ರಾಷ್ಟ್ರಗೀತೆ ಗಾಯನದ ವೇಳೆ ಎದ್ದು ನಿಲ್ಲದೆ ಇರುವುದು ಅಪರಾಧವಲ್ಲ ಅಗೌರವ ತೋರಿದಂತೆ ಮಾತ್ರ ಎಂದ ಜಮ್ಮು-ಕಾಶ್ಮೀರ ಹೈಕೋರ್ಟ್‌

ಶ್ರೀನಗರ (ಜು.11): ರಾಷ್ಟ್ರಗೀತೆ ಗಾಯನದ ವೇಳೆ ಎದ್ದು ನಿಲ್ಲದೆ ಇರುವುದು ಅಪರಾಧವಲ್ಲ. ಅಗೌರವ ತೋರಿದಂತೆ ಮಾತ್ರ ಎಂದು ಜಮ್ಮು-ಕಾಶ್ಮೀರ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ರಾಷ್ಟ್ರಗೀತೆ ಗಾಯನದ ವೇಳೆ ಎದ್ದು ನಿಲ್ಲಲಿಲ್ಲ ಎಂದು ತೌಸೀಫ್‌ ಎಂಬುವರ ವಿರುದ್ಧ ‘ರಾಷ್ಟ್ರೀಯ ಗೌರವ ಕಾಯ್ದೆ-1971’ರ ಸೆಕ್ಷನ್‌ 3ರ ಅನ್ವಯ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ, ಅಪರಾಧ ಸಾಬೀತಾದರೆ 3 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಇದನ್ನು ಪ್ರಶ್ನಿಸಿ ತೌಸೀಫ್‌ ಅರ್ಜಿ ಸಲ್ಲಿಸಿದ್ದರು.

ರಾಷ್ಟ್ರಗೀತೆ ವೇಳೆ ಕಾಲಿನ ಗಾಯ ಮರೆತು ಎದ್ದು ನಿಂತ ಮಮತಾ!

ಅರ್ಜಿಯ ಅಂಶಗಳಿಗೆ ಶನಿವಾರ ಮನ್ನಣೆ ನೀಡಿರುವ ಹೈಕೋರ್ಟ್‌, ‘ಇನ್ನೊಬ್ಬರು ಹಾಡುವಾಗ ಎದ್ದು ನಿಲ್ಲದೇ ಇರುವುದು ಅಥವಾ ಸಹ ಗಾಯನ ಮಾಡದೇ ಇರುವುದು ಸಂವಿಧಾನದ 4ಎ ಪರಿಚ್ಛೇದದ ಅನ್ವಯ ಅಗೌರವ ತೋರಿದಂತೆ. ಆದರೆ ಇದು ಸೆಕ್ಷನ್‌-3ರ ಪ್ರಕಾರ ಅಪರಾಧ ಎನ್ನಿಸಿಕೊಳ್ಳದು. ಇನ್ನೊಬ್ಬರು ಹಾಡುವಾಗ ಅಡ್ಡಿ ಮಾಡಿದರೆ ಅಥವಾ ತಡೆದರೆ ಮಾತ್ರ ಅದು ಅಪರಾಧ ಎನ್ನಿಸಿಕೊಳ್ಳುತ್ತದೆ’ ಎಂದು ಹೇಳಿತು.