ಮದುರೈ (ನ. 29): ವೃದ್ಧಾಪ್ಯದಲ್ಲಿ ಪರಾವಲಂಬನೆ ಸಾಮಾನ್ಯ. ಆದರೆ, ಇಲ್ಲೊಂದು ವೃದ್ಧ ದಂಪತಿ ತಮ್ಮ 80 ನೇ ವಯಸ್ಸಿ ನಲ್ಲಿ ಸಾಂಗತ್ಯದ ಬದಲಾಗಿ ವಿಚ್ಚೇದನ ಪಡೆದುಕೊಂಡಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಾಲಯಂ ಪಟ್ಟಿಯ ವೇಲುಚಾಮಿ(82), ಕಸ್ತೂರಿ (80) ವಿಚ್ಛೇದನ ಪಡೆದುಕೊಂಡವರು. ಈ ಜೋಡಿ 1962 ರಲ್ಲಿ ವಿವಾಹವಾಗಿದ್ದರು.

ಪ್ರೇಮ ಸುದೀರ್ಘ, ದಾಂಪತ್ಯ ಕ್ಷಣಿಕ, ಯಾಕ್ಹೀಗೆ?

ತದನಂತರ ದಂಪತಿಗಳಿಬ್ಬರ ನಡುವೆ ಸರಿಪಡಿಸಿಕೊಳ್ಳಲಾಗದ ಭಿನ್ನಾಭಿಪ್ರಾಯ ಕಂಡುಬಂದಿತ್ತು. ಇಬ್ಬರೂ ಕಳೆದ 25 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಅಲ್ಲದೇ, ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.