ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದ ಉತ್ತರ ಭಾರತ ಮೂಲದ ವ್ಯಕ್ತಿ ವೀಡಿಯೋ ವೈರಲ್ ಆದ ನಂತರ ಕ್ಷಮೆ ಕೇಳಿದ್ದಾನೆ. ಈತ ಬೆಂಗಳೂರಿನಲ್ಲಿ 9 ವರ್ಷಗಳಿಂದ ವಾಸವಾಗಿದ್ದು, ನಗರದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಹಿಂದಿ ಮಾತನಾಡುವಂತೆ ಆಟೋ ಚಾಲನ ಬಳಿ ವಾಗ್ವಾದ ನಡೆಸಿ ಧಮ್ಕಿ ಹಾಕಿದ್ದ ಉತ್ತರ ಭಾರತ ಮೂಲದ ವ್ಯಕ್ತಿ ಈಗ ತನ್ನ ಈ ವಾಗ್ವಾದದ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಕೇಳಿದ್ದಾನೆ. ಈತ ಆಟೋ ಚಾಲಕನಿಗೆ ಬೆಂಗಳೂರಿನಲ್ಲಿ ಇರಬೇಕಾದರೆ ಹಿಂದಿ ಮಾತನಾಡುವಂತೆ ಧಮ್ಕಿ ಹಾಕಿದ್ದ ಈತನ ದುರ್ವಾರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿಗೆ ಬಂದು ಆತ ಕನ್ನಡ ಮಾತನಾಡಬೇಕಿತ್ತು. ಆದರೆ ಇಲ್ಲಿನ ಸ್ಥಳೀಯರಿಗೆ ತನ್ನ ಭಾಷೆ ಕಲಿಯುವಂತೆ ಧಮ್ಕಿ ಹಾಕುತ್ತಿದ್ದಾನೆ ಎಂದು ಜನ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಈಗ ಆತ ಕ್ಷಮೆ ಕೇಳಿದ್ದಾನೆ ಆ ವೀಡಿಯೋ ಈಗ ವೈರಲ್ ಆಗುತ್ತಿದೆ.

ಕನ್ನಡದಲ್ಲೇ ಕ್ಷಮೆ ಕೇಳಿದ ಉತ್ತರ ಭಾರತೀಯ
ಆಟೋ ಚಾಲಕನಿಗೆ ಹಿಂದಿ ಕಲಿಯುವಂತೆ ಧಮ್ಕಿ ಹಾಕಿದ್ದ ಈ ಯುವಕ ಈಗ ಕನ್ನಡದಲ್ಲೇ ಕ್ಷಮೆ ಕೇಳಿದ್ದಾನೆ. ನಾನು ಎಲ್ಲಾ ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ. ಕಳೆದ 9 ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ಇದ್ದೇನೆ. ಈ ನಗರದೊಂದಿಗೆ ನನಗೆ ಆಳವಾದ ಭಾವನಾತ್ಮಕ ಬಂಧ ಇದೆ. ಬೆಂಗಳೂರು ನನಗೆ ಜೀವನ ನೀಡಿದೆ. ನಾನು ಅದನ್ನು ಗೌರವಿಸುತ್ತೇನೆ . ನಾನು ಈ ನಗರದಿಂದಲೇ ಸಂಪಾದನೆ ಮಾಡುತ್ತಿದ್ದೇನೆ. ನಾನು ಈ ನಗರವನ್ನು ತುಂಬಾ ಇಷ್ಟಪಡುತ್ತಿದ್ದೇನೆ. ನಾನು ತಿಳಿಯದೇ ಮಾಡಿದ ತಪ್ಪಿನಿಂದ ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದಲ್ಲಿ ದಯವಿಟ್ಟು ಕ್ಷಮಿಸಿ ಎಂದು ಆತ ಕನ್ನಡದಲ್ಲಿ ಕ್ಷಮೆ ಯಾಚಿಸಿದ್ದಾನೆ ಈತನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇದನ್ನೂ ಓದಿ: ಹಿಂದಿವಾಲಾ ಜೊತೆ ರಾಜ್ಯನೇ ಬಿಟ್ಟು ಹೋಗ್ತಾರಾ ವೈಷ್ಣವಿ? ಸೀರಿಯಲ್​ ಮುಂದಿನ ಸೀತೆ ಯಾರು?

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇನ್ನೂ ಆತನನ್ನು ಆತನಷ್ಟಕ್ಕೆ ಬಿಟ್ಟು ಬಿಡಿ,. ಆತ ತಪ್ಪು ಮಾಡಿದ್ದಾನೆ. ಆತನಿಗೆ ಅದರ ಅರಿವು ಆಗಿದೆ. ಪ್ರತಿಯೊಬ್ಬರೂ ಒಂದು ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿ ಜೀವನ ಕಂಡುಕೊಂಡಾಗ ಅಲ್ಲಿನ ಪ್ರಾದೇಶಿಕ ಭಾಷೆ ಹಾಗೂ ಸಂಸ್ಖೃತಿಯನ್ನು ಗೌರವಿಸುವುದಕ್ಕೆ ಪ್ರಯತ್ನಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಜನರು ಭಾಷೆಯಲ್ಲಿ ವಿವಾದ ಹುಡುಕುವುದಕ್ಕಿಂತ ಅದನ್ನು ಸಂವಹನ ಮಾಡುವುದಕ್ಕೆ ಬಳಸಬೇಕು. ಇಬ್ಬರಿಗೂ ಒಂದೇ ಭಾಷೆ ಗೊತ್ತಿಲ್ಲದೇ ಹೋದರೆ ಇಂಗ್ಲೀಷ್‌ನಲ್ಲಿ ಮಾತನಾಡಬಹುದಲ್ಲವೇ, ಇಂಗ್ಲೀಷ್‌ ಸಂವಹನ ನಡೆಸುವುದಕ್ಕೆ ಸುಲಭವಾದ ಮಾಧ್ಯಮವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ಬಹುಃ ಉತ್ತರ ಭಾರತೀಯನಾಗಿರಬಹುದು, ಆತ ಈ ವೀಡಿಯೋ ನೋಡಿ ಉರಿದು ಬಿದ್ದಿದ್ದು, ನಿಮ್ಮ ರಾಜ್ಯದ ಜನರಿಗೂ ಹೀಗೆ ಆಗುವವರೆಗೆ ಕಾಯಿರಿ ಆಗ ಇದು ನಿಮಗೆ ಹಾಸ್ಯ ಎನಿಸುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. 

ಇದನ್ನೂ ಓದಿ: ಬೆಂಗಳೂರಲ್ಲಿ ಇರ್ಬೇಕಂದ್ರೆ ಹಿಂದಿ ಕಲಿ: ಆಟೋ ಚಾಲಕನಿಗೆ ಉತ್ತರ ಭಾರತೀಯನ ಧಮ್ಕಿ

ಹಿಂದಿ ಮಾತಾನಾಡುವಂತೆ ಧಮ್ಕಿ ಹಾಕಿದ ವೀಡಿಯೋದಲ್ಲೇನಿದೆ?
ಈ ವಿಡಿಯೋದಲ್ಲಿ ಆಟೋ ಚಾಲಕನೊಡನೆ ಯುವಕ ಸಂಭಾಷನೆ ನಡೆಸಿದ್ದು, ಬೆಂಗಳೂರಿನಲ್ಲಿ ಇರಬೇಕಾದರೆ ಹಿಂದಿ ಕಲಿಯುವಂತೆ ಧಮ್ಕಿ ಹಾಕಿದ್ದಾನೆ. ಅದಕ್ಕೆ ಪ್ರತಿಕ್ರಿಯಿಸಿದ ಆಟೋ ಚಾಲಕ ಬೆಂಗಳೂರಿಗೆ ಬಂದಿರುವುದು ನೀನು, ನೀನು ಬೇಕಿದ್ದರೆ ಕನ್ನಡ ಕಲಿ ಕನ್ನಡದಲ್ಲಿ ಮಾತನಾಡು, ನಾನು ಹಿಂದಿಯಲ್ಲಿ ಮಾತನಾಡುವುದಿಲ್ಲ ಎಂದು ಮರುತ್ತರಿಸಿದ್ದಾನೆ. ಇದು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿಗೆ ಬಂದು ಇಲ್ಲಿನ ಭಾಷೆ ಕಲಿಯದೆ ಇಲ್ಲಿನ ಸ್ಥಳೀಯರಿಗೆ ಬೆದರಿಕೆ ಹಾಕುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

Scroll to load tweet…