Asianet Suvarna News Asianet Suvarna News

ಚಳಿಗೆ ಥರಗುಟ್ಟಿದ ಉತ್ತರ ಭಾರತ: ದೆಹಲಿಯಲ್ಲಿ 3 ಡಿಗ್ರಿ ಉಷ್ಣಾಂಶ

ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಜನರು ಮೈಕೊರೆಯುವ ಚಳಿಗೆ ತತ್ತರಿಸಿ ಹೋಗಿದ್ದಾರೆ. ದೆಹಲಿಯಲ್ಲಿ ಜನವರಿ ತಿಂಗಳಲ್ಲೇ 2 ವರ್ಷದ ಕನಿಷ್ಠ ತಾಪಮಾನ ದಾಖಲಾಗಿದೆ.

North India hit by cold, 3 degree temperature in Delhi akb
Author
First Published Jan 6, 2023, 11:40 AM IST

ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಜನರು ಮೈಕೊರೆಯುವ ಚಳಿಗೆ ತತ್ತರಿಸಿ ಹೋಗಿದ್ದಾರೆ. ದೆಹಲಿಯಲ್ಲಿ ಜನವರಿ ತಿಂಗಳಲ್ಲೇ 2 ವರ್ಷದ ಕನಿಷ್ಠ ತಾಪಮಾನ ದಾಖಲಾಗಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಚಳಿತಾಳಲಾರದೇ ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾನೆ.  ದೆಹಲಿಯಲ್ಲಿ ಉಷ್ಣಾಂಶ 3 ಡಿಗ್ರಿ ತಾಪಮಾನಕ್ಕೆ ಕುಸಿದಿದೆ. ಇದು ಜನವರಿ ತಿಂಗಳಿನಲ್ಲೇ 2 ವರ್ಷದ ಕನಿಷ್ಠವಾಗಿದೆ. ಬಹಳಷ್ಟು ಜನರು ಮನೆಯಿಂದ ಹೊರಗೇ ಬಾರದೇ ಹೀಟರ್‌ಗಳ ಮೊರೆ ಹೋಗಿದ್ದಾರೆ. ಅಲ್ಲದೇ ದೆಹಲಿಯಲ್ಲಿ ತೀವ್ರ ಮಂಜು ಮುಸುಕಿದ್ದು, ಗೋಚರತೆ 0-5 ಮೀ.ಗೆ ಕುಸಿದಿದೆ. ಹಾಗಾಗಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯವಾಗಿದೆ. ನಿರಾಶ್ರಿತರಿಗೆ ಟೆಂಟ್‌ ತೆರೆಯಲಾಗಿದೆ.

ಪಂಜಾಬ್‌ ಮತ್ತು ಹರ್ಯಾಣದಲ್ಲೂ ಸಹ ಉಷ್ಣಾಂಶ 2.2 ಡಿಗ್ರಿ ಸೆ.ವರೆಗೆ ಕುಸಿದಿದೆ. ಹಿಮಾಚಲ ಹಾಗೂ ಉತ್ತರಾಖಂಡದಲ್ಲಿ ತಾಪ 5 ಡಿಗ್ರಿಗಿಂತ ಕಡಿಮೆ ಇದೆ. ಜಮ್ಮು ಕಾಶ್ಮೀರದಲ್ಲಿ ಉಷ್ಣಾಂಶ ಮೈನಸ್‌ಗೆ ತಲುಪಿದೆ.  ಶ್ರೀನಗರದಲ್ಲಿ -6.4 ಡಿಗ್ರಿ ಸೆ., ಕುಪ್ವಾರದಲ್ಲಿ -6.2 ಡಿಗ್ರಿ ಸೆ., ಪಹಲ್ಗಾಂನಲ್ಲಿ - 9.2 ಡಿಗ್ರಿ ಸೆ. ಉಷ್ಣಾಂಶ ದಾಖಲಾಗಿದೆ. ಈ ಶೀತಹೆವೆ ಇನ್ನೂ ಎರಡು ಮೂರು ದಿನ ಮುಂದುವರೆಯುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜಸ್ಥಾನದಲ್ಲೂ ಸಹ ಹಲವು ಕಡೆ ಉಷ್ಣಾಂಶ -1.8 ಡಿಗ್ರಿ ಸೆ.ಗೆ ಕುಸಿದಿದೆ. ಚುರುವಿನಲ್ಲಿ ಅತಿ ಕಡಿಮೆ -1.5 ಡಿಗ್ರಿ ಸೆ.ಗೆ ಇಳಿಕೆಯಾಗಿದೆ.

ಇಂದೋರ್‌ನಲ್ಲಿ ಒಬ್ಬ ಬಲಿ:
ರಸ್ತೆಬದಿಯಲ್ಲಿ ಮಲಗುತ್ತಿದ್ದ ನಿರಾಶ್ರಿತ ಪೇಂಟರ್‌ ಒಬ್ಬ, ಚಳಿ ತಾಳಲಾರದೇ ಮೃತಪಟ್ಟ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

Follow Us:
Download App:
  • android
  • ios