Asianet Suvarna News Asianet Suvarna News

ಗಂಡ ಮೋದಿ ಘೋಷಣೆ ಕೂಗಿದರೆ ಊಟ ಕೊಡಬೇಡಿ, ಮಹಿಳಾ ಮತದಾರರಿಗೆ ಕೇಜ್ರಿವಾಲ್ ಮನವಿ!

ಆಪ್ ನಾಯಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲೋಕಸಭಾ ಚುನಾವಣಾ ಪ್ರಚಾರ ಭಾಷಣ ಇದೀಗ ವೈರಲ್ ಆಗಿದೆ. ಗಂಡ ಮೋದಿ, ಮೋದಿ ಎಂದು ಘೋಷಣೆ ಕೂಗಿದರೆ, ಊಟ ಕೊಡಬೇಡಿ ಎಂದು ಕೇಜ್ರಿವಾಲ್ ಮಹಿಳರಲ್ಲಿ ಮನವಿ ಮಾಡಿದ್ದಾರೆ. 
 

Not Server Food to your husband if they chant Modi slogan CM Arvind Kerjriwal urge Womens in Delhi ckm
Author
First Published Mar 10, 2024, 7:07 PM IST

ನವದೆಹಲಿ(ಮಾ.10) ಲೋಕಸಭಾ ಚುನಾವಣಾ ಪ್ರಚಾರಗಳು ಆರಂಭಗೊಂಡಿದೆ. ನಾಯಕರ ಕೆಲ ಹೇಳಿಕೆ ಆಕ್ರೋಕ್ಕೆ ಗುರಿಯಾಗುತ್ತಿದ್ದರೆ, ಕೆಲ ಮಾತುಗಳು ವಾಕ್ಸಮರಕ್ಕೆ ನಾಂದಿ ಹಾಡಿದೆ. ಮತ್ತೆ ಕೆಲ ಹೇಳಿಕೆಗೆ ನಗೆಪಾಟಲೀಗೀಡಾಗಿದೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹಿಳಾ ಮತದಾರರಲ್ಲಿ ಮಾಡಿದ ಮನವಿಗೆ ಪರ ವಿರೋಧಗಳು ವ್ಯಕ್ತವಾಗಿದೆ. ಹಲವು ಪುರುಷರು ಮೋದಿ, ಮೋದಿ ಘೋಷಣೆ ಕೂಗುತ್ತಿದ್ದಾರೆ. ಹೀಗೆ ಯಾರಾದರೂ ಕೂಗಿದರೆ ಅವರಿಗೆ ಊಟ ಕೊಡಬೇಡಿ ಎಂದು ಮಹಿಳಾ ಮತದಾರರಲ್ಲಿ ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಆಯೋಜಿಸಿದ ಮಹಿಳಾ ಸಮ್ಮಾನ್ ಸಮಾರಂಭದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಪತಿ ಮೋದಿ ಘೋಷಣೆ ಕೂಗಿದರೆ ಅವರಿಗೆ ಊಟ, ತಿಂಡಿ ಏನೂ ಕೊಡಬೇಡಿ. ಈಗಲೂ ಹಲವರು ಪುರುಷರು ಮೋದಿ ಮೋದಿ ಘೋಷಣೆ ಕೂಗುತ್ತಿದ್ದಾರೆ.ಅವರನ್ನು ಸರಿದಾರಿಗೆ ತರಲು ನೀವು ಪ್ರಯತ್ನಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಜೂನ್ 15ರೊಳಗೆ ಪ್ರಧಾನ ಕಚೇರಿ ತೊರೆಯಲು ಆಮ್ ಆದ್ಮಿಗೆ ಸುಪ್ರೀಂ ಕೋರ್ಟ್ ವಾರ್ನಿಂಗ್!

ಮಹಿಳೆಯರೇ  ಯಾರಾದರೂ ನಿಮ್ಮ ಕುಟುಂಬಸ್ಥರು, ಆಪ್ತರು ಬಿಜೆಪಿ ಬೆಂಬಲಿಸುತ್ತಿದ್ದರೆ, ಅವರ ಬಳಿ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಕೇವಲ ನಿಮ್ಮ ಅಣ್ಣ ಅರವಿಂದ್ ಕೇಜ್ರಿವಾಲ್ ಮಾತ್ರ ನಿಮ್ಮ ಜೊತೆ ನಿಲ್ಲುತ್ತಾರೆ. ನಿಮ್ಮ ಕುಟುಂಬದ ನೆರವಿಗೆ ಯೋಜನೆ ಮೂಲಕ ನೆರವಾಗುತ್ತಾರೆ. ಇನ್ಯಾರು ನಿಮ್ಮ ಜೊತೆ ಇರುವುದಿಲ್ಲ ಎಂದು ವಿವರಿಸಬೇಕು. ಇದರಿಂದ ಬಿಜೆಪಿ ಬೆಂಬಲಿಸುವವರೂ ಕೂಡ ಆಪ್ ಬೆಂಬಲಿಸುತ್ತಾರೆ ಎಂದು ಮಹಿಳೆಯರಿಗೆ ಹೊಸ ಟಾಸ್ಕ್ ನೀಡಿದ್ದಾರೆ.

ಮಹಿಳೆಯರು ಮಾತುಗಳು ಹೆಚ್ಚು ಪರಿಣಾಮಕಾರಿಯಾಗಲಿದೆ. ನೀವು ಬಿಜೆಪಿ ಬೆಂಬಲಿಸುವವರನ್ನು ಆಪ್ ಬೆಂಬಲಿಸುವಂತೆ ಮಾಡಬೇಕು ಎಂದು ಪರೋಕ್ಷ ಟಾಸ್ಕ್ ನೀಡಿದ್ದಾರೆ. ಬಿಜೆಪಿ ಮಹಿಳೆಯರಿಗೆ ಏನೂ ಮಾಡಿಲ್ಲ. ದೆಹಲಿ ಜನತೆಗೂ ಏನೂ ಮಾಡಿಲ್ಲ. ನಾವು ವಿದ್ಯುತ್ ಉಚಿತವಾಗಿ ನೀಡಿದ್ದೇವೆ. ಬಸ್ ಫ್ರಿ ಕೊಟ್ಟಿದ್ದೇವೆ. ಇನ್ನು ಮಹಿಳಿಯರಿಗೆ 1,000 ರೂಪಾಯಿ ಪ್ರತಿ ತಿಂಗಳು ನೀಡುತ್ತಿದ್ದೇವೆ. ಇದನ್ನು ಬಿಜೆಪಿ ಮಾಡಿಲ್ಲ. ಅವರಿಗೆ ಈ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಧ್ರುವ್ ರಾಥಿ ವಿಡಿಯೋ ಹಂಚಿ ತಪ್ಪುಮಾಡಿದ್ದೇನೆ, ಸುಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್ ತಪ್ಪೊಪ್ಪಿಗೆ!

ಆಪ್ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುತ್ತಿದೆ. ಇದು ದೇಶದ ಅತೀ ದೊಡ್ಡ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಇಂತಹ ಯೋಜನೆ ಕೇವಲ ನಿಮ್ಮ ಅಣ್ಣ ಅರವಿಂದ್ ಕೇಜ್ರಿವಾಲ್ ಮಾತ್ರ ನೀಡಲು ಸಾಧ್ಯ ಎಂದಿದ್ದಾರೆ.

Follow Us:
Download App:
  • android
  • ios