ಕಣಿವೆಯಲ್ಲಿ ಪ್ರೀಪೇಯ್ಡ್ ಮೊಬೈಲ್, ಎಸ್ಎಂಎಸ್ ಸೇವೆ ಮತ್ತೆ ಆರಂಭ!

ಕಣಿವೆ ಮೇಲಿನ ನಿರ್ಬಂಧಗಳನ್ನು ಒಂದೊಂದಾಗಿ ಹಿಂಪಡೆಯುತ್ತಿರುವ ಕೇಂದ್ರ| ಪ್ರಿಪೇಯ್ಡ್ ಮೊಬೈಲ್, ಎಸ್ಎಂಎಸ್ ಹಾಗೂ ವಾಯ್ಸ್ ಕಾಲ್ ಸೇವೆ ಪುನಾರಂಭ| ಕಣಿವೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದೆ ಎಂದ ಕೇಂದ್ರ|

Prepaid Mobile Connection and SMS Restored In Jammu and Kashmir

ಶ್ರೀನಗರ(ಜ.18): ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಾಶ್ಮೀರದಲ್ಲಿ ಹೇರಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಒಂದೊಂದಾಗಿ ಹಿಂಪಡೆಯುತ್ತಿದೆ.

ಸುಮಾರು ಐದು ತಿಂಗಳ ನಂತರ ಜಮ್ಮು – ಕಾಶ್ಮೀರದಲ್ಲಿ ಪ್ರಿಪೇಯ್ಡ್ ಮೊಬೈಲ್, ಎಸ್ಎಂಎಸ್ ಹಾಗೂ ವಾಯ್ಸ್ ಕಾಲ್ ಸೇವೆಯನ್ನು ಪುನಾರಂಭಿಸಲಾಗಿದೆ. 

ಕೇಂದ್ರಾಡಳಿತ ಪ್ರದೇಶದ ಎಲ್ಲಾ ಸ್ಥಳೀಯ ಪ್ರಿಪೇಯ್ಡ್ ಮೊಬೈಲ್ ಸಂಪರ್ಕಕ್ಕಾಗಿ ಧ್ವನಿ ಕರೆಗಳು ಮತ್ತು ಎಸ್‌ಎಂಎಸ್ ಅನ್ನು ಮರುಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇಂಟರ್ನೆಟ್ ಪಡೆಯುವುದು ಹಕ್ಕು: ಕಣಿವೆಯ ಸ್ಥಿತಿ ಪರಾಮರ್ಶೆಗೆ ಸುಪ್ರೀಂ ಸೂಚನೆ!

ಕಾಶ್ಮೀರದ ಬಂಡಿಪೋರಾ ಮತ್ತು ಕುಪ್ವಾರಾ ಜಿಲ್ಲೆಗಳು ಮತ್ತು ಜಮ್ಮುವಿನ ಎಲ್ಲಾ 10 ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳೊಂದಿಗೆ 2ಜಿ ಇಂಟರ್ನೆಟ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ. 

ಕಣಿವೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದು, ಮೊಬೈಲ್ ಸೇವೆಗಳ ಮೇಲಿನ ನಿರ್ಬಂಧವನ್ನು ಇಂದಿನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಕಾಶ್ಮೀರ ಕಣಿವೆಯ ಎಲ್ಲಾ 10 ಜಿಲ್ಲೆಗಳಲ್ಲಿ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಸೇವೆಗಳು ದೊರೆಯಲಿವೆ.

Latest Videos
Follow Us:
Download App:
  • android
  • ios