ಮದಿರೆಯ ನಶೆಯಲ್ಲಿ ಊರಿಗೆ ಊರೇ ಸುಸ್ತು: ಬೋರ್‌ವೆಲ್ ಜಗ್ಗಿದ್ರೂ ಶರಾಬು ಬಂತು

ಮಧ್ಯಪ್ರದೇಶದಲ್ಲಿ ಅಕ್ರಮ ಸರಾಯಿ ಮಾರಾಟಗಾರರು ಹಾಗೂ ಕಳ್ಳಭಟ್ಟಿ ದಂಧೆ ವ್ಯಾಪಕವಾಗಿ ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಅಬಕಾರಿ ಇಲಾಖೆ ಯೋಜನೆ ರೂಪಿಸಿ ಇಂತಹ ಕಳ್ಳಭಟ್ಟಿ ದಂಧೆ ನಡೆಯುವ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿನ ತಂತ್ರಜ್ಞಾನ ಆಧರಿತ ವ್ಯವಸ್ಥೆಗೆ ಅಬಕಾರಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದರು.

Madhya Pradesh Excise Police shocked after they raids on illigal Liquor manufacturing plant Liquor came from the hand pump akb

ಭೋಪಾಲ್: ಕಳ್ಳದಂಧೆಕೋರರು ಇತ್ತೀಚೆಗೆ ಸ್ಮಾರ್ಟ್‌ಫೋನ್‌ಗಿಂತಲೂ ಒಂದು ಹೆಜ್ಜೆ ಹೆಚ್ಚೇ ಸ್ಮಾರ್ಟ್ ಆಗುತ್ತಿದ್ದಾರೆ. ಪೊಲೀಸರು ಚಾಪೆ ಕೆಳಗೆ ನುಗ್ಗಿದರೆ ಅಕ್ರಮ ದಂದೆಕೋರರು ರಂಗೋಲಿ ಕೆಳಗೆ ನುಗ್ಗುತ್ತಿದ್ದಾರೆ. ಕಳ್ಳ ದಂಧೆಕೋರರರ ಸ್ಮಾರ್ಟ್‌ನೆಸ್‌ಗೆ ಮತ್ತೊಂದು ಉದಾಹರಣೆ ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ. ಮಧ್ಯಪ್ರದೇಶದಲ್ಲಿ ಅಕ್ರಮ ಸರಾಯಿ ಮಾರಾಟಗಾರರು ಹಾಗೂ ಕಳ್ಳಭಟ್ಟಿ ದಂಧೆ ವ್ಯಾಪಕವಾಗಿ ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಅಬಕಾರಿ ಇಲಾಖೆ ಯೋಜನೆ ರೂಪಿಸಿ ಇಂತಹ ಕಳ್ಳಭಟ್ಟಿ ದಂಧೆ ನಡೆಯುವ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಲ್ಲಿನ ತಂತ್ರಜ್ಞಾನ ಆಧರಿತ ವ್ಯವಸ್ಥೆಗೆ ಅಬಕಾರಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದರು. ಅಲ್ಲಿದ್ದ ಬೋರ್‌ವೆಲ್ ಒಂದನ್ನು ಕೈಯಲ್ಲಿ ಜಗ್ಗಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ನೀರಿನ ಬದಲು ಅಲ್ಲಿ ಹೆಂಡವೇ ಬೋರ್‌ವೆಲ್ ಮೂಲಕ ಹೊರ ಬಂದಿದೆ. 

ಮಧ್ಯಪ್ರದೇಶದ (Madhya Pradesh) ಗುನಾ (Guna) ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅಕ್ರಮ ಸರಾಯಿ ದಂಧೆಕೋರರ ಸ್ಮಾರ್ಟ್‌ನೆಸ್‌ಗೆ ಅಬಕಾರಿ ಪೊಲೀಸರೇ (excise Police) ಬೆಚ್ಚಿ ಬಿದ್ದಿದ್ದಾರೆ. ಅಕ್ರಮ ಮದ್ಯ ಕಳ್ಳಭಟ್ಟಿ ತಯಾರಿ ಹಿನ್ನೆಲೆ ಅಬಕಾರಿ ಪೊಲೀಸರು ಮಧ್ಯಪ್ರದೇಶದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಸೋಮವಾರ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಸ್ಥಳದಲ್ಲಿದ್ದ ಹ್ಯಾಂಡ್‌ಪಂಪ್ (ಬೋರ್ವೆಲ್) ಚಾಲನೆ ಮಾಡಿದಾಗ ಅದರಿಂದ ಮದ್ಯ ಹೊರ ಬಂದಿದೆ.

ಭೂಮಿಯಿಂದ ಮದ್ಯ ಹೊರ ಬಂದಿದ್ದು ಹೇಗೆ?

ಭೂಮಿಯ ಅಡಿ 7 ಅಡಿಗಳಷ್ಟು ಕೆಳಗೆ ಹೊಂಡ ತೋಡಿದ ಈ ಅಕ್ರಮ ಸರಾಯಿ ದಂಧೆಕೋರರು ಅಲ್ಲಿ ದೊಡ್ಡ ದೊಡ್ಡ ಪ್ಲಾಸ್ಟಿಕ್ ಬ್ಯಾರಲ್‌ಗಳಲ್ಲಿ (Plastic Drum) ಮದ್ಯ ತುಂಬಿಸಿ ಅದಕ್ಕೆ ಮೇಲ್ಭಾಗದಿಂದ ಪೈಪ್ ಸಂಪರ್ಕ ನೀಡಿ ಮಣ್ಣು ಮುಚ್ಚಿದ್ದರು. ಮೇಲಿದ್ದ ಹ್ಯಾಂಡ್ ಪಂಪ್ ಅಥವಾ ಬೋರ್‌ವೆಲ್‌ನ್ನು ಜಗ್ಗಿದರೆ ಕೆಳಗಿನಿಂದ ಮದ್ಯ ಮೇಲೆ ಬರುತ್ತದೆ. ಅದನ್ನು ನಂತರ ಬಾಟಲಿಗೆ ತುಂಬಿಸಿ ಬೇಕಾದವರಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಅಪಾರ ಪ್ರಮಾಣ ಮದ್ಯ ಹಾಗೂ ಮದ್ಯ ತಯಾರಿಗಾಗಿ ಇರಿಸಿದ್ದ ಕಚ್ಚಾ ವಸ್ತುಗಳನ್ನು ನಾಶಪಡಿಸಿದ್ದಾರೆ. ಗುನದ ಚಂಚೋಡ ಹಾಗೂ ರಾಘೋಗಢದಲ್ಲಿ ಈ ಅಬಕಾರಿ ದಾಳಿ ನಡೆದಿದೆ. ಈ ಭೂಮಿಯೊಳಗಿನ ಮದ್ಯದ ಮನೆಯ ಪ್ರಮುಖ ಆರೋಪಿ ಪೊಲೀಸ್ ದಾಳಿ ವೇಳೆ ಪರಾರಿಯಾಗಿದ್ದಾನೆ. ಎಂಟು ಆರೋಪಿಗಳನ್ನು ಗುರುತಿಸಲಾಗಿದ್ದು ಎರಡು ಠಾಣೆಗಳಲ್ಲಿ ಈ ಬಗ್ಗೆ ಎಂಟು ಪ್ರಕರಣ ದಾಖಲಾಗಿದೆ.

Chikkaballapur: ಮತ್ತೆ ಹೆಚ್ಚಿದ ಅಕ್ರಮ ಮದ್ಯದ ಹೊಳೆ: 123 ಆರೋಪಿಗಳ ದಸ್ತಗಿರಿ

ಮದ್ಯ ತಯಾರಿಕೆಯೇ ಪ್ರಮುಖ ಕೆಲಸ

ದಾಳಿಗೊಳಗಾದ ಈ ಎರಡು ಗ್ರಾಮಗಳಾದ ಗುನದ ಚಂಚೋಡ (Chanchoda) ಹಾಗೂ ರಾಘೋಗಢದಲ್ಲಿ (Raghogada)ಕಂಜರ ಎಂಬ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಹಳ್ಳಿಯ ಪ್ರತಿಯೊಂದು ಕುಟುಂಬವೂ ಮದ್ಯ ತಯಾರಿಕೆಯಲ್ಲಿ ತೊಡಗಿದೆ. ಇಲ್ಲಿನ ವಿವಿಧ ಸ್ಥಳಗಳಲ್ಲಿ ಹೀಗೆ ಮದ್ಯ ತಯಾರಿಸಲು ಬೇಕಾದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಡುವ ಗೂಡುಗಳಿವೆ. ಅಲ್ಲದೇ ಈ ಎರಡು ಗ್ರಾಮಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವುದರಿಂದ ಅಕ್ರಮ ಮದ್ಯ ತಯಾರಿಕೆಗೆ ಹೇಳಿ ಮಾಡಿಸಿದಂತಿದೆ.

ಮತ್ತೆ ಹೆಚ್ಚಿದ ಅಕ್ರಮ ಮದ್ಯದ ಹೊಳೆ!

ಪೊಲೀಸರು ದಾಳಿ ನಡೆಸಿ ಭೂಮಿಯ ಕೆಳಭಾಗದಲ್ಲಿ ಅಗೆಯಲು ಶುರು ಮಾಡಿದಾಗ ದೊಡ್ಡ ದೊಡ್ಡ ಟ್ಯಾಂಕ್‌ಗಳು ಬ್ಯಾರೆಲ್‌ಗಳು ಅವುಗಳ ತುಂಬಾ ಶರಾಬು ಕಾಣಿಸಿದೆ. ಭಾನ್‌ಪುರದಲ್ಲಿ ಚಂಚೋಡಾ ಎಸ್‌ಡಿಒಪಿ ದಿವ್ಯಾ ರಾಜವತ್ ಮತ್ತು ಸಕೊನ್ಯಾದಲ್ಲಿ ರಾಘೋಗಢ ಎಸ್‌ಡಿಒಪಿ ಜಿಡಿ ಶರ್ಮಾ ನೇತೃತ್ವದಲ್ಲಿ ತಂಡವು ಜಂಟಿಯಾಗಿ ಈ ದಾಳಿ ನಡೆಸಿದೆ. ಪೊಲೀಸರ ದಾಳಿ ವೇಳೆ ಆರೋಪಿಗಳೆಲ್ಲಾ ಓಡಿ ಪರಾರಿಯಾಗಿದ್ದಾರೆ. ಆದರೆ ಪೊಲೀಸರು ನೆಲವನ್ನು ಅಗೆಯಲು ಶುರು ಮಾಡಿದಾಗ ಒಂದಾದ ಮೇಲೊಂದರಂತೆ ಬ್ಯಾರೆಲ್‌ಗಳು ಕಾಣಿಸಿವೆ.

Latest Videos
Follow Us:
Download App:
  • android
  • ios