ಲಿಖಿತ ಪರೀಕ್ಷೆ ಇಲ್ಲದೆ ಭಾರತೀಯ ರೈಲ್ವೇ IRCTCಯಲ್ಲಿ ನೇಮಕಾತಿ, ತಿಂಗಳಿಗೆ 2 ಲಕ್ಷ ರೂ ವೇತನ!
ಲಿಖಿತ ಪರೀಕ್ಷೆ ಇಲ್ಲ, ತಿಂಗಳಿಗೆ 15,600 ರೂಪಾಯಿಯಿಂದ 2 ಲಕ್ಷ ರೂಪಾಯಿ ವರೆಗೆ ಸಂಬಳ. ಭಾರತೀಯ ರೈಲ್ವೇಯ IRCTC ವಿಭಾಗದಲ್ಲಿ ಎಜಿಎಂ, ಡಿಜಿಎಂ, ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಗೊಂಡಿದೆ.
ನವದೆಹಲಿ(ಅ.10) ಭಾರತೀಯ ರೈಲ್ವೇ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೋರೇಶನ್ (IRCTC)ಯ ಖಾಲಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದೆ. ನವೆಂಬರ್ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಉದ್ಯೋಗ ಹುಡುಕುತ್ತಿರುವ ಹಾಗೂ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಬಯಸುವವರಿಗೆ ಇದು ಅತ್ಯುತ್ತಮ ಅವಕಾಶ. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಸೇರಿದಂತೆ ಕೆಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿಶೇಷ ಅಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಗರಿಷ್ಠ ತಿಂಗಳ ವೇತನ 2 ಲಕ್ಷ ರೂಪಾಯಿ.
IRCTC ವಿಭಾಗದಲ್ಲಿನ ರೈಲ್ವೇ ಉದ್ಯೋಗವಕಾಶದ ವಿವರ ಇಲ್ಲಿದೆ
IRCTC ಹೊರಡಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಅರ್ಹತೆ, ವಯಸ್ಸಿನ ಮಿತಿ, ವೇತನ ಸೇರಿದಂತೆ ಎಲ್ಲಾ ಮಾಹಿತಿ ಲಭ್ಯವಿದೆ. ಸದ್ಯ ನೇಮಕಾತಿ ವಯಸ್ಸಿನ ಮಿತಿ ಗರಿಷ್ಠ 55 ವರ್ಷ. ನವೆಂಬರ್ 6, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಲಿಖಿತ ಪರೀಕ್ಷೆ ಇಲ್ಲದಿರುವ ಕಾರಣ ಸಂದರ್ಶನದ ಮೂಲಕ ಸೂಕ್ತರನ್ನು ಇಲಾಖೆ ಆಯ್ಕೆ ಮಾಡಲಿದೆ. IRCTC ಅಧಿಕೃತ ವೆಬ್‌ಸೈಟ್‌ನಲ್ಲಿ ಉದ್ಯೋಗ ನೇಮಕಾತಿ ಮಾಹಿತಿ ನೀಡಲಾಗಿದೆ. ಇಷ್ಟೇ ಅಲ್ಲ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ವಿನಂತಿಸಲಾಗಿದೆ.
ರೈಲಿನಲ್ಲಿ ವಿಶೇಷ ರಿಯಾಯಿತಿ, ಯಾರಿಗೆಲ್ಲಾ ಸಿಗಲಿದೆ ಟ್ರೈನ್ ಟಿಕೆಟ್‌ನಲ್ಲಿ ಶೇ.75ರಷ್ಟು ಡಿಸ್ಕೌಂಟ್!
IRCTC ಉದ್ಯೋಗದ ವೇತನ ವಿವರ
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗೆ ತಿಂಗಳಿಗ 15,600 ರೂಪಾಯಿಂದ ಗರಿಷ್ಠ 39,100 ರೂಪಾಯಿವರೆಗೆ ನಿಗದಿಪಡಿಸಲಾಗಿದೆ. ಇನ್ನು ಡೆಪ್ಯೂಟಿ ಜನರಲ್ ಮ್ಯಾನೇಜರ್ (ಫೈನಾನ್ಸ್) ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 70,000 ರೂಪಾಯಿಂದ 2 ಲಕ್ಷ ರೂಪಾಯಿವರೆಗೆ ಸಂಬಳ ನಿಗಧಿಪಡಿಸಲಾಗಿದೆ.
ಅರ್ಹ ಹಾಗೂ ಸೂಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರ, ವಿದ್ಯಾರ್ಹತೆ ದಾಖಲೆ ಸೇರಿಂತೆ ಇತರ ದಾಖಲೆಗಳ ಪತ್ರಗಳನ್ನು ಲಗತ್ತಿಸಿ ಆನ್‌ಲೈನ್ ಮೂಲಕ ಅಥವಾ IRCTC ಇಮೇಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ದಾಖಲೆ, ವಿವರ, ಪ್ರಮಾಣಪತ್ರಗಳ ಪರಿಶೀಲಿಸಿದ ಬಳಿಕ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ. ಸಂದರ್ಶನದ ಮೂಲಕ ಸೂಕ್ತ ಹಾಗೂ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಯಾಣ ಜೊತೆ ದರ್ಶನ ವ್ಯವಸ್ಥೆ, ರೈಲ್ವೇಯಿಂದ ಮಥುರಾ, ಹರಿದ್ವಾರ ಸೇರಿ ತೀರ್ಥ ಕ್ಷೇತ್ರ ಪ್ಯಾಕೇಜ್ !
ಕೇಂದ್ರ ಸರ್ಕಾರಿ ಸಂಸ್ಥೆಯ ಹುದ್ದೆಗೆ ಭಾರಿ ಬೇಡಿಕೆ ಇದೆ. ಈಗಾಗಲೇ IRCTC ಉದ್ಯೋಗಕ್ಕೆ ಹಲವರು ಅರ್ಜಿ ಸಲ್ಲಿಸಿದ್ದಾರೆ. ವೇತನ ಜೊತೆಗೆ ಇತರ ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳು ಸಿಗಲಿದೆ.