿಸಿದ್ದ. ಇಷ್ಟೇ ಅಲ್ಲ ಪೊಲೀಸರ ಅನುಮಾನ ಬಲವಾಗಿದ್ದರೂ ಸಾಕ್ಷಿಗಳು ಇರಲಿಲ್ಲ. ಮನೋಜ್ ಠಾಕೂರ್ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಈತ ಉಟ್ಟ ಬಟ್ಟೆ ಸೇರಿದಂತೆ ಮನೆಯಲ್ಲಿರುವ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದು ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದ್ದರು. ಆದರೆ ಯಾವುದೇ ಸಾಕ್ಷ್ಯಗಳು ಲಭ್ಯವಾಗಲಿಲ್ಲ. ಇನ್ನು ಸಾಕ್ಷಿಗಳಿಲ್ಲ, ನೋಡಿದವರಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ತಲೆ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಮತಪಟ್ಟಿರುವುದು ದೃಢಪಟ್ಟಿದೆ. ಆದರೆ ಹತ್ಯೆ ಹಿಂದಿನ ಕೈವಾಡ ಯಾರದ್ದು ಅನ್ನೋದು ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿತ್ತು.
ಮೊದಲ ಹಂತದ ವಿಚಾರಣೆ ಬಳಿಕ ಪೊಲೀಸರು ಕೊನೆಯದಾಗಿ ಮತ್ತೊಂದು ಹಂತದ ವಿಚಾರಣೆ ನಡೆಸಲು ಮುಂದಾಗಿದ್ದರು. ಸಣ್ಣ ಸುಳಿವು ಸಿಕ್ಕರೂ ಪ್ರಕರಣ ಭೇದಿಸಲು ಪೊಲೀಸರು ನಿರಂತವಾಗಿ ಯತ್ನಿಸಿದ್ದಾರೆ. ಮನೋಜ್ ಠಾಕೂರ್‌ಗೆ ಕರೆ ಮಾಡಿದ ಪೊಲೀಸರು ಠಾಣೆಗೆ ಬರಲು ಸೂಚಿಸಿದ್ದಾರೆ. ಇದರಂತೆ ಠಾಣೆಗೆ ಆಗಮಿಸಿದ ಮನೋಜ್ ಠಾಕೂರ್ ಹಾಗೂ ಇತರ ಅನುಮಾನಸ್ಪದ ಆರೋಪಿಗಳ ವಿಚಾರಣೆ ಆರಂಭಗೊಂಡಿತ್ತು. ಈ ವೇಳೆ ನೊಣವೊಂದು ಮನೋಜ್ ಠಾಕೂರ್ ಸುತ್ತಲೇ ಸುತ್ತುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ಇದು ಪೊಲೀಸರ ಅನುಮಾನ ಮತ್ತಷ್ಟು ಹೆಚ್ಚಿಸಿದೆ.
ತಕ್ಷಣವೇ ಮನೋಜ್ ಠಾಕೂರ್ ವಶಕ್ಕೆ ಪಡೆದ ಪೊಲೀಸರು ಆತನ ಬಟ್ಟೆಯನ್ನು ಪರಿಶೀಲಿಸಿದ್ದಾರೆ. ಬಳಿಕ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಿದ್ದಾರೆ. ಈ ವೇಳೆ ಲ್ಯಾಬ್ ವರದಿ ಬಂದಾಗ ಪೊಲೀಸರ ಅನುಮಾನ ಸ್ಪಷ್ಟವಾಗಿತ್ತು. ಮನೋಜ್ ಬಟ್ಟೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು. ಈಗ ಮೂವಿಯಲ್ಲಿರುವಂತೆ ಹತ್ಯೆಯಾದ ಧರಮ್ ಸಿಂಗ್ ನೊಣವಾಗಿ ಆರೋಪಿ ಮನೋಜ್ ಠಾಕೂರ್ ಹಿಂಬಾಲಿಸಿದೆ ಎಂದು ಜಬಲಪುರ್ ಜನ ಮಾತನಾಡುತ್ತಿದ್ದಾರೆ. ಇತ್ತ ಪೊಲೀಸರಿಗೆ ಸಿಕ್ಕ ಸಾಕ್ಷ್ಯಗಳ ಆಧಾರದಲ್ಲಿ ವಿಚಾರಣೆ ನಡೆಸಿದಾಗ ಮನೋಜ್ ಠಾಕೂರ್ ಘಟನೆ ಬಾಯ್ಬಿಟ್ಟಿದ್ದಾನೆ. ಬಿಲ್ ಪಾವತಿ ವಿಚಾರದಲ್ಲಿ ಇವರಿಬ್ಬರು ಜಗಳವಾಗಿದೆ. ಈ ವೇಳೆ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದ ಮನೋಜ್ ಠಾಕೂರ್, ಧರಮ್ ಸಿಂಗ್ ಹತ್ಯೆ ಮಾಡಿದ್ದಾನೆ.
ಮರ್ಡರ್ ಹಾರ್ನೆಟ್ಸ್: ವಿಷಕಾರಿ ನೊಣಗಳಿಗೆ ಲಾಕ್‌ಡೌನ್ ಆದ ಕೆನಡಾ ಹಳ್ಳಿಗಳು!