ಕೇದಾರನಾಥಕ್ಕೆ ಭೇಟಿ ನೀಡಿದ ನವಾಬ : ಕೇಸು ದಾಖಲಿಸಿದ ಅರ್ಚಕರು
- ಶ್ವಾನವನ್ನು ಕೇದರನಾಥಕ್ಕೆ ಕರೆದೊಯ್ದ ಅಣ್ಣ
- ಅರ್ಚಕರಿಂದ ಕೇಸು ದಾಖಲು
- ದೇಗುಲಕ್ಕೆ ಭೇಟಿ ನೀಡಿ ಶ್ವಾನ ಕೈ ಮಗಿಯುತ್ತಿರುವ ವಿಡಿಯೋ ವೈರಲ್
ಡೆಹ್ರಾಡೂನ್: ಕೇದರಾನಾಥಕ್ಕೆ ಭೇಟಿ ನೀಡಿದ ನವಾಬ, ಇದ್ಯಾವ ನವಾಬ ನವಾಬನ ಕಾಲ ಅದಾಗಲೇ ಮುಗಿದಿಹುದಲ್ಲ ಅಂತ ಅಚ್ಚರಿಯಾದ್ರಾ. ಆದರೆ ನಾವು ಇಲ್ಲಿ ತೋರಿಸ್ತಿರುವ ನವಾಬ ಮಹಾರಾಜ ಅಲ್ಲ. ಶ್ವಾನ ಹೌದು ನವಾಬ ಹೆಸರಿನ ಶ್ವಾನವೊಂದು ಹಿಂದೂ ಪವಿತ್ರ ಕ್ಷೇತ್ರ ಕೇದರನಾಥಕ್ಕೆ ಭೇಟಿ ನೀಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸಿದೆ. ಆದರೆ ಈ ನವಾಬನನ್ನು ಅಲ್ಲಿಗೆ ಕರೆದೊಯ್ದ ಆತನ ಮಾಲೀಕ ಮಾತ್ರ ಸಂಕಷ್ಟಕ್ಕೀಡಾಗಿದ್ದಾರೆ.
ಶ್ವಾನ ಮನುಷ್ಯರ ಆಪ್ತ ಮಿತ್ರ. ನಾಯಿ ಸಾಕುವ ಅನೇಕರು ಅವುಗಳನ್ನು ಬಿಟ್ಟಿರಲಾರದಷ್ಟು ಅವುಗಳೊಂದಿಗೆ ಆಪ್ತತೆ ಹೊಂದಿರುತ್ತಾರೆ. ಮಾಲೀಕ ಏನೇ ಮಾಡಿದರು ಮತ್ತೆ ಆತನ ಹಿಂದೆಯೇ ಬರುವ ಶ್ವಾನದ ಸ್ವಾಮಿನಿಷ್ಠೆ ಅನೇಕ ಬಾರಿ ಸಾಬೀತಾಗಿದೆ. ಈಗ ಹೀಗೆಯೇ ತನ್ನ ಪ್ರೀತಿಯ ಶ್ವಾನವನ್ನು ತಾನು ಹೋದಲ್ಲೆಲ್ಲಾ ಕರೆದೊಯ್ಯುತ್ತಿದ್ದ ಯುವಕನೋರ್ವನಿಗೆ ಸಂಕಷ್ಟ ಎದುರಾಗಿದೆ.
ಯುವಕನೋರ್ವ ತನ್ನ ಸಾಕು ನಾಯಿಯನ್ನು ಕೇದಾರನಾಥ ದೇಗುಲಕ್ಕೆ ಕರೆದೊಯ್ದಿದ್ದು, ಈತನ ವಿರುದ್ಧ ಆರ್ಚಕರು ಕೇಸ್ ದಾಖಲಿಸಿದ್ದಾರೆ. ವ್ಲಾಗರ್ ಆಗಿರುವ ನೋಯ್ಡಾದ ನಿವಾಸಿ 33 ವರ್ಷದ ವಿಕಾಶ್ ತ್ಯಾಗಿ ಎಂಬವರೇ ಹೀಗೆ ಶ್ವಾನವನ್ನು ಕರೆದೊಯ್ದು ಸಂಕಷ್ಟಕ್ಕೀಡಾದವರು. ದಿ ಫೆಡರಲ್ ವರದಿಯ ಪ್ರಕಾರ ವಿಕಾಶ್ ತ್ಯಾಗಿ ಅವರು ತಮ್ಮ ಚಾರ್ ಧಾಮ್ ಯಾತ್ರೆಯ ಸಮಯದಲ್ಲಿ ತನ್ನ ನವಾಬ್ ಎಂಬ ಹೆಸರಿನ ನಾಲ್ಕೂವರೆ ವರ್ಷದ ಮುದ್ದಿನ ಹಸ್ಕಿಯನ್ನು ಪವಿತ್ರ ದೇಗುಲಕ್ಕೆ ಕರೆದೊಯ್ದಿದ್ದರು. ದೇವಸ್ಥಾನದಲ್ಲಿ ಕೈ ಮಗಿದು ಪ್ರಾರ್ಥನೆ ಸಲ್ಲಿಸಿದ ಅವರು ಶ್ವಾನವನ್ನು ಎತ್ತಿಕೊಂಡು ಅದೂ ಕೈ ಮಗಿಯುವಂತೆ ಮಾಡಿದ್ದಾರೆ. ಅದರ ಎರಡು ಕೈಗಳನ್ನು ಎತ್ತಿ ದೇಗುಲದ ಮುಂದಿರುವ ನಂದಿ ವಿಗ್ರಹದ ಮುಂದೆ ಅದು ಪ್ರಾರ್ಥನೆ ಮಾಡುವಂತೆ ಮಾಡುತ್ತಾರೆ. ಅಲ್ಲದೇ ಅಲ್ಲಿದ್ದವರೊಬ್ಬರು ಅದರ ಹಣೆಗೂ ತಿಲಕವಿಡುತ್ತಾರೆ.
ಆಲೂಗಡ್ಡೆ ಬಿತ್ತನೆಗೆ ಸಹಾಯ ಮಾಡುವ ಶ್ವಾನ : ವಿಡಿಯೋ ವೈರಲ್
ಆದರೆ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ. ಈ ನವಾಬ್ ಹೆಸರಿನ ಶ್ವಾನ huskyindia0 ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, 74 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ನವಾಬ ಹೊಂದಿದ್ದಾನೆ. ನವಾಬನ ಕೇದರನಾಥ ಭೇಟಿಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ . ಅಲ್ಲಿ ಈ ರೀತಿ ಬರೆಯಲಾಗಿದೆ. "ಎಲ್ಲರಿಗೆ ಹಾಯ್, ನಾನು ನವಾಬ್ (ನಾಯಿ) ಮತ್ತು ನನಗೆ ಈಗ ನಾಲ್ಕೂವರೆ ವರ್ಷ. ನಾನು 4 ವರ್ಷಗಳಲ್ಲಿ ಪ್ರಯಾಣಿಸಿದಷ್ಟು, 70 ವರ್ಷ ವಯಸ್ಸಿನ ವ್ಯಕ್ತಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ನನ್ನ ಪೋಷಕರು ನನ್ನನ್ನು ಎಲ್ಲೆಡೆ ಕರೆದುಕೊಂಡು ಹೋಗುವ ಕಾರಣಕ್ಕೆ ಇದು ಸಾಧ್ಯವಾಯಿತು.
ಜಾರು ಬಂಡಿ ಆಡುವ ಶ್ವಾನ: ವಿಡಿಯೋ ವೈರಲ್
ಅದಕ್ಕಾಗಿಯೇ ನಿಮ್ಮ ಎಲ್ಲಾ ಮುದ್ದಿನ ಪೋಷಕರಿಗೆ ನಾನು ವಿನಂತಿಸುತ್ತೇನೆ. ನಿಮ್ಮ ಮುದ್ದಾದ (ಶ್ವಾನ) ಮಗುವಿಗೆ ನೀವು ಗೌರವವನ್ನು ನೀಡಿದಾಗ, ಮುಂದೆ ಇರುವ ವ್ಯಕ್ತಿಯೂ ನಿಮ್ಮ ಸಾಕುಪ್ರಾಣಿಗಳನ್ನು (ಮಗುವನ್ನು) ಗೌರವಿಸುತ್ತಾರೆ. ನನ್ನ ತಂದೆ ತಾಯಿಯರು ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ ಸಮಸ್ಯೆಗಳನ್ನು ಎದುರಿಸಿಲ್ಲ ಎಂದಲ್ಲ. ಆದರೆ ನನ್ನ ಹೆತ್ತವರು ಆ ಸಮಸ್ಯೆಯೊಂದಿಗೆ ಹೋರಾಡುತ್ತಾರೆ ಆದರೆ ಯಾವಾಗಲೂ ನನ್ನನ್ನು ಕರೆದುಕೊಂಡು ಹೋಗುತ್ತಾರೆ ಎಂದು ಬರೆದು ಶ್ವಾನದ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.