Asianet Suvarna News Asianet Suvarna News

ನೈಟ್ ಡ್ಯುಟಿಯಲ್ಲಿದ್ದ ನರ್ಸ್ ಮೇಲೆ ವೈದ್ಯನಿಂದ ರೇಪ್; ಡಾಕ್ಟರ್ ರೂಮ್‌ಗೆ ತಳ್ಳಿ ಬಾಗಿಲು ಮುಚ್ಚಿದ ಸಿಬ್ಬಂದಿ!

ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ಪ್ರಕರಣ ಖಂಡಿಸಿ ದೇಶದ ತುಂಬೆಲ್ಲಾ ಪ್ರತಿಭಟನೆ ನಡೆಯುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ನೈಟ್ ಡ್ಯೂಟಿಯಲ್ಲಿದ್ದ ನರ್ಸ್ ಮೇಲೆ ವೈದ್ಯನಿಂದ ಅತ್ಯಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ.

nurse raped by doctor in uttar pradesh hospital one arrested mrq
Author
First Published Aug 19, 2024, 7:11 PM IST | Last Updated Aug 19, 2024, 7:11 PM IST

ಲಕ್ನೋ: ನೈಟ್‌ ಡ್ಯೂಟಿಯಲ್ಲಿದ್ದ ಮಹಿಳಾ  ನರ್ಸ್ ಮೇಲೆ ಡಾಕ್ಟರ್ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಮುರಾದಾಬಾದ್ ನಗರದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಡಾಕ್ಟರ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ವೈದ್ಯನನ್ನು ಬಂಧಿಸಲಾಗಿದ್ದು, ಅತ್ಯಾಚಾರಕ್ಕೆ ಸಹಕಾರ ನೀಡಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ. ಸಂತ್ರಸ್ತೆ ಮುರಾದಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾರೆ.

ಈ ಕುರಿತು ಸಂತ್ರಸ್ತೆಯ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗಳು ಕಳೆದ 10 ತಿಂಗಳಿನಿಂದ ಠಾಕೂರದ್ವಾರ ಕಾಶೀಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದಳು. ಶನಿವಾರ ರಾತ್ರಿ ಮಗಳನ್ನು ನೈಟ್ ಡ್ಯೂಟಿಗೆ ಹಾಕಲಾಗಿತ್ತು. ರಾತ್ರಿ ಕೆಲಸದ ವೇಳೆ ಆಸ್ಪತ್ರೆಯ ವಾರ್ಡ್ ಬಾಯ್ ಜುನೈದ್ ಮತ್ತು ಮತ್ತೋರ್ವ ನರ್ಸ್ ಮಗಳನ್ನು ಡಾಕ್ಟರ್ ಶಹನ್ವಾಜ್ ಕೋಣೆಗೆ ಹೋಗುವಂತೆ ಹೇಳಿದ್ದಾರೆ. ಮಗಳು ಒಪ್ಪದಿದ್ದಾಗ ಆಕೆಯನ್ನು ಬಲವಂತವಾಗಿ ಡಾಕ್ಟರ್ ಬಳಿ ಕಳುಹಿಸಿ ಹೊರಗಿನಿಂದ ಕೋಣೆಯ ಬಾಗಿಲು ಹಾಕಿಕೊಂಡಿದ್ದಾರೆ. 

ಲಂಡನ್‌ನಲ್ಲಿ ಏರ್‌ ಇಂಡಿಯಾ ವಿಮಾನದ ಗಗನಸಖಿ ಮೇಲೆ ಹಲ್ಲೆ ; ಕೆಳಗೆ ಬೀಳಿಸಿ ಎಳೆದಾಡಿ ಹ್ಯಾಂಗರ್‌ನಿಂದ ದಾಳಿ

ಕೋಣೆಯಲ್ಲಿದ್ದ ಡಾಕ್ಟರ್ ಮಗಳ ಮೇಲೆ ಹಲ್ಲೆಗೈದು ಅತ್ಯಾಚಾರ ನಡೆಸಿದ್ದಾನೆ. ನಂತರ ಅವಾಚ್ಯ ಶಬ್ದಗಳಿಂದ ಮಗಳನ್ನು  ನಿಂದಿಸಿದ್ದಾನೆ. ಈ ವೇಳೆ ಆಕೆಯ ಬಳಿಯಲ್ಲಿದ್ದ ಮೊಬೈಲ್ ಸಹ ಕಸಿದುಕೊಂಡಿದ್ದಾನೆ. ಮರುದಿನ ಬೆಳಗ್ಗೆ ಮುಖ್ಯ ನರ್ಸ್ ಬಂದಾಗ  ಮಗಳನ್ನು ಹೊರಗೆ ಕಳುಹಿಸಲಾಗಿದೆ. ನಡೆದ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಲಾಗಿತ್ತು ಎಂದು ಸಂತ್ರಸ್ತೆ ತಂದೆ ಹೇಳಿಕೆ ನೀಡಿದ್ದಾರೆ. 

ಯುವತಿ ಮನೆಗೆ ಬರುತ್ತಿದ್ದಂತೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ನಂತರ ಪೋಷಕರ ಜೊತೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ನರ್ಸ್ ಮೆಹನಾಜ್ ಮತ್ತು ವಾರ್ಡ್ ಬಾಯ್ ಜುನೈದ್ ಹಾಗೂ ಆಸ್ಪತ್ರೆಯ ವೈದ್ಯ ಶಹನವಾಜ್ ಅವರು ಅತ್ಯಾಚಾರ ಮತ್ತು ಎಸ್‌ಸಿ/ಎಸ್‌ಟಿ ಸೇರಿದಂತೆ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವೈದ್ಯನನ್ನು ಬಂಧಿಸಲಾಗಿದ್ದು, ಶೀಘ್ರದಲ್ಲಿಯೇ ಉಳಿದ ಆರೋಪಿಗಳನ್ನು ಬಂಧಿಸುತ್ತವೆ. ತನಿಖಾ ಹಂತದಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಆಗಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನನ್ನ ಪತಿ ರಾಕ್ಷಸ, ಬಿಯರ್ ಕುಡಿಸಿ, ಮೊಳೆ ಬಿಸಿ ಮಾಡಿ ಗುಪ್ತಾಂಗ ಸುಡ್ತಾನೆ: ಆಸ್ಪತ್ರೆಗೆ ದಾಖಲಾದ ಪೊಲೀಸಪ್ಪನ ಹೆಂಡತಿ!

Latest Videos
Follow Us:
Download App:
  • android
  • ios