Asianet Suvarna News Asianet Suvarna News

Ayodhya Temple: ಜ.14ರಿಂದ ಪೂಜೆ ಪ್ರಾರಂಭ, ರಾಮಲಲ್ಲಾನ ಮೂರ್ತಿಗೂ ಪ್ರಾಣ ಪ್ರತಿಷ್ಠಾಪನೆ!

ಭಾರತದ ಪ್ರಧಾನಮಂತ್ರಿ ಮಾಜಿ ಪ್ರಧಾನಿ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಪ್ರಸ್ತುತ ಅಯೋಧ್ಯೆ ದೇವಸ್ಥಾನ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಏಷ್ಯಾನೆಟ್‌ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಅವರೊಂದಿಗಿನ ಸಂದರ್ಶನದಲ್ಲಿ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದು, ಈ ಮಾಹಿತಿ ಕೊಟ್ಟಿದ್ದಾರೆ.
 

chairman of the construction committee of Ram Janmabhoomi trust Nripendra Misra Shares Ayodhya Temple details san
Author
First Published Sep 1, 2023, 3:29 PM IST | Last Updated Sep 1, 2023, 7:57 PM IST

ನವದೆಹಲಿ (ಆ.31): ಇಡೀ ಭಾರತದ ಹೆಮ್ಮೆ ಎನಿಸಿರುವ ಅಯೋಧ್ಯೆಯ ರಾಮಜನ್ಮಭೂಮಿಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.  ಈ ಕಾಮಗಾರಿಯ ಉಸ್ತುವಾರಿಯನ್ನು ಹೊತ್ತುಕೊಂಡಿರುವುದು ನೃಪೇಂದ್ರ ಮಿಶ್ರಾ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾ ನ ಕಾರ್ಯದರ್ಶಿಯಾಗಿ ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೃಪೇಂದ್ರ ಮಿಶ್ರಾಗೆ ಇಡೀ ರಾಮ ಜನ್ಮಭೂಮಿಯ ಉಸ್ತುವಾರಿಯನ್ನು ನೀಡಿರುವುದು ಸ್ವತಃ ಪ್ರಧಾನಮಂತ್ರಿ. ರಾಮ ಜನ್ಮಭೂಮಿಯ ಇಂಚಿಂಚೂ ಹೇಗೆ ಇರಬೇಕು ಎಂದು ತೀರ್ಮಾನ ಆಗಿದೆಯೋ, ಅದೇ ರೀತಿಯಲ್ಲಿ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ನೃಪೇಂದ್ರ ಮಿಶ್ರಾ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ ಏಷ್ಯಾನೆಟ್‌ ಗ್ರೂಪ್‌ನ ವ್ಯವಸ್ಥಾಪಕ ಚೇರ್ಮನ್‌ ರಾಜೇಶ್‌ ಕಾಲ್ರಾ ಅವರ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ದೇವಸ್ಥಾನದ ನಿರ್ಮಾಣ ಕಾಮಗಾರಿ ನಿಗದಿಯಂತೆ ಸಾಗುತ್ತಿದ್ದು, ಜನವರಿ ವೇಳೆಗೆ ರಾಮಮಂದಿರದ ಉದ್ಘಾಟನೆ ಆಗಲಿದೆ ಎಂದಿದ್ದಾರೆ. ಅದರೊಂದಿಗೆ ರಾಮ ಜನ್ಮಭೂಮಿ ಉದ್ಘಾಟನೆ ಯಾವಾಗ ನಡೆಯಲಿದೆ, ಪ್ರಾಣ ಪ್ರತಿಷ್ಠಾಪನೆ ಯಾವಾಗ, ಈಗ ಅಯೋಧ್ಯೆಯಲ್ಲಿ ಸಣ್ಣ ಬಿಡಾರದ್ಲಿ ಪೂಜೆ ಮಾಡಲಾಗುತ್ತಿರುವ ಮೂಲ ರಾಮಲಲ್ಲಾನ ವಿಗ್ರಹವನನ್ನು ಬಳಿಕ ಏನು ಮಾಡಲಾಗುತ್ತದೆ ಎನ್ನುವ ವಿಚಾರಗಳನ್ನು ಅವರು ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಶೀಘ್ರದಲ್ಲಿಯೇ ಪ್ರಸಾರವಾಗಲಿದೆ.

ಅಯೋಧ್ಯೆಯಲ್ಲಿ ಪ್ರಾರ್ಥನೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮ 2024ರ ಜನವರಿ 14 ರಿಂದ ಆರಂಭವಾಗಲಿದೆ. ನಾವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಆಹ್ವಾನಿಸಿದ್ದೇವೆ. ಈ ಬಗ್ಗೆ ಅವರಿಂದ ಪ್ರತಿಕ್ರಿಯೆ ಇನ್ನಷ್ಟೇ ಬರಬೇಕಿದೆ. ಜ.14 ರಂದು ಪ್ರಾರ್ಥನೆಗಳು ಆರಂಭವಾಗಲಿದೆ. ಆ ಬಳಿಕ ಅಂದರೆ, ಜನವರಿ 24ರ ಒಳಗಿನ ಯಾವುದೇ ದಿನಾಂಕವನ್ನು ಅವರು ನಿರ್ಧಾರ ಮಾಡಿದಲ್ಲಿ ಅಂದು ನಾವು ಅಂತಿಮ ಪ್ರಾಣ ಪ್ರತಿಷ್ಠಾಪನೆ ಮಾಡಲಿದ್ದೇವೆ. ಅಂದು ಭಗವಾನ್‌ ರಾಮನನ್ನು ಇಲ್ಲಿ ಸ್ಥಾಪಿಸಲಾಗುತ್ತದೆ. ಮರುದಿನದಿಂದ ಭಕ್ತಾದಿಗಳಿಗೆ ಪ್ರವೇಶ ಇರಲಿದೆ. ಭಗವಾನ್ ರಾಮನ ಹೊಸ ಮೂರ್ತಿಯ ಎದುರುಗಡೆಯೇ ಈಗಿರುವ ರಾಮಲಲ್ಲಾನ ಮೂರ್ತಿ ಇರಲಿದೆ. ರಾಮಲಲ್ಲಾನ ಈಗಿರುವ ಮೂರ್ತಿಗೆ ಎಲ್ಲಾ ವಿಧಿವಿಧಾನಗಳನ್ನು ಪೂರೈಸಿ ಪ್ರತಿಷ್ಠಾಪನೆ ಮಾಡಲಾಗುತ್ತದೆ,' ಎಂದು ನೃಪೇಂದ್ರ ಮಿಶ್ರಾ ಮಾಹಿತಿ ನೀಡಿದ್ದಾರೆ.

ಹಲವು ವರ್ಷಗಳ ಕಾಲ ಸರ್ಕಾರದ ಪ್ರಧಾನ ಹುದ್ದೆಗಳಲ್ಲಿ ಕೆಲಸ ಮಾಡಿದ್ದ ನೃಪೇಂದ್ರ ಮಿಶ್ರಾ, 2020 ರಿಂದ ಸಂಪೂರ್ಣವಾಗಿ ರಾಮ ಜನ್ಮಭೂಮಿ ನಿರ್ಮಾಣದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಐಎಎಸ್‌ ಅಧಿಕಾರಿಯಾಗಿ ನಿವೃತ್ತಿಯಾಗುವ ವ್ಯಕ್ತಿಗೆ ಆ ಬಳಿಕ ಅದೇ ರೀತಿಯ ಘನತೆಯ ಇನ್ನೊಂದು ಹುದ್ದೆ ಸಿಗುವುದು ಕಷ್ಟ. ಆದರೆ, ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿಯಾಗಿ ಮಹತ್ವದ ಕಾರ್ಯ ನಿಭಾಯಿಸಿದ್ದ 78 ವರ್ಷದ ನೃಪೇಂದ್ರ ಮಿಶ್ರಾ ಅವರಿಗೆ ಈಗ ರಾಮಜನ್ಮಭೂಮಿಯ ಆಧಾತ್ಮಿಕ ಟಾಸ್ಕ್‌ ನೀಡಲಾಗಿದೆ. ಕನಿಷ್ಠ ಮುಂದಿನ 1 ಸಾವಿರ ವರ್ಷಗಳು ಬಾಳಿಕೆ ಬರುವಂಥ ದೇವಾಲಯವನ್ನು ನಿರ್ಮಾಣ ಮಾಡುವ ಅಗತ್ಯವಿರುವ ವೈವಿಧ್ಯಮಯ ತಾಂತ್ರಿಕ ಅಂಶಗಳ ಬಗ್ಗೆ ಗಮನ ನೀಡುವುದರೊಂದಿಗೆ, ಹಲವಾರು ಧಾರ್ಮಿಕ ಮುಖಂಡರು, ಸ್ಥಳೀಯ ಜನರು ಹಾಗೂ ರಾಜಕಾರಣಿಗಳೊಂದಿಗೆ ಕೂಡ ಅವರು ವ್ಯವಹರಿಸಬೇಕಿದೆ.

ಜನರಿಗೆ ಶ್ರೀರಾಮನ ದರ್ಶನ ಯಾವಾಗ? ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಜೊತೆ Exclusive Interview!

ರಾಮಜನ್ಮಭೂಮಿ ನಿರ್ಮಾಣ ನನ್ನನ್ನು ಇನ್ನಷ್ಟು ವಿನಮ್ರ ವ್ಯಕ್ತಿಯನ್ನಾಗಿ ಮಾಡಿದೆ ಎನ್ನುವ ನೃಪೇಂದ್ರ ಮಿಶ್ರಾ, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಜನಪ್ರಿಯ ತಾಣವಾಗಿ ಮಾರ್ಪಟ್ಟಿರುವ ಪ್ರಧಾನಮಂತ್ರಿ ಸಂಗ್ರಹಾಲಯ (ಪ್ರಧಾನಿಗಳ ವಸ್ತುಸಂಗ್ರಹಾಲಯ) ನಿರ್ಮಾಣ ಹಂತದಲ್ಲಿಯೂ ಅವರೇ ಮೇಲ್ವಿಚಾರಣೆ ನಡೆಸಿದ್ದರು. ತಮಗೆ ಸ್ವತಃ ಪ್ರಧಾನಮಂತ್ರಿ ಈ ಜವಾಬ್ದಾರಿ ನೀಡಿದ ದಿನದಿಂದ ಇಲ್ಲಿಯವರೆಗೂ ಪ್ರತಿವಾರ ಅಯೋಧ್ಯೆಗೆ ಪ್ರಯಾಣ ಮಾಡುವ ನೃಪೇಂದ್ರ ಮಿಶ್ರಾ, ಆಗಿರುವ ಕೆಲಸಗಳ ಅಪ್‌ಡೇಟ್‌ ಪಡೆದು ಕೊಳ್ಳುತ್ತಾರೆ. ಪ್ರತಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುವ ನೃಪೇಂದ್ರ ಮಿಶ್ರಾ ಮುಂದಾಗಬೇಕಿರುವ ಕೆಲಸಗಳು ಹಾಗೂ ಸಮಸ್ಯೆ ಇದ್ದಲ್ಲಿ ಮಾಡಬೇಕಿರುವ ನಿರ್ಧಾರದ ಬಗ್ಗೆಯೂ ಗಮನ ನೀಡುತ್ತಾರೆ.

ಅಯೋಧ್ಯೆ ರಾಮಮಂದಿರ ಗರ್ಭಗುಡಿ 2023ರ ಡಿಸೆಂಬರ್‌ನಲ್ಲಿ ಪೂರ್ಣ: ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ

 

 

 

Latest Videos
Follow Us:
Download App:
  • android
  • ios