ಪ್ರಯಾಣ ಜೊತೆ ದರ್ಶನ ವ್ಯವಸ್ಥೆ, ರೈಲ್ವೇಯಿಂದ ಮಥುರಾ, ಹರಿದ್ವಾರ ಸೇರಿ ತೀರ್ಥ ಕ್ಷೇತ್ರ ಪ್ಯಾಕೇಜ್ !
ಮಥುರಾ, ಹರಿದ್ವಾರ, ವೈಷ್ಣೋದೇವಿ ಸೇರಿ ಉತ್ತರ ಭಾರತದ ಪವಿತ್ರ ಕ್ಷೇತ್ರಗಳಿಗೆ ಪ್ರಯಾಣ ಹಾಗೂ ದರ್ಶನಕ್ಕೆ ಇದೀಗ ಹೆಚ್ಚು ಕಷ್ಟಪಡಬೇಕಿಲ್ಲ. ಇದೀಗ ಭಾರತೀಯ ರೈಲ್ವೇ ಪ್ರಯಾಣ ಹಾಗೂ ದರ್ಶನದ ಪ್ಯಾಕೇಜ್ ಘೋಷಿಸಿದೆ.
ನವದೆಹಲಿ(ಸೆ.20) ಭಾರತೀಯ ರೈಲ್ವೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಲು ಬಯಸುವರಿಗೆ ಘೋಷಿಸಿರುವ ವಿಶೇಷ ಪ್ಯಾಕೇಜ್ ಆಗಿದೆ. ಮಥುರಾ, ಹರಿದ್ವಾರ, ರಿಷಿಕೇಷ್, ವೈಷ್ಣೋ ದೇವಿ ತೀರ್ಥ ಕ್ಷೇತ್ರಗಳಿಗೆ ಇದೀಗ ಭಕ್ತರು ಸುಲಭವಾಗಿ ಪ್ರಯಾಣ ಹಾಗೂ ದರ್ಶನವನ್ನೂ ಮಾಡಿ ಮರಳಲು ಸಾಧ್ಯವಿದೆ. ಅಕ್ಟೋಬರ್ 17 ರಿಂದ ಈ ಕ್ಷೇತ್ರ ಟೂರ್ ಪ್ಯಾಕೇಜ್ ಆರಂಭಗೊಳ್ಳುತ್ತಿದೆ. ಭಕ್ತರು ಕೇವಲ ರೈಲು ಟಿಕೆಟ್ ಬುಕ್ ಮಾಡಿದರೆ ಸಾಕು, ಪ್ರಯಾಣದ ಜೊತೆಗೆ ದೇವರ ದರ್ಶನವನ್ನೂ ರೈಲ್ವೇ ನೋಡಿಕೊಳ್ಳಲಿದೆ.
ಈ ಟೂರ್ ಪ್ಯಾಕೇಜ್‌ನಲ್ಲಿ ಆಗ್ರಾ, ಮಥುರಾ ಮಾತಾ ವೈಷ್ಣೋ ದೇವಿ, ಹರಿದ್ವಾರ, ರಿಷಿಕೇಷ್‌ಗೆ ಭೇಟಿ ನೀಡಿ ಪವಿತ್ರ ಸ್ಥಳಗಳ ಯಾತ್ರೆ ದೇಗುಲ ದರ್ಶನವನ್ನು ರೈಲ್ವೇ ಮಾಡಲಿದೆ. ಆಗ್ರಾದಲ್ಲಿ ತಾಜ್ ಮಹಲ್ ಹಾಗೂ ಆಗ್ರಾ ಕೋಟೆಗೆ ಭಕ್ತರನ್ನು ಕರೆದುಕೊಂಡುಹೋಗಲಾಗುತ್ತಿದೆ. ಕೃಷ್ಣ ಜನ್ಮಸ್ಥಾನ ಮಥುರಾ ದೇಗುಲ, ಹರಿದ್ವಾರದ ಹರ್‌ಕಿ ಪೌರಿ ಬಳಿ ಗಂಗಾ ಆರತಿ, ರಿಷಿಕೇಷದಲ್ಲಿ ರಾಮ್ ಜುಲಾ ಹಾಗೂ ಲಕ್ಷ್ಣಣ್ ಜುಲಾ ಸ್ಥಳಗಳಿಗೆ ಭಕ್ತರು ಬೇಟಿ ನೀಡಿ ದರ್ಶನ ಪಡೆಯಲು ಸಾಧ್ಯವಿದೆ.
ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್ ನಂ.1, ಇಲ್ಲಿದೆ ಅತೀ ಹೆಚ್ಚು ಗಳಿಕೆ ಹೊಂದಿರುವ ಟಾಪ್ 5 ರೈಲು!
ಈ ವಿಶೇಷ ಟೂರ್ ಪ್ಯಾಕೇಜ್ 9 ರಾತ್ರಿ ಹಾಗೂ 10 ದಿನಗಳ ಪ್ರಯಾಣವಾಗಿದೆ. ಇದು ಸ್ಲೀಪರ್ ಕ್ಲಾಸ್(ಎಕಾನಮಿ) ಕೋಚ್, ಪ್ರತಿ ಟಿಕೆಟ್ ಬೆಲೆ 17,940 ರೂಪಾಯಿ. ಇನ್ನು 5 ರಿಂದ 11 ವರ್ಷದ ಮಕ್ಕಳಿಗೆ 16,820 ರೂಪಾಯಿ ಎಂದು ನಿಗಧಿಪಡಿಲಾಗಿದೆ. ಇನ್ನು ಸ್ಟಾಂಡರ್ಡ್ ಎಸಿ(3rd ಕ್ಲಾಸ್) ಟಿಕೆಟ್ ಬೆಲೆ 29,380 ರೂಪಾಯಿ. ಸ್ಟಾಂಡರ್ಡ್ ಎಸಿ ಕೋಚ್‌ನಲ್ಲಿ ಮಕ್ಕಳ ಟಿಕೆಟ್ ಬೆಲೆ 28,070 ರೂಪಾಯಿ. ಕಂಫರ್ಟ್ ಕ್ಲಾಸ್ ಎಸಿ(2 ಕ್ಲಾಸ್) ಟಿಕೆಟ್ ಬೆಲೆ 38,770 ರೂಪಾಯಿ. ಮಕ್ಕಳಿಗೆ 37,200 ರೂಪಾಯಿ.
ಟೂರ್ ನಿಗದಿ ದಿನಾಂಕದಿಂದ 15 ದಿನ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ 250 ರೂಪಾಯಿ ಕಡಿತ ಮಾಡಿ ಉಳಿದ ಹಣ ಖಾತೆಗೆ ಜಮೆ ಮಾಡಲಾಗುತ್ತದೆ. 8 ರಿಂದ 14 ದಿನ ಇರುವಾಗ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಟಿಕೆಟ್‌ನಿಂದ ಶೇಕಡಾ 25ರಷ್ಟು ಕಡಿತಗೊಳ್ಳಲಿದೆ. 4 ರಿಂದ 7 ದಿನ ಇರುವಾಗ ಟಿಕೆಟ್ ರದ್ದು ಮಾಡಿದರೆ ಟಿಕೆಟ್ ಮೊತ್ತದ ಶೇಕಡಾ 50 ರಷ್ಟು ಮೊತ್ತ ಬುಕಿಂಗ್ ಮಾಡಿದರಿಗೆ ಹಿಂದಿರುಗಿಸಲಾಗುತ್ತದೆ. ಆದರೆ ಪ್ರಯಾಣ ದಿನಾಂಕದ 4 ದಿನ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಯಾವುದೇ ಮೊತ್ತ ಹಿಂದಿರುಗಿಸಲಾಗುವುದಿಲ್ಲ.
ಈ ರೈಲು ನಿಲ್ದಾಣದಲ್ಲಿ ವರ್ಷದ 15 ದಿನ ಮಾತ್ರ ಟ್ರೈನ್ ನಿಲುಗಡೆ, ಇನ್ನುಳಿದ ದಿನ ಹಾಳುಕೊಂಪೆ!