ರಾಜಕೀಯ ನಾಯಕರ ನಿಲುವು ಸತ್ಯದ ಕಡೆಗೆ ಇರಲಿ  ಕೇಜ್ರಿವಾಲ್‌ಗೆ ಸಿಂಗಾಪುರ ವಿದೇಶಾಂಕ ಸಚಿವರಿಂದ ತಿರುಗೇಟು ಸಿಂಗಾಪುರ ತಳಿಯಿಂದ ಭಾರತಕ್ಕೆ 3ನೇ ಅಲೆ ಎಂದಿದ್ದ ಕೇಜ್ರಿವಾಲ್‌

ನವದೆಹಲಿ(ಮೇ.19): ಕೊರೋನಾ ವೈರಸ್ ಪತ್ತೆಯಾದ ಬಳಿಕ ಈಗಾಗಲೇ ಹಲವು ಬಾರಿ ರೂಪಾಂತರಗೊಂಡಿದೆ. ಹೆಚ್ಚು ಅಪಾಯಕಾರಿ ಡಬಲ್ ಮ್ಯೂಟೇಶನ್ ವೈರಸ್, ಬ್ರೆಜಿಲ್ ಮ್ಯೂಟೇಶನ್ ವೈರಸ್, ಭಾರತ ವೈರಸ್ ಸೇರಿದಂತೆ ಕೆಲ ವೈರಸ್ ತಳಿಗಳು ಪತ್ತೆಯಾಗಿದೆ. ಇದರ ನಡುವೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಿಂಗಾಪುರದ ತಳಿಯಿಂದ ಭಾರತಕ್ಕೆ 3ನೇ ಅಲೆ ಭೀತಿ ಎದುರಾಗಿದೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಇದೀಗ ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸಿಂಗಾಪುರ ವಿದೇಶಾಂಗ ಸಚಿವರು ನಾಯಕರು ಸತ್ಯಕ್ಕೆ ಪ್ರಾಶಸ್ತ್ಯ ನೀಡಬೇಕು ಎಂದು ಕಿವಿ ಹಿಂಡಿದ್ದಾರೆ.

 'ಸಿಂಗಾಪುರ ತಳಿ' ವಿವಾದ: ಕೇಜ್ರೀವಾಲ್‌ಗೆ ರಾಯಭಾರ ಕಚೇರಿಯ ಗುದ್ದು!

ಸಿಂಗಾಪುರ ವಿದೇಶಾಂಕ ಸಚಿವ ವಿವಿಯನ್ ಬಾಲಕೃಷ್ಣ ಖಡಕ್ ತಿರುಗೇಟು ನೀಡಿದ್ದಾರೆ. ರಾಜಕೀಯ ನಾಯಕರು ಮಾತನಾಡುವಾಗ ಸತ್ಯ ತಿಳಿದು ಹೇಳಿಕೆ ನೀಡಬೇಕು. ಸಿಂಗಾಪುರ ವೈರಸ್ ಇಲ್ಲ ಎಂದು ಬಾಲಕೃಷ್ಣನ್ ಟ್ವೀಟ್ ಮಾಡಿದ್ದಾರೆ.

Scroll to load tweet…

ಅರವಿಂದ್ ಕೇಜ್ರಿವಾಲ್ ಇತ್ತೀಚೆಗೆ ಭಾರತಕ್ಕೆ ಕೊರೋನಾ ಮೂರನೇ ಅಲೆ ಭೀತಿ ಎದುರಾಗಿದೆ. ಇದಕ್ಕೆ ಕಾರಣ ಸಿಂಗಾಪುರದಲ್ಲಿ ಪತ್ತೆಯಾದ B.1.617 ವೈರಸ್ ತಳಿ. ಇದು ಸಿಂಗಾಪುರದ ಮಕ್ಕಳಲ್ಲಿ ಹೆ್ಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತ ಭಾರತದಲ್ಲಿ ತಜ್ಞರು 3ನೇ ಕೊರೋನಾ ಅಲೆ ಮಕ್ಕಳಿಗೆ ಅಪಾಯಕಾರಿ ಎಂದಿದ್ದಾರೆ. ಹೀಗಾಗಿ ಸಿಂಗಾಪುರ ತಳಿಯಿಂದ ಭಾರತದಲ್ಲಿ 3ನೇ ಅಲೆ ಭೀತಿ ಎದುರಾಗಿದೆ. ಹೀಗಾಗಿ ಸಿಂಗಾಪುರ ವಿಮಾನಗಳಿಗೆ ನಿರ್ಬಂಧ ಹೇರಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದರು.

ಸಿಂಗಾಪುರದಲ್ಲಿ ಪತ್ತೆಯಾದ ವೈರಸ್‌ನಿಂದ ಭಾರತಕ್ಕೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ಸಿಎಂ!

ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಸಿಂಗಾಪುರ ರಾಯಭಾರಿ ಕಚೇರಿ ಪ್ರತ್ಯುತ್ತರ ನೀಡಿದೆ. ಭಾರತದಲ್ಲಿ ಪತ್ತೆಯಾದ B.1.617 ವೈರಸ್ ತಳಿ ಸಿಂಗಾಪರದಲ್ಲಿ ಮಕ್ಕಳಲ್ಲಿ ಪತ್ತೆಯಾಗಿದೆ. ಆದರೆ ಸಿಂಗಾಪುರದಲ್ಲಿ ರೂಪಾಂತರಗೊಂಡ ವೈರಸ್ ಪತ್ತೆಯಾಗಿಲ್ಲ ಎಂದು ಅರವಿಂದ್ ಕೇಜ್ರಿವಾಲ್‌ಗೆ ಉತ್ತರ ನೀಡಿತ್ತು. 

ಹೇಳಿಕೆ ನೀಡಿದ ದೆಹಲಿ ಸಿಎಂ ಇದೀಗ ಪೇಚಿಗೆ ಸಿಲುಕಿದ್ದಾರೆ. ವಿದೇಶಾಂಗ ಸಚಿವರು, ಸಿಂಗಾಪುರ ರಾಯಭಾರಿ ಕಚೇರಿ ತಿರುಗೇಟು ನೀಡಿದ ಬೆನ್ನಲ್ಲೇ ಇತ್ತ ಬೆಜಿಪಿ ಕೂಡ ಕೇಜ್ರಿವಾಲ್‌ ಕಿವಿ ಹಿಂಡುತ್ತಿದೆ.