ನವದೆಹಲಿ(ಡಿ.15); ವಿಪಕ್ಷಗಳು ಚಳಿಗಾಲ ಅಧಿವೇಶನಕ್ಕಾಗಿ ಕಾಯುತ್ತಿತ್ತು. ಕಾರಣ ಕೃಷಿ ಮಸೂದೆ ವಿರೋಧಿಸಿ ನಡೆಯುುತ್ತಿರುವ ಹೋರಾಟವನ್ನೇ ಅಸ್ತ್ರವಾಗಿಸಿಕೊಂಡ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನಕ್ಕೆ ವಿರೋಧ ಪಕ್ಷಗಳು ಸಜ್ಜಾಗಿತ್ತು. ಆದರೆ ಕೇಂದ್ರ ಸಂಸತ್ತಿನ ಚಳಿಗಾಲದ ಅಧಿವೇಶವನ್ನೇ ರದ್ದು ಮಾಡಿದೆ.

ರೈತರೊಂದಿಗೆ ಮೋದಿ ಮಾತುಕತೆ; ಅನ್ನದಾತನ ಹಾದಿತಪ್ಪಿಸುತ್ತಿದೆ ವಿಪಕ್ಷ ಎಂದ ಪ್ರಧಾನಿ!.

ಕೊರೋನಾ 2ನೇ ಅಲೆ ಎದ್ದಿರುವ ಕಾರಣ ಈ ಬಾರಿಯ ಚಳಿಗಾಲದ ಅಧಿವೇಶನ ರದ್ದು ಮಾಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಮಾದ್ ಜೋಶಿ ಹೇಳಿದ್ದಾರೆ.  ಸರ್ವ ಪಕ್ಷಗಳು ಕೊರೋನಾ ಕಾರಣ ಚಳಿಗಾಲದ ಅಧಿವೇಶನ ರದ್ದು ಮಾಡಲು ಒಪ್ಪಿಕೊಂಡಿದೆ.  ಜನವರಿಯಲ್ಲಿ ಬಜೆಟ್ ಕಲಾಪ ನಡೆಯಲಿದೆ ಎಂದು ಜೋಶಿ ಹೇಳಿದ್ದಾರೆ.

ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಚರ್ಚಿಸಲು ಚಳಿಗಾಲದ ಅಧಿವೇಶನ ನಡೆಸಬೇಕು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೇಂದ್ರಕ್ಕೆ ಪತ್ರ ಬರೆದಿದ್ದರು. ಈ ಕುರಿತು ಉತ್ತರಿಸಿದ ಜೋಶಿ, ಸದ್ಯ 2ನೇ ಕೊರೋನಾ ಅಲೆ ಇದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಚಳಿಗಾಲದ ಅಧಿವೇಶನ ರದ್ದುಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ರೈತ ಹೋರಾಟದಲ್ಲಿ 'ಕೈ' ಹಗರಣ ಘಾಟು, 7 ಉದ್ಯಮಿಗಳ ಜೇಬು ತುಂಬಿಸಿದ ನೋಟು; ಡಿ.15ರ ಟಾಪ್ 10 ಸುದ್ದಿ!.

ಕೊರೋನಾ ಸಂಬಂಧಿಸಿದಂತೆ ಚಳಿಗಾಲ ಅತ್ಯಂತ ಎಚ್ಚರವಾಗಿಬೇಕಿದೆ. ಚಳಿಗಾಲದಲ್ಲಿ ಕೊರೋನಾ 2ನೇ ಅಲೆಯನ್ನು ತಡೆಯುವಲ್ಲಿ ಯಶಸ್ವಿಯಾದರೆ, ವೈರಸ್ ನಿಯಂತ್ರಣ ಸಾಧ್ಯವಿದೆ ಎಂದು ಜೋಶಿ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ ಹೇಳಿಕೆಗೆ ಕಾಂಗ್ರೆಸ್ ಕಂಡಾಮಂಡಲವಾಗಿದೆ. ಕೇಂದ್ರ ಸರ್ಕಾರ ತಮ್ಮನ್ನು ಸಂಪರ್ಕ ಮಾಡಿಲ್ಲ. ಯಾವುದೇ ಪಕ್ಷವಾಗಿ ನಿರ್ಧಾರ ತೆಗೆದುಕೊಂಡಿದೆ. ಇದು ಸರಿಯಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.