ಅಂತರಾಷ್ಟ್ರೀಯ ವಿಮಾನಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ವಿಶ್ರಾಂತಿಗಾಗಿ ಅಂತರಾಷ್ಟ್ರೀಯ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ  ಕಲ್ಪಿಸಲಾಗುತ್ತದೆ. ಹೋಟೆಲ್‌ ನಲ್ಲಿ ಉಳಿದುಕೊಂಡಿದ್ದ ಗಗನಸಖಿ ಮೇಲೆ ಹಲ್ಲೆ ನಡೆದಿದೆ.

ಲಂಡನ್: ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಗಗನಸಖಿ ಮೇಲೆ ಲಂಡನ್‌ನ ಹೋಟೆಲ್‌ನಲ್ಲಿ ಹಲ್ಲೆ ನಡೆಸಲಾಗಿದೆ. ದಿಢೀರ್ ಅಂತ ಕೋಣೆಗೆ ನುಗ್ಗಿದ ಓರ್ವ ಗಗನಸಖಿ ಮೇಲೆ ಹಲ್ಲೆ ನಡೆಸಿದ್ದಾನೆ. ಗಗನಸಖಿ ಭಯದಿಂದ ಜೋರಾಗಿ ಕೂಗುತ್ತಿದ್ದ ಅಕ್ಕಪಕ್ಕದ ಕೋಣೆಗಳಲ್ಲಿದ್ದ ಜನರು ಬಂದಿದ್ದಾರೆ. ಜನರು ಬರುತ್ತಿದ್ದಂತೆ ದುಷ್ಕರ್ಮಿ ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಹೋಟೆಲ್ ಸಿಬ್ಬಂದಿ ಮತ್ತು ಅಲ್ಲಿದ್ದ ಜನರು ದುಷ್ಕರ್ಮಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ್ದರಿಂದ ಗಗನಸಖಿ ಗಾಯಗೊಂಡಿದ್ದರು. ಮಹಿಳೆಯನ್ನು ಕೆಳಗೆ ಬೀಳಿಸಿ ಎಳೆದಾಡಿ ಹಲ್ಲೆ ಮಾಡಲಾಗಿದ್ದು, ಗಗನಸಖಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಒಂದು ವಾರದ ಹಿಂದೆ ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿ ಹಿಂದೂ ವರದಿ ಪ್ರಕಾರ, ಏರ್ ಇಂಡಿಯಾದ ಮಹಿಳಾ ಸಿಬ್ಬಂದಿ ಲಂಡನ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ಬಳಿಕ ಗಗನಸಖಿ ಮುಂಬೈಗೆ ಹಿಂದಿರುಗಿದ್ದಾರೆ. ಲಂಡನ್‌ ನಗರದ ಇಂಟರ್‌ನ್ಯಾಷನಲ್ ಹೋಟೆಲ್‌ ನಲ್ಲಿ ಹಲ್ಲೆ ನಡೆದಿದೆ. ಏರ್ ಇಂಡಿಯಾ ಸ್ಥಳೀಯ ಪೊಲೀಸರ ಸಹಾಯದಿಂದ ಕಾನೂನು ಹೋರಾಟ ನಡೆಸುತ್ತಿದೆ. 

ಏರ್ ಇಂಡಿಯಾ ಸಿಬ್ಬಂದಿ ಲಂಡನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ತಡರಾತ್ರಿ ಗಗನಸಖಿಯ ಕೋಣೆಗೆ ನುಗ್ಗಿದ್ದಾನೆ. ರಾತ್ರಿ ಸುಮಾರು 1.30ಕ್ಕೆ ತನ್ನ ಕೋಣೆಯೊಳಗೆ ಅಪರಿಚಿತ ವ್ಯಕ್ತಿಯನ್ನು ಕಂಡಕೂಡಲೇ ಗಗನಸಖಿ ಭಯದಿಂದ ಜೋರಾಗಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಗಗನಸಖಿ ಕೋಣೆಯಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ಆಕೆ ಯನ್ನು ಕೆಳಗೆ ಬೀಳಿಸಿ ಒಳಗೆ ಎಳೆದುಕೊಂಡು ಹೋಗಿ ಬಟ್ಟೆಯ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರಿಂದ ಗಗನಸಖಿ ಕೆಲಸಕ್ಕೆ ಹಾಜರಾಗಿಲ್ಲ. ಗಗನಸಖಿ ಜೊತೆಯಲ್ಲಿಯೇ ಓರ್ವ ಸಿಬ್ಬಂದಿ ಉಳಿದುಕೊಂಡಿದ್ದರು. 

ಫಸ್ಟ್‌ನೈಟ್‌ನಲ್ಲಿ ಸರ್ಪ್ರೈಸ್ ಕೊಡಲು ಹೋಗಿ ಕೈ, ಕಣ್ಣು ಕಿವಿ ಕಳ್ಕೊಂಡ ಗಂಡ… ಖಾಸಗಿ ಅಂಗ ಚೆಕ್ ಮಾಡ್ಕೊಂಡ !

ಗಗನಸಖಿ ಮೇಲಿನ ಹಲ್ಲೆಯ ಕುರಿತು ಏರ್‌ ಇಂಡಿಯಾ ವಕ್ತಾರ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸಿಬ್ಬಂದಿಯ ಸುರಕ್ಷತೆಗೆ ಏರ್ ಇಂಡಿಯಾ ಮೊದಲ ಆದ್ಯತೆ ನೀಡುತ್ತದೆ. ಇಂಟರ್‌ನ್ಯಾಷನಲ್ ಹೋಟೆಲ್‌ ನಲ್ಲಿ ಇಂತಹ ಘಟನೆ ನಡೆದಿದ್ದು ಆಘಾತಕಾರಿಯ ವಿಷಯವಾಗಿದೆ. ಈ ಘಟನೆ ಬಳಿಕ ಏರ್‌ ಇಂಡಿಯಾ ಕಂಪನಿ ತನ್ನ ಸಿಬ್ಬಂದಿ ಜೊತೆ ಸಮಾಲೋಚನೆ ನಡೆಸಿದೆ. ಸಿಬ್ಬಂದಿಯ ಜೊತೆಯಲ್ಲಿ ಏರ್ ಇಂಡಿಯಾ ಇರುತ್ತದೆ ಎಂದು ಭರವಸೆ ನೀಡಲಾಗಿದೆ.

ಇಂತಹ ಘಟನೆಗಳು ಪುನಾರವರ್ತನೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಏರ್ ಇಂಡಿಯಾ ಸ್ಥಳೀಯ ಪೊಲೀಸರೊಂದಿಗೆ ಕಾನೂರು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಬಂಧ ಹೋಟೆಲ್ ಆಡಳಿತ ಮಂಡಳಿ ಜೊತೆಯಲ್ಲಿಯೂ ನಾವು ಮಾತನಾಡಿದ್ದೇವೆ ಎಂದು ಏರ್ ಇಂಡಿಯಾ ವಕ್ತಾರ ಮಾಹಿತಿ ನೀಡಿದ್ದಾರೆ.

ಗಗನಸಖಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಯಾರು? ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎಂಬುದರ ಬಗ್ಗೆ ಬಂದಿಲ್ಲ. ಏರ್ ಇಂಡಿಯಾ ಕಂಪನಿ ಹಲ್ಲೆಗೊಳಗಾದ ಗಗನಸಖಿ ಮಾಹಿತಿಯನ್ನು ಗೌಪ್ಯವಾಗಿರಿಸಿದೆ.

ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!

Scroll to load tweet…