Asianet Suvarna News Asianet Suvarna News

ಮಗಳ ಕೈ ಮುರಿದಿತ್ತು, ರಕ್ತ ಸೋರುತ್ತಿತ್ತು, ಪ್ಯಾಂಟ್‌ ತೆರೆದಿತ್ತು: ಭಯಾನಕ ಸ್ಥಿತಿ ವಿವರಿಸಿದ ಕೋಲ್ಕತ್ತಾ ರೇಪ್ ಸಂತ್ರಸ್ತೆ ತಾಯಿ

ಕೋಲ್ಕತಾ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಬಳಿಕ ಹತ್ಯೆಗೀಡಾದ ವೈದ್ಯೆಯ ತಾಯಿ, ಘಟನೆ ಬಳಿಕ ಮೊದಲ ಬಾರಿ ತಮ್ಮ ಮಗಳನ್ನು ನೋಡಿದಾಗ ಆಕೆಯ ಪರಿಸಿತಿ ಪರಿಸ್ಥಿತಿ ಹೇಗಿತ್ತು ಎಂಬ ಭೀಕರ ಚಿತ್ರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

kolkata trainee doctors mother described the horrifying state she saw her daughter in for the first time after the rape and murder akb
Author
First Published Aug 19, 2024, 11:10 AM IST | Last Updated Aug 19, 2024, 1:33 PM IST

ಕೋಲ್ಕತಾ: ಕೋಲ್ಕತಾ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಬಳಿಕ ಹತ್ಯೆಗೀಡಾದ ವೈದ್ಯೆಯ ತಾಯಿ, ಘಟನೆ ಬಳಿಕ ಮೊದಲ ಬಾರಿ ತಮ್ಮ ಮಗಳನ್ನು ನೋಡಿದಾಗ ಆಕೆಯ ಪರಿಸಿತಿ ಪರಿಸ್ಥಿತಿ ಹೇಗಿತ್ತು ಎಂಬ ಭೀಕರ ಚಿತ್ರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಇದು ಘಟನೆಯ ಭೀಕರತೆಯ ಬಗ್ಗೆ ಬೆಳಕು ಚೆಲ್ಲಿದೆ. ಆ.9ರಂದು ನನಗೆ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಿಂದ ದೂರವಾಣಿ ಕರೆ ಮಾಡಿದ್ದರು. ಅದರಲ್ಲಿ 'ಕಾಲೇಜಿನಲ್ಲಿ ನಿಮ್ಮ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ತಕ್ಷಣವೇ ಬನ್ನಿ ಎಂದರು. ಆಸ್ಪತ್ರೆಗೆ ತೆರಳಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರು. ಮೃತದೇಹ ಹೋಗಿ ನೋಡಿದಾಗ, ಪ್ಯಾಂಟ್ ತೆರೆದಿತ್ತು. ಆಕೆಯ ದೇಹದ ಮೇಲೆ ಒಂದು ತುಂಡಷ್ಟೇ ಬಟ್ಟೆಯಿತ್ತು. ಕೈ ಮುರಿದಿತ್ತು. ಕಣ್ಣು ಮತ್ತು ಮೂಗಿನಿಂದ ರಕ್ತ ಸೋರುತ್ತಿತ್ತು 'ಎಂದು ಮಗಳಿದ್ದ ಸ್ಥಿತಿ ನೋಡಿದ ತಾಯಿ ಆ ಸನ್ನಿವೇಶವನ್ನು ವಿವರಿಸಿದ್ದಾರೆ.

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಸುಪ್ರೀಂಕೋರ್ಟ್

ನವದೆಹಲಿ: ಕೋಲ್ಕತಾದ ಪ್ರತಿಷ್ಠಿತ ಆರ್‌ಜಿ ಕಾರ್‌ ಆಸ್ಪತ್ರೆಯಲ್ಲಿ ಸಂಭವಿಸಿದ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಚಾರಣೆಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳಲು ಈಗ ಸುಪ್ರೀಂಕೋರ್ಟ್‌ನಿರ್ಧರಿದ್ದು, ಮಂಗಳವಾರ ವಿಚಾರಣೆ ನಡೆಸಲು ನಿರ್ಧರಿಸಿದೆ. ದೇಶಾದ್ಯಂತ ಸುದ್ದಿ ಮಾಡಿರುವ ಈ ಪ್ರಕರಣದ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ನ್ಯಾ| ಡಿ.ವೈ. ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ನಡೆಸಲಿದೆ. ಇತ್ತೀಚೆಗೆ ಕೋಲ್ಕತಾ ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಿ, ಸಿಬಿಐ ತನಿಖೆಗೆ ಆದೇಶಿಸಿತ್ತು ಹಾಗೂ ಪ್ರಕರಣದ ವಿಚಾರಣೆ ಮಾಡುವಲ್ಲಿ ಕೋಲ್ಕತಾ ಪೊಲೀಸರು ಎಡವಿದ್ದಾರೆ ಎಂದು ಚಾಟಿ ಬೀಸಿತ್ತು. ಅಲ್ಲದೆ, ಆರ್‌ಜಿ ಕರ್ ಆಸ್ಪತ್ರೆಯ ಪ್ರಾಚಾರ್ಯರನ್ನೂ ಹಿಗ್ಗಾಮುಗ್ಗಾ ಝಾಡಿಸಿತ್ತು.

ಹತ್ಯೆಯಾದ ದಿನ ಕೋಲ್ಕತ್ತಾ ಟ್ರೈನಿ ವೈದ್ಯೆ ಬರೆದ ಕೊನೆಯ ಡೈರಿಯಲ್ಲಿ ಏನಿತ್ತು?

ರೇಪ್ ಸಂತ್ರಸ್ತೆ ಪರ ಒಗ್ಗೂಡಿ ಫುಟ್ಬಾಲ್‌ ವೈರಿಗಳಿಂದ ಪ್ರತಿಭಟನೆ!

ಕೋಲ್ಕತಾ: ಭಾರತದ ಫುಟ್ಬಾಲ್‌ನಲ್ಲಿ ಮೋಹನ್‌ ಬಗಾನ್‌ ಹಾಗೂ ಈಸ್ಟ್‌ ಬೆಂಗಾಲ್‌ ತಂಡಗಳು ಪರಸ್ಪರ ಬದ್ಧ ವೈರಿಗಳು. ಆದರೆ ಭಾನುವಾರ ಎರಡೂ ತಂಡಗಳ ಬೆಂಬಲಿಗರು ಒಗ್ಗೂಡಿ ಸಾಲ್ಟ್ ಲೇಕ್ ಸ್ಟೇಡಿಯಂ ಬಳಿ ಮಹಿಳಾ ವೈದ್ಯೆಗೆ ನ್ಯಾಯಕ್ಕಾಗಿ ಆಗ್ರಹಿಸಿದರು. ಘೋರ ಅಪರಾಧವನ್ನು ಖಂಡಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕರೆ ನೀಡಿದರು. ಈ ಅಪರೂಪದ ದೃಶ್ಯಕ್ಕೆ ಕೋಲ್ಕತಾ ಸಾಕ್ಷಿ ಆಯಿತು. ಈ ವೇಳೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ತಪ್ಪು ಮಾಹಿತಿ ನೀಡಿದ ಸಂಸದರು, ವೈದ್ಯರಿಗೆ ಪೊಲೀಸರ ಸಮನ್ಸ್‌

ಕೋಲ್ಕತಾ: ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ತಪ್ಪು ಮಾಹಿತಿ ಹಂಚಿಕೊಂಡ ಆರೋಪದಡಿ ಟಿಎಂಸಿ ಸಂಸದ ಸುಖೇಂದು, ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ, ಹಾಗೂ ಇಬ್ಬರು ವೈದ್ಯರಿಗೆ ಕೋಲ್ಕತಾ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಆ.9 ರಂದು ವೈದ್ಯೆಯ ಶವ ಪತ್ತೆಯಾಗಿದ್ದು, ಅದಾದ ಮೂರು ದಿನಗಳ ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ಶ್ವಾನ ಕರೆದೊಯ್ದು ತಪಾಸಣೆ ನಡೆಸಿದ್ದಾರೆ. ಜೊತೆಗೆ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸಿದ್ದಾಂತ ಹರಿಬಿಟ್ಟಿದ್ದೇಕೆ? ಅವರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸಬೇಕು ಎಂದು ಸುಖೇಂದು ಹೇಳಿದ್ದರು. ಇನ್ನೊಂದೆಡೆ ಲಾಕೆಟ್ ಚಟರ್ಜಿ, ಹತ್ಯೆಗೊಳಗಾದ ವೈದ್ಯೆಯ ಫೋಟೋ, ಹೆಸರು ಬಹಿರಂಗಪಡಿಸಿದ್ದರು. ಮತ್ತೊಂದೆಡೆ ಇಬ್ಬರು ವೈದ್ಯರು, ಹತ್ಯೆಗೊಳಗಾದ ವೈದ್ಯೆಯ ಗುಪ್ತಾಂಗದಲ್ಲಿ 150 ಎಂಎಂನಷ್ಟು ವೀರ್ಯ ಪತ್ತೆಯಾಗಿದೆ ಎಂದಿದ್ದರು ಈ ಹಿನ್ನೆಲೆಯಲ್ಲಿ ಪೊಲೀಸರು ಸಮನ್ಸ್ ನೀಡಿದ್ದಾರೆ. 

ವೈದ್ಯೆ ರೇಪ್ & ಮರ್ಡರ್ ಆದ ಕೋಲ್ಕತ್ತಾ ಕಾಲೇಜಿನ ಕರಾಳ ಮುಖ ತೆರೆದಿಟ್ಟ ಮಹಿಳಾ ವೈದ್ಯೆಯ ಆಡಿಯೋ

ಕೋಲ್ಕತಾ ವೈದ್ಯೆ ಕೊಲೆ ಉದ್ದೇಶಪೂರ್ವಕ: ಶಂಕೆ

ಕೋಲ್ಕತಾ: ಇಲ್ಲಿನ ಪ್ರತಿಷ್ಠಿತ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ವೈದ್ಯೆಯ ಕೆಲವು ಸಹೋದ್ಯೋಗಿಗಳು ಪ್ರಕರಣದ ಕುರಿತು ಪ್ರಮುಖ ವಿವರ ಬಹಿರಂಗಪಡಿಸಿದ್ದಾರೆ. ಇದು ಸರಳವಾದ ಅಪರಾಧ ಪ್ರಕರಣವಲ್ಲ. ಉದ್ದೇಶಪೂರ್ವಕ ಕೃತ್ಯದಂತಿದೆ ಎಂದು ಶಂಕಿಸಿದ್ದಾರೆ. ವೈದ್ಯೆ 48 ಗಂಟೆಗಳ ನಿರಂತರ ಪಾಳಿ ಸೇರಿದಂತೆ ಭಾರೀ ಕೆಲಸದ ಒತ್ತಡದಲ್ಲಿದ್ದಳು. ಇದೇ ವೇಳೆ, ಬಂಧಿತ ಆರೋಪಿ ಸಂಜಯ್ ರಾಯ್‌ಗೆ ಸಂತ್ರಸ್ತೆ ಸೆಮಿನಾರ್ ಹಾಲ್‌ನಲ್ಲಿ ಒಬ್ಬಳೇ ಇರುವುದು ಹೇಗೆ ಗೊತ್ತಾಯಿತು. ರಾಯ್‌ ಒಂದು ದೊಡ್ಡ ಜಾಲದಲ್ಲಿನ ಭಾಗವಾಗಿರಬಹುದು ಅಷ್ಟೆ ಎಂದು ಒಬ್ಬ ಸಹೋದ್ಯೋಗಿ ಸಂದೇಹಿಸಿದ್ದಾರೆ. ಇನ್ನೊಬ್ಬ ಸಹೋದ್ಯೋಗಿ ಮಾತನಾಡಿ, ಸಂತ್ರಸ್ತೆಯು ತನ್ನ ಇಲಾಖೆಯಲ್ಲಿ ಸಂಭವನೀಯ ಡ್ರಗ್ಸ್‌ ಜಾಲ ಬಹಿರಂಗಪಡಿಸಲು ಪ್ರಯತ್ನಿಸುತ್ತಿದ್ದಳು. ಆಕೆಗೆ ತುಂಬಾ ತಿಳಿದಿರಬಹುದು. ಹೀಗಾಗಿ ಆಕೆಯನ್ನು ಕೊಂದಿರಬಹುದು ಎಂದಿದ್ದಾರೆ. 

70 ಪದ್ಮ ಪುರಸ್ಕೃತ ವೈದ್ಯರಿಂದ ಪ್ರಧಾನಿಗೆ ಪತ್ರ
ನವದೆಹಲಿ: ಕೋಲ್ಕತಾ ವೈದ್ಯೆಯ ರೇಪ್ ಮತ್ತು ಕೊಲೆ ಪ್ರಕರಣದ ಹಿನ್ನೆಲೆ ಆರೋಗ್ಯ ಸಿಬ್ಬಂದಿ ಮೇಲಿನ ಹಿಂಸಾಚಾರವನ್ನು ನಿಭಾಯಿಸಲು ವಿಶೇಷ ಕಾನೂನನ್ನು ಜಾರಿಗೊಳಿಸಬೇಕೆಂದು 70ಕ್ಕೂ ಹೆಚ್ಚು ಪದ್ಮ ಪ್ರಶಸ್ತಿ ಪುರಸ್ಕೃತ ವೈದ್ಯರು ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಆರೋಗ್ಯ ಕಾರ್ಯಕರ್ತರ ಮೇಲೆ ಮೌಖಿಕ ಅಥವಾ ದೈಹಿಕ ಹಿಂಸಾಚಾರ ಮಾಡುವವರಿಗೆ ಕಠಿಣ ಶಿಕ್ಷೆ ನೀಡುವಂತೆ ಕೇಂದ್ರ ಸರ್ಕಾರ ತಕ್ಷಣ ಸುಗ್ರೀವಾಜ್ಞೆ ಜಾರಿಗೆ ತರಬೇಕು. ಜತೆಗೆ ವೈದ್ಯಕೀಯ ಸೌಲಭ್ಯಗಳಲ್ಲಿ ಸಿಬ್ಬಂದಿಗೆ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios