Asianet Suvarna News Asianet Suvarna News

ಭಾರತ ರತ್ನ ಮೂರು : ಲೆಕ್ಕಾಚಾರಗಳು ಹಲವಾರು

ಮಾಜಿ ಪ್ರಧಾನಿ ನರಸಿಂಹರಾವ್‌, ಚೌಧರಿ ಚರಣ್‌ ಸಿಂಗ್‌ ಮತ್ತು ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಘೋಷಣೆಯ ಬೆನ್ನಲ್ಲೇ, ಈ ಮೂವರಿಗೆ ದೇಶದ ಅತ್ಯುನ್ನತ ನಾಗರಿಕ ಘೋಷಣೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುತ್ಸದ್ಧಿತನದ ಕುರಿತು ನಾನಾ ವಿಶ್ಲೇಷಣೆಗಳು ಕೇಳಿ ಬಂದಿವೆ.

numerous calculations behind 3 Bharat Ratna award N.Swaminathan, Charansingh, PV Narasimha Rao got award akb
Author
First Published Feb 10, 2024, 7:15 AM IST
  • ಸ್ವಾಮಿನಾಥನ್‌ಗೆ ಪ್ರಶಸ್ತಿ ಹಿಂದೆ ರೈತಾಪಿ ವರ್ಗ ಮೊದಲೆಂಬ ಸಂದೇಶ
  • ಉತ್ತರ - ದಕ್ಷಿಣ ಪ್ರತ್ಯೇಕತೆ ಚರ್ಚೆ ನಡುವೆಯೇ ದಕ್ಷಿಣದ ರಾವ್‌ಗೆ ಪ್ರಶಸ್ತಿ
  • ಚರಣ್‌ಸಿಂಗ್‌, ರಾವ್‌ ಬೇರೆ ಪಕ್ಷಗಳಿಗೆ ಸೇರಿದ್ದರೂ ಮುತ್ಸದ್ಧಿತನ ಪ್ರದರ್ಶನ
  • ಮೂರು ಗಣ್ಯರಿಗೆ ‘ಭಾರತ ರತ್ನ’ ಘೋಷಣೆ ಹಿಂದಿನ ಮೋದಿ ಲೆಕ್ಕಾಚಾರ

ನವದೆಹಲಿ: ಮಾಜಿ ಪ್ರಧಾನಿ ನರಸಿಂಹರಾವ್‌, ಚೌಧರಿ ಚರಣ್‌ ಸಿಂಗ್‌ ಮತ್ತು ಎಂ.ಎಸ್‌. ಸ್ವಾಮಿನಾಥನ್‌ ಅವರಿಗೆ ಭಾರತ ರತ್ನ ಘೋಷಣೆಯ ಬೆನ್ನಲ್ಲೇ, ಈ ಮೂವರಿಗೆ ದೇಶದ ಅತ್ಯುನ್ನತ ನಾಗರಿಕ ಘೋಷಣೆಯ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುತ್ಸದ್ಧಿತನದ ಕುರಿತು ನಾನಾ ವಿಶ್ಲೇಷಣೆಗಳು ಕೇಳಿಬಂದಿವೆ.

ಸ್ವಾಮಿನಾಥನ್‌:

ದೇಶದ ಹಸಿರು ಕ್ರಾಂತಿಯ ಹರಿಹಾರ ಎಂಬ ಹಿರಿಮೆ ಹೊಂದಿರುವ ಸ್ವಾಮಿನಾಥನ್‌ ಅವರಿಗೆ ಅತ್ಯುನ್ನತ ನಾಗರಿಕ ಗೌರ ಸಲ್ಲಿಕೆಯೊಂದಿಗೆ ಕೃಷಿ ವಲಯ, ರೈತಾಪಿ ವರ್ಗ ಮೊದಲು ಎಂಬ ಸಂದೇಶವನ್ನು ದೇಶಕ್ಕೆ ರವಾನಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ.

ನರಸಿಂಹರಾವ್‌:

ನರಸಿಂಹರಾವ್‌ ಕಾಂಗ್ರೆಸ್‌ನ ಕಟ್ಟಾಳಾಗಿದ್ದವರು. ಅವರದ್ದೇ ಪಕ್ಷದಿಂದ ಪ್ರಧಾನಿಯಾದವರು. ದೇಶದ ಆರ್ಥಿಕ ಕ್ರಾಂತಿಯ ಹರಿಕಾರ ಕೂಡಾ ಹೌದು. ಆದರೆ ಕಡೆಯ ಸಮಯದಲ್ಲಿ ಪಕ್ಷ ಅವರನ್ನು ಅಗೌರವವಾಗಿ ನಡೆಸಿಕೊಂಡಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರಿಗೆ ಯಾವುದೇ ಗೌರವ ನೀಡಿರಲಿಲ್ಲ. ಆದರೆ ಇದೀಗ ಪಕ್ಷಾತೀತವಾಗಿ ರಾವ್‌ ಅವರನ್ನು ಗುರುತಿಸಿ ಮೋದಿ ಸರ್ಕಾರ ರಾಜಕೀಯ ಮುತ್ಸದ್ಧಿತನ ಪ್ರದರ್ಶಿಸಿದೆ. ಜೊತೆಗೆ ಉತ್ತರ - ದಕ್ಷಿಣ ವಿಭಜನೆಯ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲೇ ಈ ಪ್ರಶಸ್ತಿ ಪ್ರಕಟ ಮಾಡಿರುವುದು, ಮೋದಿ ಸರ್ಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದೆ ಎಂಬ ಚರ್ಚೆಗೆ ಬ್ರೇಕ್‌ ಹಾಕುವ ಉದ್ದೇಶವನ್ನೂ ಹೊಂದಿದೆ ಎನ್ನಲಾಗಿದೆ.

LK Advani: ಬಿಜೆಪಿ ಭೀಷ್ಮ..ಅಡ್ವಾಣಿಗೆ ಭಾರತ ರತ್ನ: ರಾಜಕೀಯ ಗುರುವಿಗೆ ಶಿಷ್ಯ ಕೊಟ್ಟ ಅದ್ಭುತ ಕಾಣಿಕೆ..!

ಚರಣ್‌ಸಿಂಗ್‌:

ಚರಣ್‌ಸಿಂಗ್‌, ಜಾಟ್‌ ಸಮುದಾಯದ ಪ್ರಮುಖ ನಾಯಕ. ಸ್ವಾತಂತ್ರ್ಯ ಹೋರಾಟಗಾರ ಕೂಡಾ ಹೌದು. ಜನತಾ ಪಕ್ಷದಿಂದ ಸಂಸತ್ತಿಗೆ ಕಾಂಗ್ರೆಸ್‌ ಬೆಂಬಲದೊಂದಿಗೆ ಪ್ರಧಾನಿಯಾಗಿದ್ದರು. ಹೀಗೆ ಅನ್ಯಪಕ್ಷದ ರಾಜಕೀಯ ನಾಯಕರ ಗೌರವಿಸುವ ಮೂಲಕ ಮೋದಿ ಸರ್ಕಾರ ರಾಜಕೀಯ ಮುತ್ಸದ್ಧಿತನ ಮತ್ತು ಚಾಣಾಕ್ಷತನ ತೋರಿದೆ ಎನ್ನಲಾಗಿದೆ. ಉತ್ತರಪ್ರದೇಶದಲ್ಲಿ ಜಾಟ್‌ ಸಮುದಾಯದ ಅತ್ಯಂತ ಪ್ರಭಾವಿ. ಚರಣ್‌ಸಿಂಗ್‌ ಸ್ಥಾಪಿಸಿದ್ದ ರಾಷ್ಟ್ರೀಯ ಲೋಕದಳಕ್ಕೆ ಅವರ ಮೊಮ್ಮಗ ಜಯಂತ್‌ ಸಿಂಗ್‌ ಇದೀಗ ಅಧ್ಯಕ್ಷ. ಕಳೆದ ಬಾರಿ ಸಮಾಜವಾದಿ ಪಕ್ಷದ ಜೊತೆಗಿದ್ದ ಜಯಂತ್‌ ಇದೀಗ ಬಿಜೆಪಿ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಈ ಬೆಳವಣಿಗೆ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಲ್ಲದು.

ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್,ಎಂಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ ಘೋಷಣೆ

 ಭಾರತ ರತ್ನಕ್ಕೆ 5ಎಂ ಮಂತ್ರ!
ನವದೆಹಲಿ: ಈ ವರ್ಷ ಘೋಷಿಸಿರುವ 5 ಭಾರತ ರತ್ನಗಳಲ್ಲಿ 5ಎಂ ಮಂತ್ರ ಅಡಗಿದೆ. ಅವುಗಳೆಂದರೆ- ಮಂಡಲ್‌, ಮಂದಿರ, ಮಾರ್ಕೆಟ್‌, ಮಿಲೆಟ್‌ ಹಾಗೂ ಮಂಡಿ. ಮಂಡಲ್‌ ಆಯೋಗದ ವರದಿಯಂತೆ ಮೀಸಲಾತಿಗೆ ಹೋರಾಡಿದ ಕರ್ಪೂರಿ ಠಾಕೂರ್‌, ರಾಮಮಂದಿರಕ್ಕಾಗಿ ಹೋರಾಡಿದ ಅಡ್ವಾಣಿ, ಮಾರುಕಟ್ಟೆಯನ್ನು ಜಾಗೀಕರಣಗೊಳಿಸಿದ ನರಸಿಂಹರಾವ್‌, ಮಿಲೆಟ್‌ಗಳಿಗೆ ಮಾನ್ಯತೆ ದೊರಕಿಸಿದ ಸ್ವಾಮಿನಾಥನ್‌, ಕೃಷಿ ಮಾರುಕಟ್ಟೆಗಳ ಸುಧಾರಣೆಗೆ ಕಾರಣವಾದ ಚರಣ ಸಿಂಗ್‌ ಭಾರತ ರತ್ನ ಪಡೆದಿದ್ದಾರೆ.

Follow Us:
Download App:
  • android
  • ios