Asianet Suvarna News Asianet Suvarna News

Ayodhya Temple: ರಾಮಮಂದಿರ, ಅಯೋಧ್ಯೆಯೂ ಆಗುತ್ತೆ ಸ್ಮಾರ್ಟ್ ಸಿಟಿ, ಪ್ಲ್ಯಾನ್ಸ್ ಏನು?

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಜನ್ಮಭೂಮಿಯ ನಿರ್ಮಾಣದ ಉಸ್ತುವಾರಿ ಸಮಿತಿಯ ಮುಖ್ಯಸ್ಥರಾಗಿರುವ ನೃಪೇಂದ್ರ ಮಿಶ್ರಾ ಅವರೊಂದಿಗೆ ಏಷ್ಯಾನೆಟ್‌ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

nripendra misra Shares Ram Mandir Plans Ayodhya will also become a smart city san
Author
First Published Sep 13, 2023, 12:36 PM IST

ಅಯೋಧ್ಯೆ (ಸೆ.12): ಪ್ರಧಾನಿ ನರೇಂದ್ರ ಮೋದಿ ಅವರ ನಂಬಿಕಸ್ತ ಅಧಿಕಾರಿ, ಹಲವು ವರ್ಷಗಳ ಕಾಲ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರಾ ದೊಡ್ಡ ಜವಾಬ್ದಾರಿ ಹೊತ್ತಿದ್ದಾರೆ. ಹಿಂದುಗಳ ಹೋರಾಟದ ಅಸ್ಮಿತೆಯಂತಿರುವ ಶ್ರೀರಾಮ ಜನ್ಮಭೂಮಿಯ ನಿರ್ಮಾಣದ ಉಸ್ತುವಾರಿ ಸಮಿತಿಯ ಮುಖ್ಯಸ್ಥರಾಗಿರುವ ನೃಪೇಂದ್ರ ಮಿಶ್ರಾಗೆ ಈಗ ಬಿಡುವಿಲ್ಲದ ದಿನಗಳು. ಏಕೆಂದರೆ, ಶ್ರೀರಾಮಜನ್ಮಭೂಮಿ ಲೋಕಾರ್ಪಣೆಯಾಗುವ ದಿನಾಂಕ ನಿಶ್ಚಯವಾಗಿದೆ. ದೇವಸ್ಥಾನದ ಗರ್ಭಗೃಹ, ಮೂರ್ತಿಗಳು, ಉಳಿದ ವ್ಯವಸ್ಥೆಗಳು ಎಲ್ಲವನ್ನೂ ಈಗ ಇಂಚಿಂಚೂ ಗಮನವಿಟ್ಟು ಮಾಡಬೇಕಿದೆ. ಇದರ ನಡುವೆ ಏಷ್ಯಾನೆಟ್‌ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಜೊತೆ ಹಲವಾರು ವಿಚಾರಗಳನ್ನು ಅವರು ಮಾತನಾಡಿದ್ದಾರೆ. ಅಯೋಧ್ಯೆಯ ಪಾಲಿಗೆ ಶ್ರೀರಾಮ ಜನ್ಮಭೂಮಿ ಸಂಫೂರ್ಣ ಬದಲಾವಣೆಗೆ ಕಾರಣವಾಗುವ ದೇವಸ್ಥಾನ. ಇಡೀ ಅಯೋಧ್ಯೆ ನಗರವನ್ನು ದೇವಸ್ಥಾನದ ಕಾರಣದಿಂದಾಗಿ ಸಂಪೂರ್ಣವಾಗಿ ಬದಲು ಮಾಡಲಾಗುತ್ತುದೆ. ಸ್ಮಾರ್ಟ್‌ ಸಿಟಿ ಪ್ರಾಜೆಕ್ಟ್‌ ನಡೆಯುತ್ತಿದೆ. ಈ ಬಗ್ಗೆಯೂ ನೃಪೇಂದ್ರ ಮಿಶ್ರಾ, ರಾಜೇಶ್‌ ಕಾಲ್ರಾ ಅವರೊಂದಿಗೆ ಮಾತನಾಡಿದರು.

ಕಳೆದ ಬಾರಿ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಬಗ್ಗೆ, ಭಕ್ತರ ಜನದಟ್ಟಣೆಯನ್ನು ನಗರ ತಾಳಿಕೊಳ್ಳುವ ಬಗ್ಗೆ ಮಾತಾಡಿದ್ದೆವು. ಅದು ನಿಮ್ಮ ವ್ಯಾಪ್ತಿಯ ಹೊರಗಿದ್ದರೂ ಸಹ ನಿಮಗೆ ಗೊತ್ತಿರುತ್ತದೆಯಲ್ಲವೇ? ಎನ್ನುವ ಕಾಲ್ರಾ ಅವರ ಪ್ರಶ್ನೆಗೆ ಉತ್ತರಿಸಿದ ಮಿಶ್ರಾ,  ಅಯೋಧ್ಯೆಯ ಆಯುಕ್ತರು ಜನರ ನಿರ್ವಹಣೆ ಬಗ್ಗೆ ಒಂದು  ಲೆಕ್ಕಾಚಾರವನ್ನು ನನಗೆ ತೋರಿಸಿದ್ದರು. ಅದರಲ್ಲಿ ನಗರದ ಸಾಮರ್ಥ್ಯವೆಷ್ಟು? ಎಷ್ಟು ಹೋಟೆಲ್‌ಗಳಿವೆ? ಧರ್ಮಶಾಲೆಯ ಸಾಮರ್ಥ್ಯವೇನು? ಎಷ್ಟು ರೈಲುಗಳು ಬರುತ್ತವೆ? ಡಿಸೆಂಬರ್‌ ವೇಳೆಗೆ ಇಲ್ಲಿಂದ ವಿಮಾನಯಾನವೂ ಪ್ರಾರಂಭವಾಗಲಿದೆ. ದಿನಕ್ಕೆ 3 ವಿಮಾನಗಳು ಅಯೋಧ್ಯೆಗೆ ಬರಲಿವೆ. ಈ ಎಲ್ಲವೂ ಭಕ್ತರ ಸಂಖ್ಯೆ ಹೆಚ್ಚಲು ಸಹಾಯಕವಾಗಲಿವೆ. ಆಯುಕ್ತರು, ಎಷ್ಟು ಶೌಚಾಲಯಗಳಿರಬೇಕು? ಎಂಥ ಆಹಾರ ಇರಬೇಕು, ಯಾವ ಭಾಷೆ ಬಳಸಬೇಕು? ಮುಂತಾದ ವಿಷಯಗಳ ಬಗ್ಗೆಯೂ ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಈ ವಿಷಯದಲ್ಲಿ ಬದ್ಧವಾಗಿದೆ ಎಂದು ಹೇಳಿದ್ದಾರೆ.

'ನಾನು ಗಮನಿಸಿದ್ದೇನೆ. ಅಂದಾಜು ಲೆಕ್ಕದಲ್ಲಿ ಹೇಳಬೇಕೆಂದರೆ,  ಎಲ್ಲಾ ರಸ್ತೆಗಳನ್ನು ಅಗೆದು ವಿಸ್ತರಿಸಲಾಗುತ್ತಿದೆ. ಆಯುಕ್ತರ ಲೆಕ್ಕಾಚಾರದಂತೆ ನಗರದ 13 ಕಿ.ಮೀನಲ್ಲಿ 6 ಕಿ.ಮೀನಷ್ಟು ಡಿಸೆಂಬರ್ ವೇಳೆಗೆ ಸಿದ್ಧವಾಗುತ್ತದೆ. ದೇವಸ್ಥಾನದ ಮುಖ್ಯ ರಸ್ತೆ, ವಿಮಾನ ರೈಲ್ವೆ ನಿಲ್ದಾಣದಿಂದ ಬರುವ ರಸ್ತೆಗಳು ಸಿದ್ಧವಾಗಿರುತ್ತವೆ. ಇದಲ್ಲದೆ ತುಂಬಾ ಕೆಲಸ ಇದೆ. ನಾಗರಿಕ ಸೌಲಭ್ಯಗಳು, ನೀರು, ಚರಂಡಿ.. ಈ ಎಲ್ಲದರ ಬಗ್ಗೆಯೂ ಕೆಲಸ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಕೆಲಸ ಮುಗಿಸುವ ಭರವಸೆಯಲ್ಲಿದ್ದಾರೆ' ಎಂದು ಅಯೋಧ್ಯೆ ಈಗ ಸಿದ್ಧವಾಗಿದೆಯಾ? ಎನ್ನುವ ಪ್ರಶ್ನೆಗೆ ಉತ್ತರ ನೀಡಿದರು.

ಅಯೋಧ್ಯೆ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಏನಾಗಿದೆ? ಎನ್ನುವ ಪ್ರಶ್ನೆಗೆ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನಮ್ಮ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಬಹಳ ಇಷ್ಟದ ಪ್ರಾಜೆಕ್ಟ್. ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡಿದವರು. ಸ್ಮಾರ್ಟ್‌ ಸಿಟಿ ಯೋಜನೆಯ ನೇತೃತ್ವ ವಹಿಸಿದವರು. ಹಾಗಾಗಿ ಅವರಿಗೆ ಈ ಬಗ್ಗೆ ಚೆನ್ನಾಗಿ ಗೊತ್ತು. ಹೈವೇ ಪಕ್ಕದ 1200 ಎಕರೆ  ಜಾಗವನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಆದರೆ ನನ್ನ ಪ್ರಕಾರ ಅದು ನೆರವೇರಲು ಕನಿಷ್ಠ 2-3 ವರ್ಷ ಬೇಕು' ಎಂದು ತಿಳಿಸಿದರು.

Ayodhya Temple: ತಿರುಪತಿ ಸೇರಿ ದೇಶದ ವಿವಿಧ ತೀರ್ಥಕ್ಷೇತ್ರಗಳಿಂದ ಅಯೋಧ್ಯೆಗೆ ನೇರ ರೈಲು ಸೇವೆ!

 ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ಗೆಸ್ಟ್‌ ಹೌಸ್‌ಗಳು ಇರಲಿದೆಯೇ ಎನ್ನುವ ಕುತೂಹಲದ ಪ್ರಶ್ನೆಗೆ ಹೌದು ಎಂದೇ ನೃಪೇಂದ್ರ ಮಿಶ್ರಾ ಉತ್ತರ ನೀಡಿದರು. 'ರಾಜ್ಯ ಸರ್ಕಾರ ಒಂದು ಆಫರ್ ನೀಡಿದೆ. ಮಾರಿಷಿಯಸ್, ನೇಪಾಳ, ಶ್ರೀಲಂಕಾದಂಥ ರಾಷ್ಟ್ರಗಳು ತಮ್ಮ ದೇಶದ ಯಾತ್ರಿಕರಿಗಾಗಿ ಇಲ್ಲಿ ಗೆಸ್ಟ್ ಹೌಸ್ ನಿರ್ಮಿಸಬಹುದು. ಅವರಿಗಾಗಿ ಇಲ್ಲಿ ಎಲ್ಲಾ ಸೌಲಭ್ಯ ನೀಡಲಾಗಿದೆ.' ಎಂದು ತಿಳಿಸಿದರು.

Ayodhya Temple: ಜ.14ರಿಂದ ಪೂಜೆ ಪ್ರಾರಂಭ, ರಾಮಲಲ್ಲಾನ ಮೂರ್ತಿಗೂ ಪ್ರಾಣ ಪ್ರತಿಷ್ಠಾಪನೆ!

Follow Us:
Download App:
  • android
  • ios