ಅಬ್ಬಬ್ಬಾ ಏನ್ ಕದ್ದ ನೋಡಿ: ಚರಂಡಿ ಮುಚ್ಚಳನು ಬಿಡಲ್ಲ

ಖದೀಮನೋರ್ವ ರಸ್ತೆ ಬದಿ ಚರಂಡಿಗೆ ಯಾರು ಬೀಳದಂತೆ ಹಾಕಿದ್ದ ಕಬ್ಬಿಣದ ಮುಚ್ಚಳವನ್ನೇ (Drain Cover) ಎಗರಿಸಿದ್ದಾನೆ. ಈತನ ಕೃತ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ CC Camera) ಸೆರೆ ಆಗಿದೆ.

Nothing is safe in India Man came with scooter steals Iron Drain Cover from the road video goes viral akb

ನವದೆಹಲಿ: ಭಾರತದಲ್ಲಿ ಸಾರ್ವಜನಿಕ ಆಸ್ತಿಯನ್ನು ನಮ್ಮ ಸ್ವಂತ ಆಸ್ತಿ ಎಂದು ಭಾವಿಸುವವರು ಭೂಮಿಯನ್ನು ಒತ್ತುವರಿ ಮಾಡುವ ಕೆಲ ಖದೀಮರು, ಅದು ಭೂಮಿಗೆ ಮಾತ್ರ ಉಳಿದ ಸಾರ್ವಜನಿಕ ಆಸ್ತಿ ಎನಿಸಿಕೊಂಡ ಶೌಚಾಲಯ ಬಸ್ ನಿಲ್ದಾಣ, ರೈಲು ಬಸು ಇವುಗಳಿಗೇ ಏನಾದರೂ ಕೇಳುವವರೇ ಇಲ್ಲ. ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಕಬ್ಬಿಣದಿಂದ ನಿರ್ಮಿಸಿದ್ದ ಬಳಕೆಯಲ್ಲಿಲ್ಲದ ಸೇತುವೆಯನ್ನೇ ಹಗಲು ರಾತ್ರಿಯಾಗುವುದರೊಳಗೆ ಖದೀಮರು ಕಾಣದಂತೆ ಮಾಡಿದ್ದರು. ಇದರಲ್ಲಿ ಅಧಿಕಾರಿಗಳೇ ಶಾಮೀಲಾಗಿ ಅದು ನಂತರ ದೊಡ್ಡ ಸಂಚಲನ ಸೃಷ್ಟಿಸಿತ್ತು. ಈಗ್ಯಾಕೆ ಈ ಸುದ್ದಿ ಅಂತೀರಾ ಇಲ್ಲೊಂದು ಅದೇ ರೀತಿಯ ಸಾರ್ವಜನಿಕ ಆಸ್ತಿಯ ಕಳ್ಳತನವಾಗಿದೆ.

ಖದೀಮನೋರ್ವ ರಸ್ತೆ ಬದಿ ಚರಂಡಿಗೆ ಯಾರು ಬೀಳದಂತೆ ಹಾಕಿದ್ದ ಕಬ್ಬಿಣದ ಮುಚ್ಚಳವನ್ನೇ (Drain Cover) ಎಗರಿಸಿದ್ದಾನೆ. ಈತನ ಕೃತ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ CC Camera) ಸೆರೆ ಆಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(Social Media) ವೈರಲ್ ಆಗಿದೆ. ಪ್ರಸ್ತುತ ಕಬ್ಬಿಣಕ್ಕೆ ಚಿನ್ನದ ಬೆಲೆ ಇದೆ. ದಿನೇ ದಿನೇ ಕಟ್ಟಡಗಳ ನಿರ್ಮಾಣ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳೆಯ ಕಬ್ಬಿಣಕ್ಕೂ ಒಳ್ಳೆಯ ಬೆಲೆ ಸಿಗುತ್ತಿದೆ. ಇದೇ ಕಾರಣಕ್ಕೆ ಕೆಲ ಖದೀಮರು ರಸ್ತೆ ಬದಿ ಫುಟ್‌ಪಾತ್‌ಗೂ (Footpath) ರಸ್ತೆಗೂ ನಡುವೆ ಹಾಕಿದ್ದ ಕಬ್ಬಿಣದ ರಾಡ್‌ಗಳನ್ನು ಮ್ಯಾನ್‌ಹೋಲ್ ಮುಚ್ಚಿದ ಕಬ್ಬಿಣದ ದಪ್ಪನೆಯ ಶೀಟುಗಳನ್ನು ಕೂಡ ಕದ್ದುಕೊಂಡು ಹೋಗಿ ಗುಜುರಿಗೆ ಕೊಟ್ಟು ಕಾಸು ಮಾಡುತ್ತಿದ್ದಾರೆ. ಇದರ ಪರಿಣಾಮವನ್ನು ಇನ್ಯಾರೋ ಅನುಭವಿಸುತ್ತಾರೆ.

 

ವಾಹನ ಸವಾರರು, ಪಾದಚಾರಿಗಳು ತಿಳಿಯದೆಯೇ ಇಂತಹ ಗುಂಡಿಗಳಿಗೆ ಬಿದ್ದು, ಕೈ ಕಾಲು ಮುರಿದುಕೊಳ್ಳುತ್ತಾರೆ, ಜೀವಕ್ಕೂ ಹಾನಿಯಾಗುತ್ತಿದೆ. ಅಂದ ಹಾಗೆ ಇದು ಎಲ್ಲಿ ಸೆರೆ ಆಗಿರುವ ದೃಶ್ಯ ಎಂಬುದು ತಿಳಿದು ಬಂದಿಲ್ಲ. ಇನ್ಸ್ಟಾಗ್ರಾಮ್‌ನಲ್ಲಿ videonation.teb ಎಂಬ ಪೇಜ್‌ನಿಂದ ಪೋಸ್ಟ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ. ಇಲ್ಲಿ ಯಾವುದು ಕೂಡ ಸುರಕ್ಷಿತ ಅಲ್ಲ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ. ಎರಡು ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ.

ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್‌ವೆಲ್ ಜಗ್ಗಿದ್ರೂ ಶರಾಬು ಬಂತು

ವಿಡಿಯೋದಲ್ಲಿ ಕಾಣಿಸುವಂತೆ ಸ್ಕೂಟರ್‌ನಲ್ಲಿ ಬಂದ ಕೇಸರಿ ಬಣ್ಣದ ಶರ್ಟ್ ಧರಿಸಿದ ವ್ಯಕ್ತಿಯೊಬ್ಬ, ಚರಂಡಿ ಪಕ್ಕ ತನ್ನ ಸ್ಕೂಟರ್ ನಿಲ್ಲಿಸುತ್ತಾನೆ. ನಂತರ ಅಲ್ಲೇ ಇದ್ದ ಚರಂಡಿಯ ಮುಚ್ಚಳವನ್ನು ಮೆಲ್ಲನೇ ಮೇಲೆತ್ತುತ್ತಾನೆ. ನಂತರ ಅದನ್ನು ಮೆಲ್ಲ ತನ್ನ ಸ್ಕೂಟರ್ ಮೇಲಿಟ್ಟು ಅದರ ಮೇಲೆ ತಾನು ಕುಳಿತುಕೊಂಡು ಸ್ಕೂಟರ್ ಚಲಾಯಿಸಿ ಕ್ಷಣದಲ್ಲಿ ಅಲ್ಲಿಂದ ಮಾಯವಾಗುತ್ತಾನೆ.  ಇದೇ ಕಾರಣಕ್ಕೆ ಬ್ಯಾಂಕ್‌ನಲ್ಲಿ ಮೂರು ರೂಪಾಯಿಗೆ ಸಿಗುವ ಪೆನ್ನಿಗೂ ಬ್ಯಾಂಕ್ ಸಿಬ್ಬಂದಿ (Bank personels) ದಾರ ಕಟ್ಟಿಡುವುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಒಟ್ಟಿನಲ್ಲಿ ಸಾರ್ವಜನಿಕ ಆಸ್ತಿ ಎಂದರೆ ಎಲ್ಲೆಡೆ ಏನಾದರೊಂದು ಕೈ ಚಳಕ ತೋರಿ ಹಾನಿ ಮಾಡುತ್ತಾರೆ. ನಮ್ಮದಲ್ಲದ ಮೇಲೆ ಹೇಗಿದ್ದರೇನು ಎಂಬ ಭಾವನೆ ಅನೇಕರದ್ದು, ಇದೇ ಕಾರಣಕ್ಕೆ ಸಾರ್ವಜನಿಕ ಆಸ್ತಿಯನ್ನು ಹೇಳುವವರು ಕೇಳುವವರು ಇಲ್ಲದಂತಾಗುತ್ತಾರೆ. ಇದೇ ಕಾರಣಕ್ಕೆ ಸಾವಿರಾರು ಕೋಟಿಯ ಜನರು ಕಟ್ಟಿದ ತೆರಿಗೆಯಿಂದ ನಿರ್ಮಿಸಲಾದಂತಹ ಸರ್ಕಾರಿ ಆಸ್ಪತ್ರೆಗಳು, ವಸತಿ ಗೃಹಗಳು, ಬಸ್‌ಗಳು, ಸಾರ್ವಜನಿಕ ಶೌಚಾಲಯಗಳು ಬಳಸಲಾಗದಂತಹ ಸ್ಥಿತಿ ತಲುಪಿರುತ್ತವೆ. 


ಇಲ್ಲಿ ಫೋನ್ ಎಗರಿಸಿದ್ದು ಕಳ್ಳ ಅಲ್ಲ ಪೊಲೀಸ್... ವಿಡಿಯೋ ವೈರಲ್

Latest Videos
Follow Us:
Download App:
  • android
  • ios