ರೈತರೊಂದಿಗೆ ಮೋದಿ ಮಾತುಕತೆ; ಅನ್ನದಾತನ ಹಾದಿತಪ್ಪಿಸುತ್ತಿದೆ ವಿಪಕ್ಷ ಎಂದ ಪ್ರಧಾನಿ!

First Published Dec 15, 2020, 5:27 PM IST

ಕೃಷಿ ಮಸೂದೆ ವಿರೋಧಿಸಿ ರೈತರ ಪ್ರತಿಭಟನೆ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ದಿನದಿಂದ ದಿನಕ್ಕೆ ಪ್ರತಿಭಟನೆ ಕಾವು ಹೆಚ್ಚಾಗುತ್ತಿದೆ. ಕೇಂದ್ರ ಸರ್ಕಾರ ನಡೆಸಿದ ಹಲವು ಸುತ್ತಿನ ಮಾತುಕತೆಗಳು ವಿಫಲಗೊಂಡಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೆಲ ರೈತರ ಜೊತೆ ಮಾತನಾಡಿದ್ದಾರೆ.

ಕೇಂದ್ರದ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಜೋರಾಗುತ್ತಿದೆ. ಕಾಂಗ್ರೆಸ್, ಎಡಪಕ್ಷಗಳು ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಂದೋಲನದಲ್ಲಿ ಧುಮುಕಿದೆ.

ದೆಹಲಿ ಗಡಿ ಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇಷ್ಟೇ ಅಲ್ಲ ಬೇಡಿಕೆಗಳ ಪಟ್ಟಿ ಕೃಷಿ ಕ್ಷೇತ್ರ ಮಾತ್ರವಲ್ಲ, ಕೃಷಿಯಾಚೆಗೂ ವಿಸ್ತರಿಸುತ್ತಿದೆ

ರೈತರ ಪ್ರತಿಭಟನೆ ನಡುವೆ ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ನ ಕಚ್‌ನಲ್ಲಿ ಕೆಲ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕಲ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

ಕಚ್‌ನಲ್ಲಿ ನವೀಕರಿಸಬಹುದಾದ ಇಂಧನ ಪಾರ್ಕ್ ಶಿಲಾನ್ಯಾಸ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಶಿಲನ್ಯಾಸ ಮಾಡಿದ ಮೋದಿ, ರೈತರ ಜೊತೆ ಮಾತನಾಡಿದ್ದಾರೆ.

ಕೇಂದ್ರ ತಂದಿರುವ ಕೃಷಿ ಮಸೂದೆಯಿಂದ ಯಾವ ರೈತರಿಗೂ ಸಮಸ್ಯೆ ಇಲ್ಲ, ಇದರಿಂದ ಲಾಭವಿದೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ರೈತರ ಹಾದಿ ತಪ್ಪಿಸುತ್ತಿದೆ ಎಂದು ರೈತರ ಜೊತೆಗಿನ ಮಾತುಕತೆಯಲ್ಲಿ ಮೋದಿ ಹೇಳಿದ್ದಾರೆ

ಯುಪಿಎ ಸರ್ಕಾರವಿದ್ದಾಗ, ಇದೇ ಕಾಂಗ್ರೆಸ್ ಹಾಗೂ ಶರದ್ ಪವಾರ್ ಕೃಷಿ ಮಸೂದೆಯನ್ನು ಬೆಂಬಲಿಸಿದ್ದರು. ಇದೀಗ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಕಾಲಕ್ಕೆ ತಕ್ಕಂತೆ, ಪರಿಸ್ಥಿತಿಗೆ ಅನುಗುಣವಾಗಿ ದ್ವಂಧ್ವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.

ದಶಕಗಳಿಂದ ರೈತರು ಅನುಭವಿಸುತ್ತಿರುವ ಸಂಕಷ್ಟ, ಮಧ್ಯವರ್ತಿಗಳ ವಸೂಲಿ ಸೇರಿದಂತೆ ಹಲವು ಸಮಸ್ಯೆಗಳನ್ನು ರೈತರು ಅನುಭವಿಸಿದ್ದಾರೆ. ರೈತರ ಸಂಕಷ್ಟಗಳಿಗೆ ಹೊಸ ಮಸೂದೆ ನೆರವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಳೆದ ತಿಂಗಳು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೃಷಿ ಮಸೂದೆಗೆ ಬೆಂಬಲ ನೀಡುವಂತೆ ಕೋರಿದ್ದರು. ಈ ರೇಡಿಯೋ ಕಾರ್ಯಕ್ರಮದ 3 ದಿನಗಳ ಬಳಿಕ ರೈತರು ದಿಲ್ಲಿ ಚಲೋ ಪ್ರತಿಭಟನೆ ಆರಂಭಿಸಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?